- Kannada News Photo gallery Cricket photos Urvashi rautela unfollowed pakistan naseem shah after pacer said he does not konw her
ಯಾರೀ ಊರ್ವಶಿ ಎಂದ ಪಾಕ್ ಬೌಲರ್; ಕೋಪಗೊಂಡ ಬಾಲಿವುಡ್ ನಟಿ ಮಾಡಿದ್ದೇನು ಗೊತ್ತಾ?
ಇದೀಗ ಊರ್ವಶಿ ಅವರ ಇನ್‌ಸ್ಟಾಗ್ರಾಂ ಖಾತೆಯ ಸ್ಕ್ರೀನ್‌ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಸೀಮ್ ಶಾ ಊರ್ವಶಿ ಯಾರೆಂದು ಗೊತ್ತಿಲ್ಲ ಎಂದು ಹೇಳಿದ ಬಳಿಕ, ನಸೀಮ್ ಅವರನ್ನು ಊರ್ವಶಿ ಸೋಶಿಯಲ್ ಮೀಡಿಯಾದಲ್ಲಿ ಅನ್ ಫಾಲೋ ಮಾಡಿದ್ದಾರೆ.
Updated on: Sep 12, 2022 | 3:56 PM

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸದಾ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಊರ್ವಶಿ ಹೆಸರು ಪಾಕ್ ಕ್ರಿಕೆಟರ್ ನಸೀಮ್ ಶಾ ಜೊತೆ ತಳುಕು ಹಾಕುತ್ತಿದೆ. ಈ ಹಿಂದೆ ಏಷ್ಯಾಕಪ್ ವೀಕ್ಷಿಸಲು ಊರ್ವಶಿ ದುಬೈಗೆ ತೆರಳಿದ್ದರು. ಈ ನಡುವೆ ಎಡಿಟ್ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಇಬ್ಬರಿಗೂ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿಕೊಂಡಿದ್ದಾರೆ.

ನನಗೆ ಊರ್ವಶಿ ರೌಟೇಲಾ ಗೊತ್ತಿಲ್ಲ ಎಂದು ಹೇಳಿಕೊಂಡಿರುವ ಪಾಕಿಸ್ತಾನದ ಬೌಲರ್ ನಸೀಮ್ ಶಾ, ಅವರು ಯಾರೆಂದು ನನಗೆ ಗೊತ್ತಿಲ್ಲ ಎಂದಿದ್ದಾರೆ. ಜೊತೆಗೆ ಊರ್ವಶಿ ಕೂಡ, ಎಡಿಟ್ ಮಾಡಿದ ವಿಡಿಯೋವನ್ನು ತಮ್ಮ ತಂಡ ಶೇರ್ ಮಾಡಿದೆ. ವೀಡಿಯೋದಲ್ಲಿ ಯಾರಿದ್ದಾರೆಂದು ನನಗೆ ತಿಳಿದಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ಇದೀಗ ಊರ್ವಶಿ ಅವರ ಇನ್‌ಸ್ಟಾಗ್ರಾಂ ಖಾತೆಯ ಸ್ಕ್ರೀನ್‌ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಸೀಮ್ ಶಾ ಊರ್ವಶಿ ಯಾರೆಂದು ಗೊತ್ತಿಲ್ಲ ಎಂದು ಹೇಳಿದ ಬಳಿಕ, ನಸೀಮ್ ಅವರನ್ನು ಊರ್ವಶಿ ಸೋಶಿಯಲ್ ಮೀಡಿಯಾದಲ್ಲಿ ಅನ್ ಫಾಲೋ ಮಾಡಿದ್ದಾರೆ.

ಕ್ರಿಕೆಟ್ ಪಾಕಿಸ್ತಾನ ಮತ್ತು ಬಳಕೆದಾರರು ಊರ್ವಶಿ ಖಾತೆಯ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದು, ಈ ಹಿಂದೆ ಊರ್ವಶಿ, ನಸೀಮ್ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡುತ್ತಿದ್ದರು.

ಆದರೆ ಈ ಪಾಕಿಸ್ತಾನಿ ಬೌಲರ್ ತನಗೆ ಊರ್ವಶಿ ಪರಿಚಯವಿಲ್ಲ ಎಂದು ಹೇಳಿದ ತಕ್ಷಣ, ನಟಿ ಅವರನ್ನು ಅನ್ ಫಾಲೋ ಮಾಡಿದ್ದಾರೆ.
























