AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಲವೇ ಸೆಕೆಂಡ್​ನ ಪ್ರಮೋಷನಲ್​ ವಿಡಿಯೋಗೆ 15 ಕೋಟಿ ರೂಪಾಯಿ ಚಾರ್ಜ್​ ಮಾಡಿದ ಊರ್ವಶಿ ರೌಟೇಲಾ

ಊರ್ವಶಿ ರೌಟೇಲಾ ಅವರ ಖ್ಯಾತಿ ಹೆಚ್ಚಿದೆ. ಈ ಕಾರಣಕ್ಕೆ ಅವರಿಗೆ ಸಿಕ್ಕಾಪಟ್ಟೆ ಆಫರ್​ಗಳು ಬರುತ್ತಿವೆ. 2018ರಿಂದ ಈಚೆಗೆ ಅವರು ಹೆಚ್ಚು ಆಫರ್ ಒಪ್ಪಿಕೊಂಡಿರಲಿಲ್ಲ. ಆದರೆ, ಈಗ ಅವರ ಕೈಯಲ್ಲಿ ನಾಲ್ಕು ಸಿನಿಮಾಗಳಿವೆ.

ಕೆಲವೇ ಸೆಕೆಂಡ್​ನ ಪ್ರಮೋಷನಲ್​ ವಿಡಿಯೋಗೆ 15 ಕೋಟಿ ರೂಪಾಯಿ ಚಾರ್ಜ್​ ಮಾಡಿದ ಊರ್ವಶಿ ರೌಟೇಲಾ
ಊರ್ವಶಿ
TV9 Web
| Edited By: |

Updated on: Dec 24, 2022 | 11:39 AM

Share

ನಟಿ ಊರ್ವಶಿ ರೌಟೇಲಾ (Urvashi Rautela) ಅವರು ಇತ್ತೀಚೆಗೆ ಸಾಕಷ್ಟು ಚರ್ಚೆಯಲ್ಲಿದ್ದಾರೆ. ಹಾಗಂತ ಇದು ಸಿನಿಮಾ ವಿಚಾರಕ್ಕೆ ಅಲ್ಲ. ಇದಕ್ಕೆ ಕಾರಣ ಕ್ರಿಕೆಟರ್ ರಿಷಭ್​ ಪಂತ್ (Rishabh Pant). ‘ಅವರು ನನ್ನ ಭೇಟಿ ಮಾಡಲು ಹಲವು ಗಂಟೆ ಕಾದಿದ್ದರು’ ಎಂದು ಊರ್ವಶಿ ಹೇಳಿದ್ದರು. ಇದರಿಂದ ರಿಷಭ್ ಸಿಟ್ಟಾಗಿದ್ದರು. ‘ಇದು ಜನಪ್ರಿಯತೆ ಪಡೆದುಕೊಳ್ಳಲು ಮಾಡಿದ ಗಿಮಿಕ್​’ ಎಂದು ರಿಷಭ್ ಆರೋಪಿಸಿದ್ದರು. ಇದರಿಂದ ಊರ್ವಶಿಗೆ ಸಖತ್ ಜನಪ್ರಿಯತೆ ಸಿಕ್ಕಿದೆ. ಇದರ ಲಾಭವನ್ನು ಅವರು ಪಡೆದುಕೊಳ್ಳುತ್ತಿದ್ದಾರೆ. ಈಗ ನೆಟ್​​ಫ್ಲಿಕ್ಸ್​ನ ಎರಡು ಸೆಕೆಂಡ್​ನ ವಿಡಿಯೋಗೆ 15 ಕೋಟಿ ರೂಪಾಯಿ ಚಾರ್ಜ್​ ಮಾಡಿದ್ದಾರೆ ಎಂದು ವರದಿ ಆಗಿದೆ. ಇದನ್ನು ಕೇಳಿ ಫ್ಯಾನ್ಸ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.

2022 ಪೂರ್ಣಗೊಳ್ಳುತ್ತಿದೆ. ಈ ಸಂದರ್ಭದಲ್ಲಿ ವಿಡಿಯೋ ಒಂದನ್ನು ಮಾಡಿದೆ ನೆಟ್​ಫ್ಲಿಕ್ಸ್​​. ತನ್ನ ಪ್ಲಾಟ್​ಫಾರ್ಮ್​ನಲ್ಲಿರುವ ಸಿನಿಮಾಗಳ ಪಾತ್ರಗಳನ್ನೇ ಇಟ್ಟುಕೊಂಡು ವಿಡಿಯೋ ಮಾಡಲಾಗಿದೆ. ಈ ವಿಡಿಯೋದಲ್ಲಿ ಉರ್ಫಿ ಜಾವೇದ್ ಮೊದಲಾದವರು ಇದ್ದಾರೆ. ಊರ್ವಶಿ ಅವರು ಕೂಡ ಈ ವಿಡಿಯೋದಲ್ಲಿದ್ದಾರೆ.  ಹಾಲಿವುಡ್​ ನಟ ರೈನ್​ ಗಾಸ್ಲಿಂಗ್ ಹಾಗೂ ಊರ್ವಶಿ ಎದುರುಬದುರು ಕೂತಿರುತ್ತಾರೆ. ಊರ್ವಶಿ ಕೈ ಮೇಲೆ ‘RP’ ಎಂದು ಬರೆದುಕೊಂಡಿದ್ದಾರೆ. P ಮೇಲೆ ಗೀಟು ಹಾಕಿ ‘ಜಿ’ ಎಂದು ಬರೆದುಕೊಂಡಿದ್ದಾರೆ. ಆರ್​ ಜಿ ಎಂದರೆ ರೈನ್​ ಗಾಸ್ಲಿಂಗ್ ಎಂದರ್ಥ. ಕೆಲವೇ ಸೆಕೆಂಡ್​ನಲ್ಲಿ ಮುಗಿಯುವ ಈ ದೃಶ್ಯಕ್ಕೆ ಅವರು ಇಷ್ಟು ದೊಡ್ಡ ಮೊತ್ತದ ಚಾರ್ಜ್​ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ.

ಇದನ್ನೂ ಓದಿ
Image
‘ಆರ್​​ಪಿ ಎಂದರೆ ರಿಷಬ್ ಪಂತ್ ಅಲ್ಲ’; ಬಹುದಿನಗಳ ವದಂತಿ ಬಗ್ಗೆ ಮೌನ ಮುರಿದ ನಟಿ ಊರ್ವಶಿ ರೌಟೇಲಾ
Image
‘ನಾನು ರಿಷಭ್ ಪಂತ್​ಗೆ ಕ್ಷಮೆ ಕೇಳಿದ್ದಲ್ಲ..’; ಮತ್ತೆ ಪ್ಲೇಟ್ ಬದಲಿಸಿದ ನಟಿ ಊರ್ವಶಿ ರೌಟೇಲಾ
Image
ಯಾರೀ ಊರ್ವಶಿ ಎಂದ ಪಾಕ್ ಬೌಲರ್; ಕೋಪಗೊಂಡ ಬಾಲಿವುಡ್ ನಟಿ ಮಾಡಿದ್ದೇನು ಗೊತ್ತಾ?
Image
Urvashi Rautela: ಪಾಕಿಸ್ತಾನ ಕ್ರಿಕೆಟಿಗನ ಜೊತೆ ರೊಮ್ಯಾಂಟಿಕ್ ವಿಡಿಯೋ ಹಂಚಿಕೊಂಡ ಊರ್ವಶಿ ರೌಟೇಲ

ಊರ್ವಶಿ ರೌಟೇಲಾ ಅವರ ಖ್ಯಾತಿ ಹೆಚ್ಚಿದೆ. ಈ ಕಾರಣಕ್ಕೆ ಅವರಿಗೆ ಸಿಕ್ಕಾಪಟ್ಟೆ ಆಫರ್​ಗಳು ಬರುತ್ತಿವೆ. 2018ರಿಂದ ಈಚೆಗೆ ಅವರು ಹೆಚ್ಚು ಆಫರ್ ಒಪ್ಪಿಕೊಂಡಿರಲಿಲ್ಲ. ಆದರೆ, ಈಗ ಅವರ ಕೈಯಲ್ಲಿ ನಾಲ್ಕು ಸಿನಿಮಾಗಳಿವೆ. ಮ್ಯೂಸಿಕ್ ವಿಡಿಯೋಗಳು ಕೂಡ ಅವರ ಕೈಯಲ್ಲಿವೆ. ಜನಪ್ರಿಯತೆ ಹೆಚ್ಚಿರುವುದರಿಂದ ಅವರು ಸಿನಿಮಾ ಸಂಭಾವನೆಯನ್ನೂ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ‘ಆರ್​​ಪಿ ಎಂದರೆ ರಿಷಬ್ ಪಂತ್ ಅಲ್ಲ’; ಬಹುದಿನಗಳ ವದಂತಿ ಬಗ್ಗೆ ಮೌನ ಮುರಿದ ನಟಿ ಊರ್ವಶಿ ರೌಟೇಲಾ

ಊರ್ವಶಿ ಜತೆ ಡೇಟಿಂಗ್ ಮಾಡಿದ್ದ ರಿಷಭ್​

ಊರ್ವಶಿ ಹಾಗೂ ರಿಷಭ್ 2018ರಲ್ಲಿ ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿದೆ. ಇಬ್ಬರೂ ಕೆಲವು ಕಡೆಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ನಂತರ ಇಬ್ಬರೂ ಬೇರೆ ಆದರು ಎನ್ನಲಾಗಿದೆ. ಆದರೆ, ಈ ವಿಚಾರವನ್ನು ರಿಷಭ್ ಪಂತ್ ಅಲ್ಲ ಗಳೆದಿದ್ದರು. ಜತೆಗೆ ಇಶಾ ನೇಗಿ ಜತೆ ರಿಲೇಶನ್​ಶಿಪ್​ನಲ್ಲಿರುವ ಬಗ್ಗೆ ಘೋಷಣೆ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಸರ್ಕಾರದ 100 ದಿನದ ಕಾರ್ಯಕ್ರಮಕ್ಕೆ ಬಂದ ಸಿದ್ದರಾಮಯ್ಯಗೆ ವಿಶೇಷ ಸ್ವಾಗತ
ಸರ್ಕಾರದ 100 ದಿನದ ಕಾರ್ಯಕ್ರಮಕ್ಕೆ ಬಂದ ಸಿದ್ದರಾಮಯ್ಯಗೆ ವಿಶೇಷ ಸ್ವಾಗತ
KSRTC ಬಸ್‌ನ ಸ್ಟೇರಿಂಗ್ ಕಟ್ ಆಗಿ ಪಲ್ಟಿ
KSRTC ಬಸ್‌ನ ಸ್ಟೇರಿಂಗ್ ಕಟ್ ಆಗಿ ಪಲ್ಟಿ
ಮುಂಗಾರಿನಲ್ಲೇ ಹೀಟ್ ವೇವ್! ಬೆಂಗಳೂರಿನಲ್ಲಿ ದಿನೇದಿನೆ ಹೆಚ್ಚಾಗುತ್ತಿದೆ ತಾಪ
ಮುಂಗಾರಿನಲ್ಲೇ ಹೀಟ್ ವೇವ್! ಬೆಂಗಳೂರಿನಲ್ಲಿ ದಿನೇದಿನೆ ಹೆಚ್ಚಾಗುತ್ತಿದೆ ತಾಪ
ಕಲಬುರಗಿ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ದಾಳಿ: ಕೈದಿಯಿಂದ ಮೊಬೈಲ್​​ ವಶ
ಕಲಬುರಗಿ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ದಾಳಿ: ಕೈದಿಯಿಂದ ಮೊಬೈಲ್​​ ವಶ
ಮಂಡ್ಯದ ವಸತಿಶಾಲೆಯಲ್ಲಿ ಮಕ್ಕಳಿಗೆ ಫುಡ್ ಪಾಯಿಸನ್
ಮಂಡ್ಯದ ವಸತಿಶಾಲೆಯಲ್ಲಿ ಮಕ್ಕಳಿಗೆ ಫುಡ್ ಪಾಯಿಸನ್
‘ಜೈಲಿನಲ್ಲಿ ಖುದ್ದು ಹಾಜರಿ ಬೇಕು’; ಹೈಕೋರ್ಟ್​​ನಲ್ಲಿ ದರ್ಶನ್ ಅರ್ಜಿ
‘ಜೈಲಿನಲ್ಲಿ ಖುದ್ದು ಹಾಜರಿ ಬೇಕು’; ಹೈಕೋರ್ಟ್​​ನಲ್ಲಿ ದರ್ಶನ್ ಅರ್ಜಿ
ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಅಣಕಿಸಿದ ವಿಡಿಯೋ ವೈರಲ್
ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಅಣಕಿಸಿದ ವಿಡಿಯೋ ವೈರಲ್
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್​ಎಸ್ ಡ್ಯಾಂಗೆ ಕಲರ್​ಫುಲ್​ ​ಲೈಟಿಂಗ್
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್​ಎಸ್ ಡ್ಯಾಂಗೆ ಕಲರ್​ಫುಲ್​ ​ಲೈಟಿಂಗ್
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ