‘ಆರ್​​ಪಿ ಎಂದರೆ ರಿಷಬ್ ಪಂತ್ ಅಲ್ಲ’; ಬಹುದಿನಗಳ ವದಂತಿ ಬಗ್ಗೆ ಮೌನ ಮುರಿದ ನಟಿ ಊರ್ವಶಿ ರೌಟೇಲಾ

Urvashi Rautela: ಆರ್‌ಪಿ ಎಂದರೆ ಕ್ರಿಕೆಟಿಗ ರಿಷಬ್ ಪಂತ್ ಅಲ್ಲ. ಬದಲಿಗೆ ನನ್ನ ಸಹ ನಟ ರಾಮ್ ಪೋತಿನೇನಿ ಎಂದರ್ಥ. ಅಲ್ಲದೆ ರಿಷಬ್ ಪಂತ್ ಅವರನ್ನು ಆರ್‌ಪಿ ಎಂದೂ ಕರೆಯುತ್ತಾರೆ ಎಂದು ನನಗೆ ತಿಳಿದಿರಲಿಲ್ಲ ಎಂದು ಊರ್ವಶಿ ಹೇಳಿಕೊಂಡಿದ್ದಾರೆ.

‘ಆರ್​​ಪಿ ಎಂದರೆ ರಿಷಬ್ ಪಂತ್ ಅಲ್ಲ’; ಬಹುದಿನಗಳ ವದಂತಿ ಬಗ್ಗೆ ಮೌನ ಮುರಿದ ನಟಿ ಊರ್ವಶಿ ರೌಟೇಲಾ
urvashi rautela, rishabh pant
Follow us
TV9 Web
| Updated By: ಪೃಥ್ವಿಶಂಕರ

Updated on:Dec 03, 2022 | 6:07 PM

ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ ಹಾಗೂ ಬಾಲಿವುಡ್ ನಟಿ ಊರ್ವಶಿ ರೌಟೇಲಾ (Rishabh Pant and actress Urvashi Rautela) ನಡುವಿನ ವಿವಾದ ಇಷ್ಟಕ್ಕೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಬಹಳ ದಿನಗಳಿಂದ ನಡೆಯುತ್ತಿರುವ ಈ ಇಬ್ಬರ ಟಾಕ್ ವಾರ್​ಗೆ ಹೊಸ ಆಯಾಮ ಸಿಕ್ಕಿದೆ. ವಾಸ್ತವವಾಗಿ ಕೆಲವು ತಿಂಗಳ ಹಿಂದೆ ಸಂದರ್ಶನವೊಂದರಲ್ಲಿ ನಟಿ ರೌಟೇಲಾ, ದೆಹಲಿಯ ಹೋಟೆಲ್‌ನಲ್ಲಿ ಆರ್‌ಪಿ ತನಗಾಗಿ ಕಾಯುತ್ತಿದ್ದರು. ಜೊತೆಗೆ ಅವರು ನನಗೆ 17 ಕ್ಕೂ ಹೆಚ್ಚು ಬಾರಿ ಕರೆ ಮಾಡಿದ್ದರು. ತುಂಬಾ ಸುಸ್ತಾಗಿದ್ದ ನಾನು, ಮುಂಬೈಗೆ ಬಂದು ನಿನ್ನೊಂದಿಗೆ ಮಾತನಾಡುವುದಾಗಿ ಹೇಳಿ ಕಳಿಸಿದ್ದೆ ಎಂದು ಹೇಳಿಕೊಂಡಿದ್ದರು. ಈ ಸಂದರ್ಶನವನ್ನು ನೋಡಿದ ನೆಟ್ಟಿಗರು ಆರ್​ಪಿ ಎಂದರೆ ಕ್ರಿಕೆಟಿಗ ರಿಷಬ್ ಪಂತ್ ಎಂದು ಭಾವಿಸಿದ್ದರು. ಆಗಿನಿಂದ ಈ ಇಬ್ಬರ ನಡುವಿನ ಸಂಬಂಧದ ಬಗ್ಗೆ ಸಾಕಷ್ಟು ಚರ್ಚೆಗಳು ಆರಂಭವಾಗಿದ್ದವು. ಆದರೀಗ ಈ ಎಲ್ಲಾ ವದಂತಿಗಳಿಗೆ ತೆರೆ ಎಳೆದಿರುವ ನಟಿ ಆರ್​ಪಿ ಪದದ ಅರ್ಥವನ್ನು ಬಹಿರಂಗಗೊಳಿಸಿದ್ದಾರೆ.

ಇದೀಗ ಸಂದರ್ಶನವೊಂದರಲ್ಲಿ ಆರ್​ಪಿ ಪದದ ಬಗ್ಗೆ ವಿವರಣೆ ನೀಡಿರುವ ಊರ್ವಶಿ, ಜನರು ನನ್ನ ಹೇಳಿಕೆಯನ್ನು ಈ ರೀತಿ ತಪ್ಪಾಗಿ ಅರ್ಥೈಸುತ್ತಾರೆ ಎಂದು ನನಗೆ ತಿಳಿದಿರಲಿಲ್ಲ. ಆರ್‌ಪಿ ಎಂದರೆ ಕ್ರಿಕೆಟಿಗ ರಿಷಬ್ ಪಂತ್ ಅಲ್ಲ. ಬದಲಿಗೆ ನನ್ನ ಸಹ ನಟ ರಾಮ್ ಪೋತಿನೇನಿ ಎಂದರ್ಥ. ಅಲ್ಲದೆ ರಿಷಬ್ ಪಂತ್ ಅವರನ್ನು ಆರ್‌ಪಿ ಎಂದೂ ಕರೆಯುತ್ತಾರೆ ಎಂದು ನನಗೆ ತಿಳಿದಿರಲಿಲ್ಲ ಎಂದು ಊರ್ವಶಿ ಹೇಳಿಕೊಂಡಿದ್ದಾರೆ.

ಊಹಪೋಹಗಳ ಬಗ್ಗೆ ಊರ್ವಶಿ ಉತ್ತರ

ಹಲವು ದಿನಗಳಿಂದ ರಿಷಬ್ ಪಂತ್ ಹಾಗೂ ಊರ್ವಶಿ ಬಗ್ಗೆ ಕೇಳಿಬರುತ್ತಿರುವ ಊಹಾಪೋಹಗಳ ಬಗ್ಗೆ ಮಾತನಾಡಿದ ನಟಿ, ಜನರು ಕೇವಲ ವಿಷಯಗಳನ್ನು ಊಹಿಸಿಕೊಳ್ಳುತ್ತಾ ಅವುಗಳ ಬಗ್ಗೆ ಬರೆಯುತ್ತಾರೆ. ಇಂತಹ ವದಂತಿಗಳನ್ನು ನಂಬುವವರಿಗೆ ಸ್ವಲ್ಪ ವಿಶ್ಲೇಷಣೆ ಮಾಡಿ ಎಂದು ಹೇಳುತ್ತೇನೆ. ನೀವೇನನ್ನೂ ನೈಜವಾಗಿ ನೋಡದೆ ಕೇವಲ ಯಾರೋ ಒಬ್ಬ ಯೂಟ್ಯೂಬರ್ ಅಥವಾ ಬೇರೊಬ್ಬ ವ್ಯಕ್ತಿ ಹೇಳಿದನ್ನು ಅಷ್ಟೂ ಸುಲಭವಾಗಿ ಹೇಗೆ ನಂಬುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ರಿಷಬ್ ಪಂತ್ ಮತ್ತು ಊರ್ವಶಿ ನಡುವಿನ ವಿವಾದ ಎಲ್ಲರಿಗೂ ತಿಳಿದೇ ಇದೆ. ಈ ವಿವಾದದ ನಡುವೆಯೂ ಟಿ20 ವಿಶ್ವಕಪ್ ವೇಳೆ ಊರ್ವಶಿ ಆಸ್ಟ್ರೇಲಿಯಾಕ್ಕೆ ಹೋಗಿದ್ದರು. ಆ ವೇಳೆ ಊರ್ವಶಿ ಬಾರಿ ಟ್ರೋಲ್‌ಗೆ ಒಳಗಾಗಿದ್ದರು. ಊರ್ವಶಿ ಅಲ್ಲಿಗೆ ಹೋಗಿದ್ದರಿಂದಲೇ ಪಂತ್ ಉತ್ತಮವಾಗಿ ಆಡಲಿಲ್ಲ ಎಂದು ಅನೇಕರು ಕಿಡಿಕಾರಿದ್ದರು.

ನಟರಿಗಿಂತ ಕ್ರಿಕೆಟಿಗರನ್ನು ಏಕೆ ಹೆಚ್ಚು ಗೌರವಿಸಲಾಗುತ್ತದೆ?

ಕ್ರಿಕೆಟಿಗರು ನಟರಿಗಿಂತ ಹೆಚ್ಚು ಗೌರವವನ್ನು ಪಡೆಯುತ್ತಾರೆ ಅಥವಾ ನಮಗಿಂತ ಹೆಚ್ಚು ಗಳಿಸುತ್ತಾರೆ ಎಂಬ ಹೋಲಿಕೆಗಳನ್ನು ನಾವು ಆಗಾಗ್ಗೆ ನೋಡುತ್ತೇವೆ. ಇದು ನನಗೆ ಬೇಸರ ತಂದಿದೆ. ಅವರು ದೇಶಕ್ಕಾಗಿ ಆಡುವುದರಿಂದ ಕೋಟ್ಯಾಂತರ ಅಭಿಮಾನಿಗಳ ಪ್ರೀತಿಯನ್ನು ಗಳಿಸುತ್ತಾರೆ ಎಂಬುದನ್ನು ನಾನು ಕೂಡ ಒಪ್ಪುತ್ತೇನೆ. ಆದರೆ ನಟರು ಕೂಡ ದೇಶಕ್ಕಾಗಿ ಸಾಕಷ್ಟು ಮಾಡಿದ್ದಾರೆ. ಕಲಾವಿದರೂ ದೇಶವನ್ನು ಪ್ರತಿನಿಧಿಸಿದ್ದಾರೆ. ನಾನೇ ಎಷ್ಟು ಬಾರಿ ಮಾಡಿದ್ದೇನೆ. ಆದರೆ ಈ ಹೋಲಿಕೆ ನನಗೆ ಇಷ್ಟವಿಲ್ಲ ಎಂದಿದ್ದಾರೆ.

ರಿಷಬ್ ಪಂತ್ ಟೀಸಿಂಗ್​ಗೆ ಪ್ರತಿಕ್ರಿಯೆ

ಹಲವು ಬಾರಿ ರಿಷಬ್ ಮೈದಾನದಲ್ಲಿ ಆಡುವಾಗ ಊರ್ವಶಿ ಹೆಸರನ್ನು ಬಳಸಿ ಹಲವಾರು ಅಭಿಮಾನಿಗಳು ಪಂತ್​ರನ್ನು ರೇಗಿಸಿದ ಸಾಕಷ್ಟು ನಿದರ್ಶನಗಳಿವೆ. ಈ ಬಗ್ಗೆಯೂ ಪ್ರತಿಕ್ರಿಯಿಸಿದ ಊರ್ವಶಿ, ಈ ದೇಶವನ್ನು ಪ್ರತಿನಿಧಿಸುವ ಯಾರನ್ನಾದರೂ ಗೌರವಿಸಬೇಕು. ಅವರನ್ನು ಸರಕಿನಂತೆ ಪರಿಗಣಿಸಬಾರದು. ಅವರನ್ನು ನಿಮ್ಮ ನೆರೆಹೊರೆಯವರಂತೆ ನಡೆಸಿಕೊಳ್ಳಬೇಡಿ. ಇಂತಹ ವರ್ತನೆಯನ್ನು ಬೇರೊಬ್ಬರ ಖಾಸಗಿ ಜೀವನದಲ್ಲಿ ಇಣುಕುವುದು ಎನ್ನುತ್ತಾರೆ. ನನಗೆ ಇಂತಹ ವರ್ತನೆಗಳು ಕೊಂಚವು ಇಷ್ಟವಿಲ್ಲ ಎಂದಿದ್ದಾರೆ.

ಇಷ್ಟು ದಿನ ಮೌನ ವಹಿಸಿದ್ದೇಕೆ?

ರಿಷಭ್ ಪಂತ್ ಜೊತೆಗಿನ ಅಫೇರ್ ಬಗ್ಗೆ ಇಷ್ಟು ದಿನ ಮೌನ ವಹಿಸಿದ್ದೇಕೆ ಎಂದು ಕೇಳಿದಾಗ, ನನ್ನ ಬಗ್ಗೆ ಜನರು ಏನು ಮಾತನಾಡಿಕೊಳ್ಳುತ್ತಾರೆ ಎಂಬುದಕ್ಕೆ ನಾನು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಟ್ರೋಲಿಂಗ್ ಜೀವನದ ಒಂದು ಭಾಗವಾಗಿದೆ. ಇದು ಒಂದು ಟ್ರೆಂಡ್‌ ಆಗಿದ್ದು, ಇದರ ಸುಳಿಗೆ ಪ್ರತಿಯೊಬ್ಬರೂ ಒಂದಲ್ಲ ಒಂದು ಸಮಯದಲ್ಲಿ ಗುರಿಯಾಗಿರುತ್ತಾರೆ. ಪ್ರಧಾನಿ ಕೂಡ ಇದಕ್ಕೆ ಹೊರತಾಗಿಲ್ಲ. ಆದರೆ ಜೀವನದಲ್ಲಿ ನಾವು ಯೋಚಿಸಬೇಕಾದ ಇನ್ನೂ ಅನೇಕ ವಿಷಯಗಳಿವೆ ಎಂದು ನಾನು ಭಾವಿಸುತ್ತೇನೆ. ಹಾಗಾಗಿ ನನ್ನ ಕೆಲಸದತ್ತ ಗಮನ ಹರಿಸಲು ನಾನು ಆದ್ಯತೆ ನೀಡುತ್ತೇನೆ ಎಂದು ಟ್ರೋಲರ್‌ಗಳಿಗೆ ಊರ್ವಶಿ ಉತ್ತರಿಸಿದರು.

Published On - 5:56 pm, Sat, 3 December 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ