Gauri Khan: ‘ಶಾರುಖ್​ಗಿಂತ ಆರ್ಯನ್​ ಖಾನ್​ ಹೆಚ್ಚು ಬ್ಯುಸಿ, ಅವನ ಡೇಟ್ಸ್​ ಸಿಗೋದೇ ಕಷ್ಟ​’: ಗೌರಿ ಹೇಳಿದ ಅಚ್ಚರಿ ವಿಷಯ

Aryan Khan: ಆರ್ಯನ್​ ಖಾನ್​ ಅವರಿಗೆ ನಟನೆಗಿಂತಲೂ ಹೆಚ್ಚಾಗಿ ನಿರ್ದೇಶನದಲ್ಲಿ ಆಸಕ್ತಿ ಇದೆ. ಬಿಸ್ನೆಸ್​ ಬಗ್ಗೆಯೂ ಅವರು ಇಂಟರೆಸ್ಟ್​ ತೋರಿಸಿದ್ದಾರೆ. ಈಗ ತಂದೆಗಿಂತಲೂ ಅವರು ಬ್ಯುಸಿ ಆಗಿದ್ದಾರೆ.

Gauri Khan: ‘ಶಾರುಖ್​ಗಿಂತ ಆರ್ಯನ್​ ಖಾನ್​ ಹೆಚ್ಚು ಬ್ಯುಸಿ, ಅವನ ಡೇಟ್ಸ್​ ಸಿಗೋದೇ ಕಷ್ಟ​’: ಗೌರಿ ಹೇಳಿದ ಅಚ್ಚರಿ ವಿಷಯ
ಶಾರುಖ್ ಖಾನ್ ಕುಟುಂಬ
Follow us
ಮದನ್​ ಕುಮಾರ್​
|

Updated on: May 15, 2023 | 10:54 PM

ನಟ ಶಾರುಖ್​ ಖಾನ್​ (Shah Rukh Khan) ಅವರ ಪತ್ನಿ ಗೌರಿ ಖಾನ್​ ಅವರು ತಮ್ಮ ಹೊಸ ಪುಸ್ತಕ ಬಿಡುಗಡೆ ಮಾಡಿದ್ದಾರೆ. ಈ ವೇಳೆ ಅವರು ತಮ್ಮ ಕುಟುಂಬದ ಬಗೆಗಿನ ಒಂದಷ್ಟು ವಿಷಯಗಳ ಕುರಿತು ಮಾತನಾಡಿದ್ದಾರೆ. ಶಾರುಖ್​ ಖಾನ್​ ಮತ್ತು ಗೌರಿ ಖಾನ್​ ದಂಪತಿಯ ಮೊದಲ ಪುತ್ರ ಆರ್ಯನ್​ ಖಾನ್​ (Aryan Khan) ಈಗ ಸಿನಿಮಾ ಮತ್ತು ಬಿಸ್ನೆಸ್​ ಕಡೆಗೆ ಗಮನ ಹರಿಸಿದ್ದಾರೆ. ಈ ಹಿಂದೆ ಡ್ರಗ್ಸ್​ ಪಾರ್ಟಿ ಆರೋಪದಲ್ಲಿ ಜೈಲು ಸೇರಿದ್ದ ಅವರು ನಂತರ ಆರೋಪಮುಕ್ತರಾದರು. ಈಗ ಅವರ ಬಗ್ಗೆ ಗೌರಿ ಖಾನ್​ ಮಾತನಾಡಿದ್ದಾರೆ. ಅಚ್ಚರಿ ಎಂದರೆ ಶಾರುಖ್​ ಖಾನ್​ಗಿಂತಲೂ ಆರ್ಯನ್​ ಖಾನ್ ಹೆಚ್ಚು ಬ್ಯುಸಿ ಆಗಿದ್ದಾರಂತೆ. ಅವರ ಡೇಟ್ಸ್​ ಪಡೆಯುವುದೇ ಕಷ್ಟ ಎಂದು ಗೌರಿ ಖಾನ್​ (Gauri Khan) ಹೇಳಿದ್ದಾರೆ.

ಇಂಟೀರಿಯರ್​ ಡಿಸೈನ್​ ಕುರಿತು ಗೌರಿ ಖಾನ್​ ಅವರು ಒಂದು ಪುಸ್ತಕ ಬರೆದಿದ್ದಾರೆ. ಆ ಪುಸ್ತಕದಲ್ಲಿ ಅವರ ಫ್ಯಾಮಿಲಿ ಫೋಟೋ ಇದೆ. ಅದನ್ನು ಕ್ಲಿಕ್ಕಿಸುವ ಸಲುವಾಗಿ ಕುಟುಂಬದ ಎಲ್ಲರೂ ಬಿಡುವು ಮಾಡಿಕೊಳ್ಳಬೇಕಿತ್ತು. ಶಾರುಖ್​ ಖಾನ್​ ಹಲವು ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದರೂ ಕೂಡ ಫ್ಯಾಮಿಲಿ ಫೋಟೋಶೂಟ್​ಗಾಗಿ ಅವರ ಡೇಟ್ಸ್​ ಸುಲಭವಾಗಿ ಸಿಕ್ಕಿದೆ. ಆದರೆ ಆರ್ಯನ್​ ಖಾನ್​ ಅವರ ಡೇಟ್ಸ್​ ಪಡೆಯುವುದು ಗೌರಿ ಖಾನ್​ಗೆ ಕಷ್ಟವಾಯಿತು. ಹಾಗಾಗಿ ಶಾರುಖ್​ ಖಾನ್​ಗಿಂತಲೂ ಆರ್ಯನ್​ ಖಾನ್​ ಹೆಚ್ಚು ಬ್ಯುಸಿ ಆಗಿದ್ದಾರೆ ಎಂದು ಗೌರಿ ಹೇಳಿದ್ದಾರೆ.

ಇದನ್ನೂ ಓದಿ
Image
₹25 ಕೋಟಿ ನೀಡದಿದ್ದರೆ ಆರ್ಯನ್ ಖಾನ್​​ನ್ನು ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ: ಅಧಿಕಾರಿ ವಿರುದ್ಧ ಸಿಬಿಐ ಕೇಸ್
Image
Sameer Wankhede: ದೇಶಭಕ್ತರಾಗಿದ್ದಕ್ಕಾಗಿ ಈ ಶಿಕ್ಷೆ, ಆರ್ಯನ್ ಖಾನ್​​​ನ್ನು ಬಂಧಿಸಿದ ಸಮೀರ್ ವಾಂಖೆಡೆ ಮೇಲೆ ಸಿಬಿಐ ದಾಳಿ
Image
ಫ್ಯಾಮಿಲಿ ಜೊತೆ ಖುಷಿಖುಷಿಯಾಗಿ ಫೋಟೋಶೂಟ್​ ಮಾಡಿಸಿದ ಶಾರುಖ್​ ಖಾನ್​
Image
Aryan Khan: 25ರ ಪ್ರಾಯದ ಆರ್ಯನ್​ ಖಾನ್​ ಜತೆ 30ರ ನೋರಾ ಫತೇಹಿ ಡೇಟಿಂಗ್​? ಎಲ್ಲೆಲ್ಲೂ ಇವರದ್ದೇ ಗುಸುಗುಸು
View this post on Instagram

A post shared by Gauri Khan (@gaurikhan)

ಬಾಲಿವುಡ್​ನಲ್ಲಿ ಅನೇಕ ಸ್ಟಾರ್​ ಕಿಡ್​ಗಳು ತೆರೆಮೇಲೆ ಮಿಂಚುತ್ತಿದ್ದಾರೆ. ಆದರೆ ಆರ್ಯನ್​ ಖಾನ್​ ಈ ವಿಚಾರದಲ್ಲಿ ಕೊಂಚ ಭಿನ್ನ. ನಟನೆಗಿಂತಲೂ ಹೆಚ್ಚಾಗಿ ಬೇರೆ ವಿಚಾರಗಳಲ್ಲಿ ಅವರಿಗೆ ಆಸಕ್ತಿ ಇದೆ. ನಿರ್ದೇಶನದಲ್ಲಿ ಅವರು ವೃತ್ತಿಜೀವನ ಕಟ್ಟಿಕೊಳ್ಳಲು ನಿರ್ಧರಿಸಿದ್ದಾರೆ. ಇನ್ನು, ಬಿಸ್ನೆಸ್​ ಬಗ್ಗೆಯೂ ಅವರು ಇಂಟರೆಸ್ಟ್​ ತೋರಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಆರ್ಯನ್​ ಖಾನ್​ ಅವರು ಬಟ್ಟೆ ವ್ಯಾಪಾರ ಆರಂಭಿದರು. ಅಂದರೆ, ತಮ್ಮದೇ ಹೊಸ ಬ್ರ್ಯಾಂಡ್​ನ ಕಾಸ್ಟ್ಯೂಮ್​ಗಳನ್ನು ಅವರು ಮಾರುಕಟ್ಟೆಗೆ ಪರಿಚಯಿಸಿದರು. ಆ ಕ್ಷೇತ್ರದಲ್ಲಿ ಅವರಿಗೆ ಭರ್ಜರಿ ಲಾಭ ಆಗುತ್ತಿದೆ.

Shah Rukh Khan: ಆರ್ಯನ್​ ಖಾನ್​ ಬಟ್ಟೆ ವ್ಯಾಪಾರದಲ್ಲಿ ಶಾರುಖ್​ ​ಕೂಡ ಚೌಕಾಸಿ ಮಾಡಲಾಗುತ್ತಿಲ್ಲ; ಅಬ್ಬಬ್ಬಾ ದುಬಾರಿ ಬೆಲೆ

ಸಲ್ಮಾನ್​ ಖಾನ್​, ದೀಪಿಕಾ ಪಡುಕೋಣೆ, ಆಲಿಯಾ ಭಟ್​, ಹೃತಿಕ್​ ರೋಷನ್​, ಸೈಫ್​ ಅಲಿ ಖಾನ್​ ಮುಂತಾದ ಸೆಲೆಬ್ರಿಟಿಗಳು ತಮ್ಮ ಬಟ್ಟೆ ಬ್ರ್ಯಾಂಡ್​ ಹೊಂದಿದ್ದಾರೆ. ಅದಕ್ಕೆ ಆರ್ಯನ್​ ಖಾನ್​ ಕೂಡ ಸೇರ್ಪಡೆ ಆಗಿದ್ದಾರೆ. ಕೇವಲ ಆನ್​ಲೈನ್​ನಲ್ಲಿ ಮಾತ್ರ ಅವರು ಮಾರಾಟ ಮಾಡುತ್ತಿದ್ದಾರೆ. ಆರ್ಯನ್​ ಖಾನ್​ ಅವರು ಮಾರಾಟ ಮಾಡುತ್ತಿರುವ ಬಟ್ಟೆಗಳ ಬೆಲೆ ಸಿಕ್ಕಾಪಟ್ಟೆ ದುಬಾರಿ ಆಗಿವೆ. ಒಂದು ಜಾಕೆಟ್​ನ ಬೆಲೆ ಬರೋಬ್ಬರಿ 2 ಲಕ್ಷ ರೂಪಾಯಿ. ಟಿ-ಶರ್ಟ್​ ಬೆಲೆ 24 ಸಾವಿರ ರೂಪಾಯಿ. ಹಾಗಿದ್ದರೂ ಕೂಡ ಜನರು ಇದನ್ನು ಮುಗಿಬಿದ್ದು ಖರೀದಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.