Aryan Khan: 25ರ ಪ್ರಾಯದ ಆರ್ಯನ್​ ಖಾನ್​ ಜತೆ 30ರ ನೋರಾ ಫತೇಹಿ ಡೇಟಿಂಗ್​? ಎಲ್ಲೆಲ್ಲೂ ಇವರದ್ದೇ ಗುಸುಗುಸು

Aryan Khan Nora Fatehi Dating: ಆರ್ಯನ್​ ಖಾನ್​ ಮತ್ತು ನೋರಾ ಫತೇಹಿ ಯಾವುದೇ ಸಿನಿಮಾದಲ್ಲೂ ಜೊತೆಯಾಗಿ ಕೆಲಸ ಮಾಡಿಲ್ಲ. ಹಾಗಿದ್ದರೂ ಕೂಡ ಅವರ ನಡುವೆ ಪ್ರೀತಿ ಚಿಗುರಿರುವುದು ಅಚ್ಚರಿ ಮೂಡಿಸಿದೆ.

Aryan Khan: 25ರ ಪ್ರಾಯದ ಆರ್ಯನ್​ ಖಾನ್​ ಜತೆ 30ರ ನೋರಾ ಫತೇಹಿ ಡೇಟಿಂಗ್​? ಎಲ್ಲೆಲ್ಲೂ ಇವರದ್ದೇ ಗುಸುಗುಸು
ನೋರಾ ಫತೇಹಿ, ಆರ್ಯನ್ ಖಾನ್
Follow us
TV9 Web
| Updated By: ಮದನ್​ ಕುಮಾರ್​

Updated on:Jan 04, 2023 | 3:58 PM

ಒಂದೆಡೆ ನಟ ಶಾರುಖ್​ ಖಾನ್​ (Shah Rukh Khan) ಅವರು ‘ಪಠಾಣ್​’ ಸಿನಿಮಾದ ವಿವಾದಗಳ ಕಾರಣದಿಂದ ಸಖತ್​ ಸುದ್ದಿ ಆಗುತ್ತಿದ್ದಾರೆ. ಇನ್ನೊಂದೆಡೆ ಅವರ ಪುತ್ರ ಆರ್ಯನ್​ ಖಾನ್​ (Aryan Khan) ಡೇಟಿಂಗ್​ ವಿಚಾರಕ್ಕೆ ಹೈಲೈಟ್​ ಆಗುತ್ತಿದ್ದಾರೆ. ಖ್ಯಾತ ಡ್ಯಾನ್ಸರ್​ ಕಮ್​ ನಟಿ ನೋರಾ ಫತೇಹಿ (Nora Fatehi) ಜೊತೆಗೆ ಆರ್ಯನ್​ ಖಾನ್​ ಅವರು ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಗಾಸಿಪ್​ ಹಬ್ಬಿದೆ. ಬಿ-ಟೌನ್​ನ ಈ ಹೊಸ ಪ್ರೇಮ್​ ಕಹಾನಿ ಬಗ್ಗೆ ಎಲ್ಲರೂ ಗುಸುಗುಸು ಅಂತ ಮಾತನಾಡಿಕೊಳ್ಳುತ್ತಿದ್ದಾರೆ. ನೋರಾ ಫತೇಹಿ ಮತ್ತು ಆರ್ಯನ್​ ಖಾನ್​ ನಡುವೆ ವಯಸ್ಸಿನ ಅಂತರ ಇದೆ. ಹಾಗಿದ್ದರೂ ಕೂಡ ಇಬ್ಬರ ನಡುವೆ ಆಪ್ತತೆ ಬೆಳೆದಿರುವುದು ಅಚ್ಚರಿಗೆ ಕಾರಣ ಆಗಿದೆ.

ಗಾಸಿಪ್​ ಹಬ್ಬಿದ್ದು ಹೇಗೆ?

ಆರ್ಯನ್​ ಖಾನ್​ ಅವರು ಭರ್ಜರಿಯಾಗಿ 2023ರ ವರ್ಷವನ್ನು ಸ್ವಾಗತಿಸಿದ್ದಾರೆ. ದುಬೈನಲ್ಲಿ ಸ್ನೇಹಿತರ ಜೊತೆ ಅವರು ಅದ್ದೂರಿಯಾಗಿ ಪಾರ್ಟಿ ಮಾಡಿದ್ದಾರೆ. ಪಾರ್ಟಿಯ ಕೆಲವು ಫೋಟೋಗಳು ವೈರಲ್​ ಆಗಿವೆ. ಅದೇ ರೀತಿ, ನೋರಾ ಫತೇಹಿ ಅವರು ಕೂಡ ಹೊಸ ವರ್ಷದ ಸಂದರ್ಭದಲ್ಲಿ ದುಬೈನಲ್ಲಿ ಇದ್ದರು. ಅವರು ಹಂಚಿಕೊಂಡ ಫೋಟೋದ ಬ್ಯಾಗ್ರೌಂಡ್​ ಕೂಡ ಆರ್ಯನ್​ ಖಾನ್​ ಫೋಟೋದ ರೀತಿಯೇ ಇದೆ. ಆ ಕಾರಣದಿಂದ ಇಬ್ಬರ ಡೇಟಿಂಗ್​ ಬಗ್ಗೆ ಅನುಮಾನ ಮೂಡಿದೆ.

ಇದನ್ನೂ ಓದಿ: Aryan Khan: NCB ಅಧಿಕಾರಿಗೆ ತೀಕ್ಷ್ಣ ಪ್ರಶ್ನೆಗಳನ್ನು ಕೇಳಿದ್ದ ಆರ್ಯನ್​ ಖಾನ್​; ಹಲವು ತಿಂಗಳ ಬಳಿಕ ಬಾಯ್ಬಿಟ್ಟ ಆಫೀಸರ್​​

ಇದನ್ನೂ ಓದಿ
Image
Aryan Khan Drug Case ಆರ್ಯನ್​​ ಖಾನ್​​ ಡ್ರಗ್ಸ್​​​ ಪ್ರಕರಣ: ಬಂಧನದಿಂದ ಎನ್​​ಸಿಬಿ ಕ್ಲೀನ್ ಚಿಟ್​​ವರೆಗೆ ಏನೇನಾಯ್ತು?
Image
ಆರ್ಯನ್​ ಖಾನ್​ ಕೇಸ್​ ಮರೆತು ಸಾರ್ವಜನಿಕವಾಗಿ ಕಾಣಿಸಿಕೊಂಡ ಶಾರುಖ್ ಪತ್ನಿ ಗೌರಿ ಖಾನ್​, ಪುತ್ರಿ ಸುಹಾನಾ
Image
‘ಆರ್ಯನ್​ ಖಾನ್​ ಕಿಡ್ನಾಪ್​ ಮಾಡಿ, ಹಣಕ್ಕಾಗಿ ಬೇಡಿಕೆ ಇಡಲಾಯ್ತು’: ನವಾಬ್​ ಮಲಿಕ್​ ಗಂಭೀರ ಆರೋಪ
Image
Aryan Khan: 22 ದಿನ ಜೈಲಿನಲ್ಲಿದ್ದ ಆರ್ಯನ್​ ಖಾನ್​ಗೆ ಈಗ ಮನೆಯವರಿಂದಲೇ ಬ್ಲಡ್​ ಟೆಸ್ಟ್​; ಕಾರಣ ಏನು?

ನೋರಾ ಫತೇಹಿ ಅವರಿಗೆ ಈಗ 30 ವರ್ಷ ವಯಸ್ಸು. ಆರ್ಯನ್​ ಖಾನ್​ಗೆ ಈಗಿನ್ನೂ 25ರ ಪ್ರಾಯ. ಆರ್ಯನ್​ ಖಾನ್​ ಅವರಿಗಿಂತಲೂ ನೋರಾ ಫತೇಹಿ 5 ವರ್ಷ ದೊಡ್ಡವರು. ಇಬ್ಬರು ಯಾವುದೇ ಸಿನಿಮಾದಲ್ಲೂ ಜೊತೆಯಾಗಿ ಕೆಲಸ ಮಾಡಿಲ್ಲ. ಹಾಗಿದ್ದರೂ ಕೂಡ ಅವರ ನಡುವೆ ಪ್ರೀತಿ ಚಿಗುರಿರುವುದು ಅಚ್ಚರಿಗೆ ಮೂಡಿಸಿದೆ.

ಇದನ್ನೂ ಓದಿ: Aryan Khan: ಕ್ಲೀನ್​ ಚಿಟ್​ ಸಿಕ್ಕಮೇಲೂ ಆರ್ಯನ್​ ಖಾನ್​ಗೆ ಕೋರ್ಟ್​ ಮೆಟ್ಟಿಲು ಹತ್ತೋದು ತಪ್ಪಲಿಲ್ಲ; ಕಾರಣ ಏನು?

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆರ್ಯನ್​ ಖಾನ್ ಅವರು ಈಗಾಗಲೇ ಚಿತ್ರರಂಗಕ್ಕೆ ಎಂಟ್ರಿ ನೀಡಿರಬೇಕಿತ್ತು. ಕಾರಣಾಂತಗಳಿಂದ ತಡವಾಯ್ತು ಅಷ್ಟೇ. ಈಗ ಅದಕ್ಕೆ ಕಾಲ ಕೂಡಿಬಂದಿದೆ. ತಾವು ಬಣ್ಣದ ಲೋಕಕ್ಕೆ ಕಾಲಿಡಲು ಸಜ್ಜಾಗಿರುವ ಬಗ್ಗೆ ಸ್ವತಃ ಆರ್ಯನ್​ ಖಾನ್ ಅವರು ಇತ್ತೀಚೆಗೆ ಬ್ರೇಕಿಂಗ್​ ನ್ಯೂಸ್​ ನೀಡಿದ್ದರು. ಪ್ರೀ-ಪ್ರೊಡಕ್ಷನ್​ ಕೆಲಸದ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದರು. ವಿಶೇಷ ಎಂದರೆ, ಅವರು ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿಲ್ಲ. ಬದಲಿಗೆ, ನಿರ್ದೇಶಕನಾಗಿ ಬಾಲಿವುಡ್​ಗೆ ಕಾಲಿಡುತ್ತಿದ್ದಾರೆ.

ಇದನ್ನೂ ಓದಿ: ​Aryan Khan: ಚಿತ್ರರಂಗಕ್ಕೆ ಶಾರುಖ್​ ಖಾನ್​ ಮಗ ಆರ್ಯನ್​ ಖಾನ್​ ಎಂಟ್ರಿ; ಬ್ರೇಕಿಂಗ್​ ನ್ಯೂಸ್​ ನೀಡಿದ ಸ್ಟಾರ್​ ಕಿಡ್​

ಸ್ಕ್ರಿಪ್ಟ್​ ಬರೆದು ಮುಗಿಸಿರುವ ಆರ್ಯನ್​ ಖಾನ್​ ಅವರು ಈಗ ಆ್ಯಕ್ಷನ್​-ಕಟ್​ ಹೇಳುವ ಕಾತರದಲ್ಲಿದ್ದಾರೆ. ಶಾರುಖ್​ ಖಾನ್​ ಅವರ ‘ರೆಡ್​ ಚಿಲ್ಲೀಸ್​ ಎಂಟರ್​ಟೇನ್ಮೆಂಟ್​’ ಸಂಸ್ಥೆ ಮೂಲಕ ಈ ಪ್ರಾಜೆಕ್ಟ್​ ನಿರ್ಮಾಣ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:58 pm, Wed, 4 January 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ