‘ದೇವರ ಪಾತ್ರದಲ್ಲಿ ದೇವ್ರನ್ನೇ ನೋಡಲು ಕಾಯ್ತಿದೀನಿ’: ಪುನೀತ್​ ಬಗ್ಗೆ ಯುವ ರಾಜ್​ಕುಮಾರ್​ ಭಾವುಕ ನುಡಿ

Puneeth Rajkumar | Lucky Man Movie: ‘ಲಕ್ಕಿ ಮ್ಯಾನ್​’ ಸಿನಿಮಾದ ಆಡಿಯೋ ರಿಲೀಸ್​ ಕಾರ್ಯಕ್ರಮದಲ್ಲಿ ಯುವ ರಾಜ್​ಕುಮಾರ್​ ಮಾತನಾಡಿದ್ದಾರೆ. ಪುನೀತ್​ ರಾಜ್​ಕುಮಾರ್​ ಬಗ್ಗೆ ಅವರು ಹೇಳಿದ ಭಾವುಕ ನುಡಿಗಳು ಇಲ್ಲಿವೆ..

TV9kannada Web Team

| Edited By: Madan Kumar

Aug 24, 2022 | 9:28 AM

ನಟ ಪುನೀತ್​ ರಾಜ್​ಕುಮಾರ್​ (Puneeth Rajkumar) ನಮ್ಮೊಂದಿಗೆ ಇಲ್ಲ ಎಂಬ ನೋವು ಎಲ್ಲರಲ್ಲೂ ಇದೆ. ಅವರು ನಟಿಸಿದ ಕೊನೇ ಸಿನಿಮಾ ‘ಲಕ್ಕಿ ಮ್ಯಾನ್​’ (Lucky Man) ಸೆಪ್ಟೆಂಬರ್​ 9ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ಆಡಿಯೋ ರಿಲೀಸ್​ ಕಾರ್ಯಕ್ರಮ​ ಮಂಗಳವಾರ (ಆಗಸ್ಟ್​ 23) ಸಂಜೆ ನಡೆಯಿತು. ಅದಕ್ಕೆ ಅನೇಕ ಗಣ್ಯರು ಹಾಜರಿ ಹಾಕಿದ್ದರು. ರಾಘವೇಂದ್ರ ರಾಜ್​ಕುಮಾರ್ ಅವರ ಪುತ್ರರಾದ ವಿನಯ್​ ರಾಜ್​ಕುಮಾರ್​, ಯುವ ರಾಜ್​ಕುಮಾರ್​ (Yuva Rajkumar) ಕೂಡ ತಮ್ಮ ಮಾತುಗಳನ್ನು ಹಂಚಿಕೊಂಡರು. ‘ಈ ಸಿನಿಮಾದ ಟೀಸರ್​ನಲ್ಲಿ ಗಾಡ್​ ಈಸ್​ ಅರೈವಿಂಗ್ ಅಂತ ಬರೆದಿದೆ. ದೇವರ ಪಾತ್ರದಲ್ಲಿ ದೇವರನ್ನೇ ನೋಡಲು ನಾನು ಕಾಯುತ್ತಾ ಇದ್ದೀನಿ’ ಎಂದು ಯುವ ರಾಜ್​ಕುಮಾರ್​ ಹೇಳಿದರು. ಈ ಚಿತ್ರದ ವಿಶೇಷ ಹಾಡಿನಲ್ಲಿ ಪುನೀತ್​ ಜೊತೆ ಪ್ರಭುದೇವ ಕೂಡ ಹೆಜ್ಜೆ ಹಾಕಿದ್ದಾರೆ.

 

Follow us on

Click on your DTH Provider to Add TV9 Kannada