ಕೆಂಪಣ್ಣ ನೇತೃತ್ವದ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಇಂದು ಸಿದ್ದರಾಮಯ್ಯರನ್ನು ಭೇಟಿಯಾದರು
ಸಿದ್ದರಾಮಯ್ಯನವರ ಅಧಿಕೃತ ನಿವಾಸದಲಿ ನಡೆದ ಮಾತುಕತೆಯಲ್ಲಿ ಏನೆಲ್ಲ ಚರ್ಚಿಸಲಾಯಿತು ಅನ್ನೋದು ಇನ್ನೂ ಬೆಳಕಿಗೆ ಬಂದಿಲ್ಲವಾದರೂ ಭೇಟಿ ಮಾತ್ರ ತೀವ್ರ ಕುತೂಹಲ ಕೆರಳಿಸಿದೆ.
ಬೆಂಗಳೂರು: ಗುತ್ತಿಗೆದಾರರು ತಾವು ನಡೆಸಿದ ಕಾಮಗಾರಿಗಳ (works) ಬಿಲ್ ಗಳನ್ನು ಕ್ಲೀಯರ್ ಮಾಡಿಸಿಕೊಳ್ಳಲು ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಮತ್ತಯ ಮಧ್ಯವರ್ತಿಗಳಿಗೆ ಶೇಕಡಾ 40 ರಷ್ಟು ಲಂಚ (ಕಮೀಷನ್) ನೀಡುತ್ತಿರುವುದು ನಿಜ ಎಂದು ಹೇಳಿದ್ದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ (Kempanna) ಅವರು ಬುಧವಾರದಂದು ಸಂಘದ ಸುಮಾರು 30 ಪದಾಧಿಕಾರಿಗಳೊಂದಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು (Siddaramaiah) ಭೇಟಿಮಾಡಿ ಮಾತುಕತೆ ನಡೆಸಿದರು. ಸಿದ್ದರಾಮಯ್ಯನವರ ಅಧಿಕೃತ ನಿವಾಸದಲಿ ನಡೆದ ಮಾತುಕತೆಯಲ್ಲಿ ಏನೆಲ್ಲ ಚರ್ಚಿಸಲಾಯಿತು ಅನ್ನೋದು ಇನ್ನೂ ಬೆಳಕಿಗೆ ಬಂದಿಲ್ಲವಾದರೂ ಭೇಟಿ ಮಾತ್ರ ತೀವ್ರ ಕುತೂಹಲ ಕೆರಳಿಸಿದೆ.
Latest Videos
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?

