- Kannada News Photo gallery Pathaan actor Shah Rukh Khan family photos with Suhana Aryan Gauri Khan go viral
ಫ್ಯಾಮಿಲಿ ಜೊತೆ ಖುಷಿಖುಷಿಯಾಗಿ ಫೋಟೋಶೂಟ್ ಮಾಡಿಸಿದ ಶಾರುಖ್ ಖಾನ್
Shah Rukh Khan Family Photos: ಶಾರುಖ್ ಖಾನ್ ಅವರ ಅಭಿಮಾನಿಗಳ ವಲಯದಲ್ಲಿ ಈ ಫೋಟೋಗಳು ವೈರಲ್ ಆಗಿವೆ. ನೆಚ್ಚಿನ ನಟನ ಫ್ಯಾಮಿಲಿ ಫೋಟೋ ಕಂಡು ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
Updated on: Apr 18, 2023 | 6:46 PM

ನಟ ಶಾರುಖ್ ಖಾನ್ ಅವರ ಬದುಕಿನಲ್ಲಿ ಈಗ ಸಂತಸ ಮನೆ ಮಾಡಿದೆ. ‘ಪಠಾಣ್’ ಸಿನಿಮಾ ಸೂಪರ್ ಹಿಟ್ ಆದಮೇಲೆ ಅವರಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಸದ್ಯ ಅವರು ಸಿನಿಮಾ ಕೆಲಸಗಳ ಜೊತೆಯಲ್ಲಿ ಫ್ಯಾಮಿಲಿಗೆ ಸಮಯ ನೀಡುತ್ತಿದ್ದಾರೆ.

ಶಾರುಖ್ ಖಾನ್ ಹಾಗೂ ಗೌರಿ ಖಾನ್ ಅವರು ತಮ್ಮ ಕುಟುಂಬದ ಜೊತೆ ಫೋಟೋಶೂಟ್ ಮಾಡಿಸಿದ್ದಾರೆ. ಮಕ್ಕಳಾದ ಅಬ್ರಾಮ್, ಆರ್ಯನ್ ಖಾನ್, ಸುಹಾನಾ ಖಾನ್ ಅವರು ಪೋಸ್ ನೀಡಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ.

ಗೌರಿ ಖಾನ್ ಅವರು ಒಳಾಂಗಣ ವಿನ್ಯಾಸಕಿಯಾಗಿ ಬ್ಯುಸಿ ಆಗಿದ್ದಾರೆ. ಪತಿಯ ಸಿನಿಮಾ ಪಯಣಕ್ಕೆ ಅವರು ಬೆಂಬಲವಾಗಿ ನಿಂತಿದ್ದಾರೆ. ಶಾರುಖ್ ಖಾನ್-ಗೌರಿ ಖಾನ್ ದಂಪತಿಯ ಮಕ್ಕಳು ಕೂಡ ಈಗ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಆರಂಭಿಸಿದ್ದಾರೆ.

ಆರ್ಯನ್ ಖಾನ್ ಅವರು 2021ರಲ್ಲಿ ಡ್ರಗ್ಸ್ ಪಾರ್ಟಿ ಮಾಡಿದ ಆರೋಪದಲ್ಲಿ ಜೈಲು ಸೇರಿದ್ದರು. ಆದರೆ ಈಗ ಆರೋಪಮುಕ್ತರಾಗಿ ಹೊಸ ಜೀವನ ನಡೆಸುತ್ತಿದ್ದಾರೆ. ಫ್ಯಾಮಿಲಿ ಫೋಟೋದಲ್ಲಿ ಅವರು ತಂದೆಯ ಜೊತೆ ಪೋಸ್ ನೀಡಿದ್ದಾರೆ.

ಸುಹಾನಾ ಖಾನ್ ನಟಿಸಿದ ಮೊದಲ ಸಿನಿಮಾ ಇನ್ನೂ ಬಿಡುಗಡೆ ಆಗಿಲ್ಲ. ಅಷ್ಟರಲ್ಲಾಗಲೇ ಅವರು ಫೇಮಸ್ ಆಗಿದ್ದಾರೆ. ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರತಿಷ್ಠಿತ ಬ್ರ್ಯಾಂಡ್ಗಳಿಗೆ ಅವರು ರಾಯಭಾರಿ ಆಗಿದ್ದಾರೆ. ಇದು ಶಾರುಖ್ಗೆ ಹೆಮ್ಮೆ ತಂದಿದೆ.



















