AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aryan Khan: ಕ್ಲೀನ್​ ಚಿಟ್​ ಸಿಕ್ಕಮೇಲೂ ಆರ್ಯನ್​ ಖಾನ್​ಗೆ ಕೋರ್ಟ್​ ಮೆಟ್ಟಿಲು ಹತ್ತೋದು ತಪ್ಪಲಿಲ್ಲ; ಕಾರಣ ಏನು?

Aryan Khan Case: ಡ್ರಗ್ಸ್​ ಪಾರ್ಟಿಯ ಆರೋಪ ಎದುರಾದಾಗಿನಿಂದ ಆರ್ಯನ್​ ಖಾನ್​ ಅವರು ವಿದೇಶಕ್ಕೆ ಹೋಗಲು ಸಾಧ್ಯವಾಗಿಲ್ಲ. ಕೈಯಲ್ಲಿ ಪಾಸ್​ಪೋರ್ಟ್​ ಇಲ್ಲದೇ ಅವರು ಒದ್ದಾಡುತ್ತಿದ್ದಾರೆ.

Aryan Khan: ಕ್ಲೀನ್​ ಚಿಟ್​ ಸಿಕ್ಕಮೇಲೂ ಆರ್ಯನ್​ ಖಾನ್​ಗೆ ಕೋರ್ಟ್​ ಮೆಟ್ಟಿಲು ಹತ್ತೋದು ತಪ್ಪಲಿಲ್ಲ; ಕಾರಣ ಏನು?
ಆರ್ಯನ್ ಖಾನ್
TV9 Web
| Edited By: |

Updated on: Jul 01, 2022 | 11:39 AM

Share

ಸ್ಟಾರ್​ ಕಿಡ್​ಗಳು ತಮ್ಮ ಕುಟುಂಬದ ಪ್ರತಿಷ್ಠೆ ಕಾಪಾಡಿಕೊಳ್ಳಲು ಕಷ್ಟಪಡುತ್ತಾರೆ. ಅದಕ್ಕಾಗಿ ಸಾರ್ವಜನಿಕ ಜೀವನದಲ್ಲಿ ಯಾವುದೇ ಎಡವಟ್ಟು ಆಗದಂತೆ ಅವರು ನೋಡಿಕೊಳ್ಳುತ್ತಾರೆ. ಆದರೂ ಕೂಡ ಶಾರುಖ್​ ಖಾನ್​ (Shah Rukh Khan) ಪುತ್ರ ಆರ್ಯನ್​ ಖಾನ್​ ಬದುಕಿನಲ್ಲಿ ಒಂದು ತಪ್ಪು ನಡೆದೇ ಹೋಯ್ತು. ಡ್ರಗ್ಸ್​ ಪಾರ್ಟಿ ಮಾಡಿದ ಆರೋಪದಲ್ಲಿ ಅವರು ಜೈಲು ಸೇರಬೇಕಾಯಿತು. ಅಂತಿಮವಾಗಿ ಅವರು ಯಾವುದೇ ತಪ್ಪು ಮಾಡಿಲ್ಲ ಎಂದು ಕೋರ್ಟ್​ ತೀರ್ಪು ನೀಡಿತು. ಸದ್ಯ ಆರ್ಯನ್​ ಖಾನ್​ ದೋಷಮುಕ್ತರಾಗಿ ತಮ್ಮ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಹಾಗಿದ್ದರೂ ಕೂಡ ಅವರು ಕೋರ್ಟ್​ಗೆ ಅಲೆಯುವುದು ತಪ್ಪಿಲ್ಲ. ಹೌದು, ಅವರಿಗೆ ಇನ್ನೂ ಪಾಸ್​ಪೋರ್ಟ್​ (Passport) ಸಿಕ್ಕಿಲ್ಲ. ಅದರ ಸಲುವಾಗಿ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ತಮ್ಮ ವಕೀಲರ ಮೂಲಕ ಆರ್ಯನ್​ ಖಾನ್​ (Aryan Khan) ಅರ್ಜಿ ಸಲ್ಲಿಸಿದ್ದಾರೆ.

ಹುಟ್ಟುತ್ತಲೇ ಚಿನ್ನದ ಚಮಚವನ್ನು ಬಾಯಲ್ಲಿ ಇಟ್ಟುಕೊಂಡವರು ಆರ್ಯನ್​ ಖಾನ್​. ಆಗಾಗ ಅವರು ವಿದೇಶಕ್ಕೆ ಪ್ರವಾಸ ತೆರಳುವುದು ಕಾಮನ್​. ಆದರೆ ಡ್ರಗ್ಸ್​ ಪಾರ್ಟಿಯ ಆರೋಪ ಎದುರಾದಾಗಿನಿಂದ ಅವರು ದೇಶದಿಂದ ಹೊರಗೆ ಹೋಗಲು ಸಾಧ್ಯವಾಗಿಲ್ಲ. ಆರ್ಯನ್ ಖಾನ್​ ತಂದೆ ಶಾರುಖ್​ ಖಾನ್ ಅವರು ವಿದೇಶದಲ್ಲೂ ಅನೇಕ ವ್ಯವಹಾರಗಳನ್ನು ಹೊಂದಿದ್ದಾರೆ. ಅದರ ಸಲುವಾಗಿಯೂ ಆರ್ಯನ್​ ಖಾನ್​ ಹೊರರಾಷ್ಟ್ರಗಳಿಗೆ ತೆರಳಬೇಕಾಗುತ್ತದೆ. ಆದರೆ ಅದೆಲ್ಲದಕ್ಕೂ ಡ್ರಗ್ಸ್​ ಕಳಂಕದಿಂದ ಬ್ರೇಕ್​ ಬಿಳುವಂತಾಯಿತು.

ಆರ್ಯನ್​ ಖಾನ್​ ಅವರಿಗೆ ಜಾಮೀನು ನೀಡುವ ಸಂದರ್ಭದಲ್ಲಿ ಅನೇಕ ಷರತ್ತುಗಳನ್ನು ವಿಧಿಸಲಾಗಿತ್ತು. ಅವರು ತಮ್ಮ ಪಾಸ್​ಪೋರ್ಟ್​ ಅನ್ನು ಕೂಡ ಕೋರ್ಟ್​ಗೆ ಒಪ್ಪಿಸಬೇಕಿತ್ತು. ಅದು ಈಗ ಎನ್​ಸಿಬಿ ಕಸ್ಟಡಿಯಲ್ಲಿದೆ. ಪಾಸ್​ಪೋರ್ಟ್ ಹಿಂದಿರುಗಿಸಬೇಕು ಎಂದು ಆರ್ಯನ್​ ಖಾನ್​ ಅರ್ಜಿ ಸಲ್ಲಿಸಿರುವುದರಿಂದ ಅದಕ್ಕೆ ಉತ್ತರ ನೀಡುವಂತೆ ಎನ್​ಸಿಬಿಗೆ ಕೋರ್ಟ್​ ಸೂಚಿಸಿದೆ. ಈ ಸಂಬಂಧ ಜುಲೈ 13ರಂದು ವಿಚಾರಣೆ ನಡೆಯುವ ಸಾಧ್ಯತೆ ಇದೆ.

ಇದನ್ನೂ ಓದಿ
Image
ಆರ್ಯನ್​ ಖಾನ್​ ಕೇಸ್​ ಮರೆತು ಸಾರ್ವಜನಿಕವಾಗಿ ಕಾಣಿಸಿಕೊಂಡ ಶಾರುಖ್ ಪತ್ನಿ ಗೌರಿ ಖಾನ್​, ಪುತ್ರಿ ಸುಹಾನಾ
Image
ಬೆಂಗಳೂರಿನಲ್ಲಿ ಕಾಣಿಸಿಕೊಂಡ ಆರ್ಯನ್​ ಖಾನ್​; ಮಗನ ಹೆಗಲಿಗೆ ದೊಡ್ಡ ಜವಾಬ್ದಾರಿ ಹೊರಿಸಿದ ಶಾರುಖ್​?
Image
ಆರ್ಯನ್​ ಖಾನ್​​ಗೆ ಬಾಡಿಗಾರ್ಡ್​ ಫೈನಲ್​? ವರ್ಷದ ಸಂಬಳ 2.7 ಕೋಟಿ ರೂಪಾಯಿ
Image
ಆರ್ಯನ್​ ಖಾನ್​ ವಿರುದ್ಧದ ತನಿಖೆಗೆ ತೊಂದರೆ ಕೊಡುವವರಿಗೆ ಪಾಠ ಕಲಿಸೋಕೆ ಮುಂದಾದ ಸಮೀರ್​ ವಾಂಖೆಡೆ

ವೆಬ್ ಸರಣಿ ನಿರ್ದೇಶನ ಮಾಡಲು ಆರ್ಯನ್ ಖಾನ್ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಶಾರುಖ್ ಖಾನ್ ಅವರು ‘ರೆಡ್​ ಚಿಲ್ಲೀಸ್​ ಎಂಟರ್​ಟೇನ್​ಮೆಂಟ್​’ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಅನೇಕ ಹಿಟ್ ಚಿತ್ರಗಳು ಈ ನಿರ್ಮಾಣ ಸಂಸ್ಥೆಯಿಂದ ಹೊರಬಂದಿವೆ. ಆರ್ಯನ್ ಖಾನ್ ನಿರ್ದೇಶನ ಮಾಡುತ್ತಿರುವ ವೆಬ್​ ಸರಣಿಗೆ ‘ರೆಡ್​ ಚಿಲ್ಲೀಸ್’ ಬಂಡವಾಳ ಹೂಡಲಿದೆ ಎಂಬ ಮಾಹಿತಿ ಇದೆ. ಇನ್ನು ಶಾರುಖ್​ ಪುತ್ರಿ ಸುಹಾನಾ ಖಾನ್​ ಅವರು ‘ದಿ ಆರ್ಚೀಸ್​’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ.

​ಇದನ್ನೂ ಓದಿ: Aryan Khan: NCB ಅಧಿಕಾರಿಗೆ ತೀಕ್ಷ್ಣ ಪ್ರಶ್ನೆಗಳನ್ನು ಕೇಳಿದ್ದ ಆರ್ಯನ್​ ಖಾನ್​; ಹಲವು ತಿಂಗಳ ಬಳಿಕ ಬಾಯ್ಬಿಟ್ಟ ಆಫೀಸರ್​​

 ಖ್ಯಾತ ಪ್ರೊಡಕ್ಷನ್​ ಹೌಸ್​ ಅಡಿಯಲ್ಲಿ ಕೆಲಸ ಮಾಡಲಿದ್ದಾರೆ ಆರ್ಯನ್​ ಖಾನ್​; ಶಾರುಖ್​ ಮಗನ ಬಗ್ಗೆ ಹೊಸ ಅಪ್​ಡೇಟ್​

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್