ರಿಷಭ್ ಪಂತ್ ಬೇಗ ಗುಣಮುಖರಾಗಲಿ ಎಂದು ಕೋರಿದ ಊರ್ವಶಿ ತಾಯಿ; ಫ್ಯಾನ್ಸ್ ಕೊಟ್ರು ಖಡಕ್ ತಿರುಗೇಟು

Urvashi Rautela: ’ರಿಷಭ್ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸೋಣ’ ಎಂದು ಮೀರಾ ರೌಟೇಲಾ ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದರು. ಅನೇಕರು ಇದನ್ನು ಟೀಕಿಸಿದ್ದಾರೆ.

ರಿಷಭ್ ಪಂತ್ ಬೇಗ ಗುಣಮುಖರಾಗಲಿ ಎಂದು ಕೋರಿದ ಊರ್ವಶಿ ತಾಯಿ; ಫ್ಯಾನ್ಸ್ ಕೊಟ್ರು ಖಡಕ್ ತಿರುಗೇಟು
ಮೀರಾ-ರಿಷಭ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jan 04, 2023 | 12:09 PM

ರಿಷಭ್ ಪಂತ್ (Rishabh Pant) ಅವರು ಇತ್ತೀಚೆಗೆ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ಆ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸದ್ಯ ರಿಷಭ್ ಪಂತ್​ಗೆ ಚಿಕಿತ್ಸೆ ಮುಂದುವರಿದಿದೆ. ಅನೇಕರು ರಿಷಭ್ ಪಂತ್ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಮಾಡಲಾಗುತ್ತಿದೆ. ಊರ್ವಶಿ ರೌಟೇಲಾ (Urvashi Rautela) ಅವರ ತಾಯಿ ಮೀರಾ ರೌಟೇಲಾ ಕೂಡ ರಿಷಭ್ ಬೇಗ ಗುಣಮುಖರಾಗಲಿ ಎಂದು ಕೋರಿದ್ದರು. ಈ ವಿಚಾರದಲ್ಲಿ ಅವರು ಟ್ರೋಲ್ ಆಗಿದ್ದಾರೆ.

ರಿಷಭ್ ಪಂತ್ ಅವರು ಕಾರಿನಲ್ಲಿ ದೆಹಲಿ-ಡೆಹಾರಾಡೂನ್ ಹೈವೇಯಲ್ಲಿ ಡಿಸೆಂಬರ್ 30ರಂದು ಪ್ರಯಾಣ ಮಾಡುವಾಗ ಅಪಘಾತ ಸಂಭವಿಸಿತ್ತು. ಅವರ ಕಾರು ಹೊತ್ತಿ ಉರಿದಿತ್ತು. ಅವರು ಅದೃಷ್ಟರೀತಿಯಲ್ಲಿ ಬಚಾವ್ ಆಗಿದ್ದರು. ಅವರನ್ನು ಡೆಹಾರಾಡೂನ್​​ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ
Image
‘ಆರ್​​ಪಿ ಎಂದರೆ ರಿಷಬ್ ಪಂತ್ ಅಲ್ಲ’; ಬಹುದಿನಗಳ ವದಂತಿ ಬಗ್ಗೆ ಮೌನ ಮುರಿದ ನಟಿ ಊರ್ವಶಿ ರೌಟೇಲಾ
Image
‘ನಾನು ರಿಷಭ್ ಪಂತ್​ಗೆ ಕ್ಷಮೆ ಕೇಳಿದ್ದಲ್ಲ..’; ಮತ್ತೆ ಪ್ಲೇಟ್ ಬದಲಿಸಿದ ನಟಿ ಊರ್ವಶಿ ರೌಟೇಲಾ
Image
ಯಾರೀ ಊರ್ವಶಿ ಎಂದ ಪಾಕ್ ಬೌಲರ್; ಕೋಪಗೊಂಡ ಬಾಲಿವುಡ್ ನಟಿ ಮಾಡಿದ್ದೇನು ಗೊತ್ತಾ?
Image
Urvashi Rautela: ಪಾಕಿಸ್ತಾನ ಕ್ರಿಕೆಟಿಗನ ಜೊತೆ ರೊಮ್ಯಾಂಟಿಕ್ ವಿಡಿಯೋ ಹಂಚಿಕೊಂಡ ಊರ್ವಶಿ ರೌಟೇಲ

ಊರ್ವಶಿ ರೌಟೇಲಾ ತಾಯಿ ರಿಷಭ್ ಪಂತ್ ಫೋಟೋ ಹಾಕಿದ್ದರು. ಈ ಫೋಟೋಗೆ ‘ಸೋಶಿಯಲ್ ಮೀಡಿಯಾದ ವದಂತಿಗಳು ಒಂದು ಕಡೆ, ನಿಮ್ಮ ಆರೋಗ್ಯ ಇನ್ನೊಂದು ಕಡೆ. ರಿಷಭ್ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸೋಣ’ ಎಂದು ಮೀರಾ ರೌಟೇಲಾ ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದರು. ಅನೇಕರು ಇದನ್ನು ಟೀಕಿಸಿದ್ದಾರೆ.  ಖಡಕ್ ಆಗಿ ಹೇಳಿದ್ದಾರೆ.

‘ಅಳಿಯನ ಪರವಾಗಿ ಅತ್ತೆ ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ದಾರೆ’ ಎಂದು ಒಂದಷ್ಟು ಮಂದಿ ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಇದು ಊರ್ವಶಿ ಅವರ ಕೆಲಸ ಎಂದಿದ್ದಾರೆ. ‘ಊರ್ವಶಿ ಅವರೇ ನಿಮ್ಮ ನಿಜವಾದ ಖಾತೆಯಿಂದ ಈ ಪೋಸ್ಟ್​​ನ ಪೋಸ್ಟ್ ಮಾಡಿ. ಬೇರೆ ಯಾವುದೋ ಖಾತೆಯಿಂದ ಇದನ್ನು ಹಾಕುವುದಲ್ಲ’ ಎಂದು ಟೀಕೆ ಮಾಡಿದ್ದಾರೆ.

ಇದನ್ನೂ ಓದಿ: ‘ಆರ್​​ಪಿ ಎಂದರೆ ರಿಷಬ್ ಪಂತ್ ಅಲ್ಲ’; ಬಹುದಿನಗಳ ವದಂತಿ ಬಗ್ಗೆ ಮೌನ ಮುರಿದ ನಟಿ ಊರ್ವಶಿ ರೌಟೇಲಾ

 ಕೆಲವೇ ಸೆಕೆಂಡ್ ವಿಡಿಯೋಗೆ 15 ಕೋಟಿ ರೂ. ಪಡೆದ ಊರ್ವಶಿ

ನೆಟ್​ಫ್ಲಿಕ್ಸ್ ಇತ್ತೀಚೆಗೆ ವಿಡಿಯೋ ಒಂದನ್ನು ಹಂಚಿಕೊಂಡಿತ್ತು​​. ತನ್ನ ಪ್ಲಾಟ್​ಫಾರ್ಮ್​ನಲ್ಲಿರುವ ಸಿನಿಮಾಗಳ ಪಾತ್ರಗಳನ್ನೇ ಇಟ್ಟುಕೊಂಡು ವಿಡಿಯೋ ಮಾಡಲಾಗಿದೆ. ಈ ವಿಡಿಯೋದಲ್ಲಿ ಉರ್ಫಿ ಜಾವೇದ್ ಮೊದಲಾದವರು ಇದ್ದಾರೆ. ಊರ್ವಶಿ ಅವರು ಕೂಡ ಈ ವಿಡಿಯೋದಲ್ಲಿದ್ದಾರೆ.  ಹಾಲಿವುಡ್​ ನಟ ರೈನ್​ ಗಾಸ್ಲಿಂಗ್ ಹಾಗೂ ಊರ್ವಶಿ ಎದುರುಬದುರು ಕೂತಿರುತ್ತಾರೆ. ಊರ್ವಶಿ ಕೈ ಮೇಲೆ ‘RP’ ಎಂದು ಬರೆದುಕೊಂಡಿದ್ದಾರೆ. P ಮೇಲೆ ಗೀಟು ಹಾಕಿ ‘ಜಿ’ ಎಂದು ಬರೆದುಕೊಂಡಿದ್ದಾರೆ. ಆರ್​ ಜಿ ಎಂದರೆ ರೈನ್​ ಗಾಸ್ಲಿಂಗ್ ಎಂದರ್ಥ. ಕೆಲವೇ ಸೆಕೆಂಡ್​ನಲ್ಲಿ ಮುಗಿಯುವ ಈ ದೃಶ್ಯಕ್ಕೆ ಅವರು 15 ಕೋಟಿ ರೂ. ಚಾರ್ಜ್​ ಮಾಡಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:09 pm, Wed, 4 January 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ