Katrina Kaif: ‘ಫಸ್ಟ್​ ನೈಟ್​ ಆಗಬೇಕಂತಲೇ ಏನಿಲ್ಲ, ಫಸ್ಟ್​ ಡೇ ಕೂಡ ಆಗಬಹುದು’; ಕತ್ರಿನಾ ಕೈಫ್​ ಬೋಲ್ಡ್​ ಮಾತು 

Koffee With Karan | Katrina Kaif: ಕತ್ರಿನಾ ಕೈಫ್​, ಸಿದ್ಧಾಂತ್​ ಚತುರ್ವೇದಿ ಹಾಗೂ ಇಶಾನ್​ ಖಟ್ಟರ್​ ಒಟ್ಟಾಗಿ ‘ಕಾಫಿ ವಿತ್​ ಕರಣ್​’ ಶೋಗೆ ಬಂದಿದ್ದಾರೆ. ಈ ವೇಳೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗಿದೆ.

Katrina Kaif: ‘ಫಸ್ಟ್​ ನೈಟ್​ ಆಗಬೇಕಂತಲೇ ಏನಿಲ್ಲ, ಫಸ್ಟ್​ ಡೇ ಕೂಡ ಆಗಬಹುದು’; ಕತ್ರಿನಾ ಕೈಫ್​ ಬೋಲ್ಡ್​ ಮಾತು 
ಕರಣ್ ಜೋಹರ್, ಕತ್ರಿನಾ ಕೈಫ್
Follow us
TV9 Web
| Updated By: ಮದನ್​ ಕುಮಾರ್​

Updated on: Sep 06, 2022 | 9:43 AM

ಸಾಕಷ್ಟು ಬೋಲ್ಡ್​ ಮಾತುಗಳಿಂದಲೇ ‘ಕಾಫಿ ವಿತ್​ ಕರಣ್​’ (Koffee With Karan) ಶೋ ಫೇಮಸ್​ ಆಗಿದೆ. ಈಗಾಗಲೇ ಅನೇಕ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಬಂದ ಎಲ್ಲ ಅತಿಥಿಗಳಿಗೂ ನಿರೂಪಕ ಕರಣ್​ ಜೋಹರ್​ (Karan Johar) ಅವರು ನೇರವಾದ ಪ್ರಶ್ನೆಗಳನ್ನು ಕೇಳದೇ ಇರುವುದಿಲ್ಲ. ಈಗ ಈ ಕಾರ್ಯಕ್ರಮದ 7ನೇ ಸೀಸನ್​ ಪ್ರಸಾರ ಆಗುತ್ತಿದೆ. ಇಷ್ಟು ವರ್ಷಗಳ ಕಾಲ ಟಿವಿಯಲ್ಲಿ ಪ್ರಸಾರವಾದ ಈ ಶೋ ಇದೇ ಮೊದಲ ಬಾರಿಗೆ ಒಟಿಟಿಯನ್ನು (ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​) ನೇರವಾಗಿ ಪ್ರಸಾರ ಕಾಣುತ್ತಿದೆ. ಹಾಗಾಗಿ ಬೋಲ್ಡ್​ ಮಾತುಕಥೆಗಳು ಕೊಂಚ ಜಾಸ್ತಿಯೇ ಇವೆ ಎನ್ನಬಹುದು. ಈಗ ನಟಿ ಕತ್ರಿನಾ ಕೈಫ್​ (Katrina Kaif) ಅವರಿಗೂ ಕರಣ್​ ಜೋಹರ್​ ಅವರು ಆ ರೀತಿಯ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಕತ್ರಿನಾ ಕಡೆಯಿಂದ ಅಷ್ಟೇ ಬೋಲ್ಡ್​ ಆದಂತಹ ಉತ್ತರ ಬಂದಿದೆ.

‘ಕಾಫಿ ವಿತ್​ ಕರಣ್​’ 7ನೇ ಸೀಸನ್​ನ ಮೊದಲ ಎಪಿಸೋಡ್​ನಲ್ಲಿ ಆಲಿಯಾ ಭಟ್​ ಮತ್ತು ರಣವೀರ್​ ಸಿಂಗ್​ ಭಾಗವಹಿಸಿದ್ದರು. ಆಗ ಫಸ್ಟ್​ ನೈಟ್​ ಬಗ್ಗೆ ಪ್ರಸ್ತಾಪ ಆಗಿತ್ತು. ‘ಮೊದಲ ರಾತ್ರಿ ಅಂತ ಏನೂ ಇರಲ್ಲ. ಯಾಕೆಂದರೆ ಮದುವೆ ದಿನ ನಾವು ಸುಸ್ತಾಗಿರುತ್ತೇನೆ’ ಎಂದು ಆಲಿಯಾ ಭಟ್​ ಹೇಳಿದ್ದರು. ಆ ಮಾತನ್ನೇ ಇಟ್ಟುಕೊಂಡು ಈಗ ಕತ್ರಿನಾ ಕೈಫ್​ ಬಳಿಯೂ ಕರಣ್​ ಜೋಹರ್​ ಚರ್ಚೆ ಮಾಡಿದ್ದಾರೆ.

ಇದನ್ನೂ ಓದಿ
Image
ಸೆಲೆಬ್ರಿಟಿಗಳ ಲೈಂಗಿಕ ಜೀವನದ ಬಗ್ಗೆ ಮಾತನಾಡುವ ಕರಣ್​ ಜೋಹರ್​ಗೆ ಶೋನಲ್ಲೇ ರೋಸ್ಟ್​ ಮಾಡಿದ ಆಮಿರ್ ಖಾನ್
Image
Nayanthara: ಸಮಂತಾ ಎದುರು ನಯನತಾರಾಗೆ ಅವಮಾನ ಮಾಡಿದ ಕರಣ್​ ಜೋಹರ್​; ಸಿಡಿದೆದ್ದ ಫ್ಯಾನ್ಸ್​
Image
Alia Bhatt: ಪ್ರೆಗ್ನೆಂಟ್​ ಆಗಿದ್ದು ಆಲಿಯಾ ಭಟ್​, ಆದರೆ ಸುದ್ದಿ ಕೇಳಿ ಕಣ್ಣೀರು ಹಾಕಿದ್ದು ಕರಣ್​ ಜೋಹರ್​
Image
Karan Johar: ಕರಣ್​ ಜೋಹರ್​ ಮಕ್ಕಳ ವಿಡಿಯೋ ವೈರಲ್​; ವಿಮಾನ ನಿಲ್ದಾಣದಲ್ಲಿ ನಮಸ್ತೆ ಮಾಡೋದು ಕಲಿಸಿದ ನಿರ್ಮಾಪಕ

‘ಯಾವಾಗಲೂ ಮೊದಲ ರಾತ್ರಿಯೇ ಆಗಬೇಕೆಂದೇನೂ ಇಲ್ಲ, ಮೊದಲ ದಿನ ಕೂಡ ಆಗಬಹುದು’ ಎಂದು ಕತ್ರಿನಾ ಕೈಫ್​ ಅವರು ಹೇಳಿದ್ದಾರೆ. ‘ಆಹ್​.. ನನಗೆ ಇದು ಇಷ್ಟ’ ಎಂದು ಕರಣ್​ ಜೋಹರ್​ ಉದ್ಘಾರ ತೆಗೆದಿದ್ದಾರೆ. ಸದ್ಯ ಈ ಸಂಚಿಕೆಯ ಪ್ರೋಮೋ ಹಂಚಿಕೊಳ್ಳಲಾಗಿದೆ. ಸೆಪ್ಟೆಂಬರ್​ 8ರಂದು ಈ ಎಪಿಸೋಡ್​ ಪ್ರಸಾರ ಆಗಲಿದೆ. ಕತ್ರಿನಾ ಕೈಫ್​ ಜೊತೆ ಇಶಾನ್​ ಖಟ್ಟರ್​, ಸಿದ್ಧಾಂತ್​ ಚತುರ್ವೇದಿ ಕೂಡ ಭಾಗಿ ಆಗಿದ್ದಾರೆ.

‘ಫೋನ್​ ಭೂತ್​’ ಸಿನಿಮಾದಲ್ಲಿ ಕತ್ರಿನಾ ಕೈಫ್​, ಸಿದ್ಧಾಂತ್​ ಚತುರ್ವೇದಿ ಹಾಗೂ ಇಶಾನ್​ ಖಟ್ಟರ್​ ಅವರು ನಟಿಸಿದ್ದಾರೆ. ಹಾಗಾಗಿ ಮೂವರೂ ಒಟ್ಟಾಗಿ ‘ಕಾಫಿ ವಿತ್​ ಕರಣ್​’ ಶೋಗೆ ಬಂದಿದ್ದಾರೆ. ಕತ್ರಿನಾ ಕೈಫ್​ ಅವರು ಸಿನಿಮಾಗಳ ಜೊತೆಯಲ್ಲಿ ಈಗ ಕುಟುಂಬದ ಕಡೆಗೂ ಗಮನ ಹರಿಸಿದ್ದಾರೆ. ನಟ ವಿಕ್ಕಿ ಕೌಶಲ್​ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅವರು ಹಾಯಾಗಿ ಸಂಸಾರ ಮಾಡಿಕೊಂಡಿದ್ದಾರೆ. ಹಲವು ಸಿನಿಮಾ ಆಫರ್​ಗಳು ಕೂಡ ಅವರ ಕೈಯಲ್ಲಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ