ಇದು ಅತ್ಯಂತ ಭ್ರಷ್ಟ ಸರ್ಕಾರ ಎಂದರು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ!
ಎಲ್ಲರೂ ಭ್ರಷ್ಟರಾಗಿರುವುದರಿಂದ ಯಾವನು ಜಾಸ್ತಿ, ಯಾವನು ಕಮ್ಮಿ ಅಂತ ಶ್ರೇಣಿಕರಿಸುವುದು ಆಗಲಾರದು, ಕಮೀಷನ್ ವಿಷಯ ಬಹಿರಂಗಗೊಂಡ ನಂತರವೂ ಶಾಸಕರು ಕಮೀಶನ್ ಕೇಳುತ್ತಿದ್ದಾರೆ ಎಂದು ಕೆಂಪಣ್ಣ ಆರೋಪಿಸಿದರು.
ಬೆಂಗಳೂರು: ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ (Kempanna) ಅವರು ಬುಧವಾರ ತಮ್ಮ ನಿಯೋಗ ಜೊತೆ ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡಿ ರಾಜ್ಯದಲ್ಲಿ ಆಡಳಿತದಲ್ಲಿರೋದು ಅತ್ಯಂತ ಭ್ರಷ್ಟ ಸರ್ಕಾರ ಎಂದು ಬೆಂಕಿಯುಗುಳಿದರು. ಎಲ್ಲ ಶಾಸಕರು ಭ್ರಷ್ಟರು (corrupt) ಮತ್ತು ನಾಚಿಕೆ ಮಾನ ಮರ್ಯಾದೆ ಬಿಟ್ಟು ಕಮೀಶನ್ (commission) ಕೇಳುತ್ತಾರೆ. ಎಲ್ಲರೂ ಭ್ರಷ್ಟರಾಗಿರುವುದರಿಂದ ಯಾವನು ಜಾಸ್ತಿ, ಯಾವನು ಕಮ್ಮಿ ಅಂತ ಶ್ರೇಣಿಕರಿಸುವುದು ಆಗಲಾರದು, ಕಮೀಷನ್ ವಿಷಯ ಬಹಿರಂಗಗೊಂಡ ನಂತರವೂ ಶಾಸಕರು ಕಮೀಶನ್ ಕೇಳುತ್ತಿದ್ದಾರೆ ಎಂದು ಕೆಂಪಣ್ಣ ಆರೋಪಿಸಿದರು.
Latest Videos