AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ಈ ಬಾರಿಯ ಐಪಿಎಲ್​ನಿಂದ 5 ಆಟಗಾರರು ಔಟ್..!

IPL 2023 Auction Kannada: ಭಾರತದ 604 ಆಟಗಾರರು ಹಾಗೂ 88 ವಿದೇಶಿ ಆಟಗಾರರು ಚೊಚ್ಚಲ ಐಪಿಎಲ್​ ಅವಕಾಶ ಹೆಸರು ನೀಡಿದ್ದಾರೆ. ಆದರೆ ಕಳೆದ ಸೀಸನ್​ನಲ್ಲಿ ಐಪಿಎಲ್​ ಆಡಿದ್ದ ಐವರು ಆಟಗಾರರ ಹೆಸರು ಈ ಪಟ್ಟಿಯಲ್ಲಿ ಇಲ್ಲ ಎಂಬುದು ವಿಶೇಷ.

TV9 Web
| Edited By: |

Updated on: Dec 03, 2022 | 9:24 PM

Share
ಐಪಿಎಲ್ ಸೀಸನ್ 16 ಮಿನಿ ಹರಾಜಿಗಾಗಿ ವೇದಿಕೆ ಸಿದ್ಧವಾಗಿದೆ. ಡಿಸೆಂಬರ್ 23 ರಂದು ಕೊಚ್ಚಿನ್​ನಲ್ಲಿ ಮುಂದಿನ ಸೀಸನ್​ ಐಪಿಎಲ್​ಗಾಗಿ ಭರ್ಜರಿ ಬಿಡ್ಡಿಂಗ್ ನಡೆಯಲಿದೆ. ಈ ಹರಾಜಿಗಾಗಿ ಈಗಾಗಲೇ 991 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ.

1 / 9
ಈ ಹರಾಜು ಪಟ್ಟಿಯಲ್ಲಿ 714 ಭಾರತೀಯ ಆಟಗಾರರಿದ್ದರೆ, 277 ವಿದೇಶಿ ಆಟಗಾರರಿದ್ದಾರೆ. ಇವರಲ್ಲಿ 19 ಟೀಮ್ ಇಂಡಿಯಾ ಆಟಗಾರರು, 166 ವಿದೇಶಿ ರಾಷ್ಟ್ರೀಯ ಆಟಗಾರರು ಕಾಣಿಸಿಕೊಂಡಿದ್ದಾರೆ. ಹಾಗೆಯೇ ಅಸೋಸಿಯೇಟ್ ದೇಶದ 20 ಆಟಗಾರರು ಹೆಸರು ನೀಡಿದ್ದಾರೆ.

2 / 9
ಅದೇ ರೀತಿ ಈ ಪಟ್ಟಿಯಲ್ಲಿ ರಾಷ್ಟ್ರೀಯ ತಂಡದ ಪರ ಆಡದ, ಐಪಿಎಲ್​ನಲ್ಲಿ ಆಡಿದ 91 ಭಾರತೀಯ ಹಾಗೂ 3 ವಿದೇಶಿ ಆಟಗಾರರ ಹೆಸರು ಕಾಣಿಸಿಕೊಂಡಿದೆ. ಹಾಗೆಯೇ ಭಾರತದ 604 ಆಟಗಾರರು ಹಾಗೂ 88 ವಿದೇಶಿ ಆಟಗಾರರು ಚೊಚ್ಚಲ ಐಪಿಎಲ್​ ಅವಕಾಶ ಹೆಸರು ನೀಡಿದ್ದಾರೆ. ಆದರೆ ಕಳೆದ ಸೀಸನ್​ನಲ್ಲಿ ಐಪಿಎಲ್​ ಆಡಿದ್ದ ಐವರು ಆಟಗಾರರ ಹೆಸರು ಈ ಪಟ್ಟಿಯಲ್ಲಿ ಇಲ್ಲ ಎಂಬುದು ವಿಶೇಷ.

3 / 9
ಅಂದರೆ ಕಳೆದ ಸೀಸನ್​ನಲ್ಲಿ ಐಪಿಎಲ್​ನಲ್ಲಿ ಅವಕಾಶ ಪಡೆದು, ಈ ಬಾರಿ ಆ ತಂಡಗಳಿಂದ ಬಿಡುಗಡೆಯಾದ ಐವರು ಆಟಗಾರರು ಈ ಬಾರಿ ಮಿನಿ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಅವರೆಂದರೆ....

4 / 9
1- ಕೀರನ್ ಪೊಲಾರ್ಡ್​: ಐಪಿಎಲ್ 2022 ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಪೊಲಾರ್ಡ್ ಅವರನ್ನು ಈ ಬಾರಿ ರಿಲೀಸ್ ಮಾಡಿತ್ತು. ಇದರ ಬೆನ್ನಲ್ಲೇ ವೆಸ್ಟ್ ಇಂಡೀಸ್ ಆಟಗಾರ ಐಪಿಎಲ್​ಗೆ ವಿದಾಯ ಹೇಳಿದ್ದರು. ಹೀಗಾಗಿ ಈ ಬಾರಿಯ ಮಿನಿ ಹರಾಜಿಗೆ ಹೆಸರು ನೀಡಿಲ್ಲ. ಇದಾಗ್ಯೂ ಅವರು ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

5 / 9
2- ಡ್ವೇನ್ ಬ್ರಾವೊ: ಚೆನ್ನೈ ಸೂಪರ್ ಕಿಂಗ್ಸ್ ತಂಡವು ತಮ್ಮ ಸ್ಟಾರ್ ಆಲ್​ರೌಂಡರ್ ಡ್ವೇನ್ ಬ್ರಾವೊ ಅವರನ್ನು ಈ ಬಾರಿ ಬಿಡುಗಡೆ ಮಾಡಿತ್ತು. ಆದರೆ ಈ ಬಾರಿ ಬ್ರಾವೊ ಕೂಡ ಮಿನಿ ಹರಾಜಿಗೆ ಹೆಸರು ನೀಡಿಲ್ಲ. ಬದಲಾಗಿ ಸಿಎಸ್​ಕೆ ತಂಡದ ಬೌಲಿಂಗ್ ಕೋಚ್ ಆಗಿ ಕಾಣಿಸಿಕೊಳ್ಳಲು ಒಪ್ಪಂದ ಮಾಡಿಕೊಂಡಿದ್ದಾರೆ.

6 / 9
3- ಸ್ಯಾಮ್ ಬಿಲ್ಲಿಂಗ್: ಇಂಗ್ಲೆಂಡ್ ತಂಡದ ಆಟಗಾರ ಸ್ಯಾಮ್ ಬಿಲ್ಲಿಂಗ್ ಕಳೆದ ಸೀಸನ್​ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿದ್ದರು. ಆದರೆ ಈ ಬಾರಿ ಕೆಕೆಆರ್ ತಂಡವು ಬಿಲ್ಲಿಂಗ್ಸ್ ಅವರನ್ನು ರಿಲೀಸ್ ಮಾಡಿದೆ. ಇದಾಗ್ಯೂ ಅವರು ಮಿನಿ ಹರಾಜಿಗೆ ಹೆಸರು ನೀಡಿಲ್ಲ ಎಂಬುದು ವಿಶೇಷ.

7 / 9
4- ಪ್ಯಾಟ್ ಕಮಿನ್ಸ್​: ಐಪಿಎಲ್ ಸೀಸನ್ 15 ನಲ್ಲಿ ಕೆಕೆಆರ್ ತಂಡದಲ್ಲಿ ಕಾಣಿಸಿಕೊಂಡಿದ್ದ ಪ್ಯಾಟ್ ಕಮಿನ್ಸ್ ಈ ಬಾರಿಯ ಐಪಿಎಲ್​ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಹೀಗಾಗಿ ಈ ಬಾರಿಯ ಹರಾಜಿನಲ್ಲಿ ಹೆಸರು ನೋಂದಾಯಿಸಿಕೊಂಡಿಲ್ಲ.

8 / 9
5- ಅಲೆಕ್ಸ್ ಹೇಲ್ಸ್​: ಐಪಿಎಲ್ 2022 ರಲ್ಲಿ ಕೆಕೆಆರ್ ತಂಡಕ್ಕೆ ಆಯ್ಕೆಯಾಗಿದ್ದ ಅಲೆಕ್ಸ್ ಹೇಲ್ಸ್ ಅವರು ಕಾರಣಾಂತರಗಳಿಂದ ಟೂರ್ನಿಯನ್ನು ತಪ್ಪಿಸಿಕೊಂಡಿದ್ದರು. ಹೀಗಾಗಿ ಈ ಬಾರಿ ಕೆಕೆಆರ್ ತಂಡವು ಅವರನ್ನು ರಿಲೀಸ್ ಮಾಡಿತ್ತು. ಇದಾಗ್ಯೂ ಹೇಲ್ಸ್ ಈ ಬಾರಿ ಮಿನಿ ಹರಾಜಿಗಾಗಿ ಹೆಸರು ನೀಡಿಲ್ಲ ಎಂಬುದು ವಿಶೇಷ.

9 / 9
TV9 Web
TV9 Web

TV9 Kannada

Read More
Follow Us
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ

ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ

ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್

‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ

ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’

ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್

ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು

ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್

ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು

ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್