ಒನ್​ ಸೈಡ್​ ಪ್ರೇಮಿಗಳು ನೋಡ್ಲೇಬೇಕಾದ ಟ್ರೇಲರ್​ ಇದು; ಇಲ್ಲಿ ಒಳ್ಳೆಯವರು ಯಾರು? ಕೆಟ್ಟವರು ಯಾರು?

Ek Villain Returns Trailer: ಜುಲೈ 29ರಂದು ‘ಏಕ್​ ವಿಲನ್​ ರಿಟರ್ನ್ಸ್​’ ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರದ ಕಥೆ ಏನು ಎಂಬ ಎಳೆಯನ್ನು ಟ್ರೇಲರ್​​ನಲ್ಲಿ ಬಿಟ್ಟುಕೊಡಲಾಗಿದೆ.

ಒನ್​ ಸೈಡ್​ ಪ್ರೇಮಿಗಳು ನೋಡ್ಲೇಬೇಕಾದ ಟ್ರೇಲರ್​ ಇದು; ಇಲ್ಲಿ ಒಳ್ಳೆಯವರು ಯಾರು? ಕೆಟ್ಟವರು ಯಾರು?
‘ಏಕ್ ವಿಲನ್ ರಿಟರ್ನ್ಸ್’ ಟ್ರೇಲರ್ ದೃಶ್ಯ
TV9kannada Web Team

| Edited By: Madan Kumar

Jul 01, 2022 | 7:10 AM

ಬ್ಯಾಕ್ ಟು ಬ್ಯಾಕ್​ ಸೋಲಿನಿಂದ ಬಾಲಿವುಡ್​ (Bollywood) ಮಂಕಾಗಿದೆ. ಅಕ್ಷಯ್ ಕುಮಾರ್ ಅವರಂತಹ ಸ್ಟಾರ್​ ನಟರ ಸಿನಿಮಾಗಳು ಕೂಡ ಫ್ಲಾ​ಪ್​ ಆಗಿವೆ. ಇತ್ತೀಚಿನ ದಿನಗಳಲ್ಲಿ ಹಿಂದಿ ಚಿತ್ರರಂಗದಲ್ಲಿ ಭರ್ಜರಿ ಗೆಲುವು ಕಂಡಿದ್ದು ‘ಭೂಲ್​ ಭುಲಯ್ಯ 2’ ಸಿನಿಮಾ ಮಾತ್ರ. ಈಗ ಮತ್ತೊಂದು ಸಿನಿಮಾ ಗೆಲ್ಲುವ ಭರವಸೆಯೊಂದಿಗೆ ಥಿಯೇಟರ್​ ಬಾಗಿಲು ತಟ್ಟುತ್ತಿದೆ. ಹೌದು, ಬಹುನಿರೀಕ್ಷಿತ ‘ಏಕ್​ ವಿಲನ್​ ರಿಟರ್ನ್ಸ್​’ (Ek Villain 2) ಚಿತ್ರದ ಟ್ರೇಲರ್​ ಬಿಡುಗಡೆ ಆಗಿದ್ದು, ಪ್ರೇಕ್ಷಕರಲ್ಲಿ ಭರವಸೆ ಮೂಡಿಸುವಲ್ಲಿ ಯಶಸ್ವಿ ಆಗಿದೆ. ಬಿಡುಗಡೆಯಾಗ ಕೆಲವೇ ಗಂಟೆಗಳಲ್ಲಿ ಈ ಟ್ರೇಲರ್​ (Ek Villain Returns Trailer) 18 ಮಿಲಿಯನ್ ಬಾರಿ ವೀಕ್ಷಣೆ ಕಂಡಿದೆ. ಇದರಿಂದ ಚಿತ್ರತಂಡದ ಬಲ ಹೆಚ್ಚಿದಂತಾಗಿದೆ. ಜಾನ್​ ಅಬ್ರಾಹಂ, ಅರ್ಜುನ್​ ಕಪೂರ್​, ತಾರಾ ಸುತಾರಿಯಾ, ದಿಶಾ ಪಟಾನಿ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ.

ಜುಲೈ 29ರಂದು ‘ಏಕ್​ ವಿಲನ್​ ರಿಟರ್ನ್ಸ್​’ ಸಿನಿಮಾ ಬಿಡುಗಡೆ ಆಗಲಿದೆ. ಮೋಹಿತ್​ ಸೂರಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಕಥೆ ಏನು ಎಂಬ ಎಳೆಯನ್ನು ಟ್ರೇಲರ್​​ನಲ್ಲಿ ಬಿಟ್ಟುಕೊಡಲಾಗಿದೆ. ಒಬ್ಬ ವಿಲನ್​ ಇದ್ದಾನೆ. ಅವನು ಒನ್​ ಸೈಡ್​ ಲವ್​ ಮಾಡುವ ಪ್ರೇಮಿಗಳನ್ನೇ ಟಾರ್ಗೆಟ್​ ಮಾಡುತ್ತಾನೆ ಮತ್ತು ಭೀಕರವಾಗಿ ಕೊಲ್ಲುತ್ತಾನೆ! ಈ ಟ್ರೇಲರ್​ ನೋಡಿದ ಬಳಿಕ ಎಲ್ಲ ಒನ್​ ಸೈಡ್​ ಪ್ರೇಮಿಗಳಿಗೆ ಕೌತುಕ ಮೂಡಿದೆ.

ಅರ್ಜುನ್​ ಕಪೂರ್​ ಮತ್ತು ಜಾನ್​ ಅಬ್ರಾಹಂ ಅವರು ಮಾಡಿರುವ ಪಾತ್ರಗಳಿಗೆ ಎರಡು ಶೇಡ್​ ಇರುವಂತಿದೆ. ಒಮ್ಮೆ ಹೀರೋ ರೀತಿ ಕಾಣುವ ಪಾತ್ರ, ನಂತರದಲ್ಲಿ ವಿಲನ್​ ಆಗತ್ತದೆ. ಅಷ್ಟೇ ಅಲ್ಲ, ನಾಯಕಿಯರ ಪಾತ್ರಗಳು ಕೂಡ ಹಾಗೆಯೇ ಇದೆ ಎಂಬ ಸುಳಿವು ಟ್ರೇಲರ್​ನಲ್ಲಿ ಸಿಕ್ಕಿದೆ. ಒಟ್ಟಿನಲ್ಲಿ ಒಳ್ಳೆಯವರು ಯಾರು? ಕೆಟ್ಟವರು ಯಾರು ಎಂಬುದನ್ನು ಸಿನಿಮಾ ನೋಡಿಯೇ ತಿಳಿಯಬೇಕಿದೆ.

‘ಏಕ್​ ವಿಲನ್​’ ಚಿತ್ರ 2014ರಲ್ಲಿ ಬಿಡುಗಡೆಯಾಗಿ ಗೆಲುವು ಕಂಡಿತ್ತು ಈಗ ಅದರ ಪಾರ್ಟ್​ 2 ಬರುತ್ತಿದೆ. ಹಳೇ ಕಥೆಗೂ ಹೊಸ ಕಥೆಗೂ ಏನು ಲಿಂಕ್​ ಇದೆ ಎಂಬುದನ್ನು ತಿಳಿಯುವ ಕುತೂಹಲ ಪ್ರೇಕ್ಷಕರಲ್ಲಿ ಸೃಷ್ಟಿ ಆಗಿದೆ. ಜಾನ್​ ಅಬ್ರಾಹಂ ನಟನೆಯ ‘ಅಟ್ಯಾಕ್​’ ಸಿನಿಮಾ ಈ ವರ್ಷ ಏಪ್ರಿಲ್​ 1ರಂದು ತೆರೆಕಂಡು ಸೋಲುಂಡಿತು. ಹಾಗಾಗಿ ‘ಏಕ್​ ವಿಲನ್​ ರಿಟರ್ನ್ಸ್​’ ಮೂಲಕ ಗೆಲ್ಲಲೇಬೇಕಾದ ಅನಿವಾರ್ಯತೆ ಅವರಿಗೆ ಇದೆ.

ಇದನ್ನೂ ಓದಿ: ‘299 ಅಥವಾ 499 ರೂಪಾಯಿಗೆ ನಾನು ಸಿಗಲ್ಲ’; ಮತ್ತೆ ಗರ್ವದ ಮಾತನಾಡಿದ ಜಾನ್​ ಅಬ್ರಾಹಂ

‘ನಾನು ಹಿಂದಿ ಹೀರೋ’ ಎಂದು ಗರ್ವ ತೋರಿಸಿ ಸೋತ ಜಾನ್​ ಅಬ್ರಾಹಂ ಸಿನಿಮಾಗೆ ಈಗ ಒಟಿಟಿ ಮಾತ್ರ ಗತಿ

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada