‘ನಾನು ರಿಷಭ್ ಪಂತ್​ಗೆ ಕ್ಷಮೆ ಕೇಳಿದ್ದಲ್ಲ..’; ಮತ್ತೆ ಪ್ಲೇಟ್ ಬದಲಿಸಿದ ನಟಿ ಊರ್ವಶಿ ರೌಟೇಲಾ

ಊರ್ವಶಿ ಕ್ಷಮೆ ಕೇಳಿದ ನಂತರದಲ್ಲಿ ಸಾಕಷ್ಟು ಸೋಶಿಯಲ್ ಮೀಡಿಯಾ ಪೇಜ್​ಗಳು ಈ ವಿಚಾರವನ್ನು ಟ್ರೋಲ್ ಮಾಡಿದ್ದವು. ನಾನಾ ರೀತಿಯ ಮೀಮ್​ಗಳು ಹರಿದಾಡಿದ್ದವು.

‘ನಾನು ರಿಷಭ್ ಪಂತ್​ಗೆ ಕ್ಷಮೆ ಕೇಳಿದ್ದಲ್ಲ..’; ಮತ್ತೆ ಪ್ಲೇಟ್ ಬದಲಿಸಿದ ನಟಿ ಊರ್ವಶಿ ರೌಟೇಲಾ
ಊರ್ವಶಿ-ರಿಷಭ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 14, 2022 | 10:04 PM

ನಟಿ ಊರ್ವಶಿ ರೌಟೇಲಾ (Urvashi Rautela) ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಟೀಂ ಇಂಡಿಯಾ ಆಟಗಾರ ‘ರಿಷಭ್ ಪಂತ್ (Rishab Pant) ನನ್ನನ್ನು ಭೇಟಿ ಮಾಡಲು 10 ಗಂಟೆ ಕಾದಿದ್ದರು’ ಎಂದು ಹೇಳುವ ಮೂಲಕ ಸೆನ್ಸೇಷನ್ ಸೃಷ್ಟಿ ಮಾಡಿದ್ದರು. ಈ ಹೇಳಿಕೆಗೆ ರಿಷಭ್ ಪಂತ್ ತಿರುಗೇಟು ನೀಡಿದ್ದರು. ಇಬ್ಬರ ಮಧ್ಯೆ ವಾಕ್ಸಮರ ನಡೆದೇ ಇತ್ತು. ಇತ್ತೀಚೆಗೆ ಊರ್ವಶಿ ಅವರು ಕ್ಷಮೆ ಕೇಳಿದ್ದರು. ಆದರೆ, ಇದು ರಿಷಭ್ ಪಂತ್​ಗೆ ಕೇಳಿದ ಕ್ಷಮೆ ಅಲ್ಲವಂತೆ! ಅವರು ಕ್ಷಮೆ ಕೇಳಿದ್ದು ಫ್ಯಾನ್ಸ್​​ಗಂತೆ. ಸದ್ಯ ಹೊಸ ಹೇಳಿಕೆ ನೀಡುವ ಮೂಲಕ ಊರ್ವಶಿ ಚರ್ಚೆಯಲ್ಲಿದ್ದಾರೆ.

ಇತ್ತೀಚೆಗೆ ಊರ್ವಶಿ ಅವರು ಸಂದರ್ಶನ ಒಂದನ್ನು ನೀಡಿದ್ದರು. ‘ರಿಷಭ್ ಪಂತ್​ಗೆ ಏನಾದರೂ ಸಂದೇಶ ನೀಡುವುದು ಇದೆಯೇ’ ಎಂದು ಊರ್ವಶಿಗೆ ಪ್ರಶ್ನೆ ಮಾಡಲಾಯಿತು. ಇದಕ್ಕೆ ಉತ್ತರಿಸಿದ್ದ ಅವರು, ‘ನೇರವಾಗಿ ವಿಚಾರಕ್ಕೆ ಬರುತ್ತೇನೆ. ಯಾವುದೇ ನಾನ್ಸೆಸ್ ಮಾತನಾಡುವುದಿಲ್ಲ’ ಎಂದಿದ್ದರು. ಆ ಬಳಿಕ ಅವರಿಗೆ ಮತ್ತೆ ರಿಷಭ್​ಗೆ ಏನಾದರೂ ಸಂದೇಶವಿದ್ದರೆ ತಿಳಿಸಿ, ಎಂದು ಕೇಳಲಾಯಿತು. ‘ಮತ್ತೇನು ಇಲ್ಲ. ಸಾರಿ’ ಎಂದಿದ್ದರು.

ಊರ್ವಶಿ ಕ್ಷಮೆ ಕೇಳಿದ ನಂತರದಲ್ಲಿ ಸಾಕಷ್ಟು ಸೋಶಿಯಲ್ ಮೀಡಿಯಾ ಪೇಜ್​ಗಳು ಈ ವಿಚಾರವನ್ನು ಟ್ರೋಲ್ ಮಾಡಿದ್ದವು. ನಾನಾ ರೀತಿಯ ಮೀಮ್​ಗಳು ಹರಿದಾಡಿದ್ದವು. ಕೊನೆಗೂ ಈ ಸಮರಕ್ಕೆ ಬ್ರೇಕ್ ಬಿದ್ದಿತು ಎಂದು ಫ್ಯಾನ್ಸ್ ಭಾವಿಸಿದ್ದರು. ಆದರೆ, ಅದು ಉಲ್ಟಾ ಆಗಿದೆ! ಈಗ ಊರ್ವಶಿ ಅವರು ಹೊಸ ರಾಗ ತೆಗೆದಿದ್ದಾರೆ.

ಇದನ್ನೂ ಓದಿ
Image
ಯಾರೀ ಊರ್ವಶಿ ಎಂದ ಪಾಕ್ ಬೌಲರ್; ಕೋಪಗೊಂಡ ಬಾಲಿವುಡ್ ನಟಿ ಮಾಡಿದ್ದೇನು ಗೊತ್ತಾ?
Image
Urvashi Rautela: ಪಾಕಿಸ್ತಾನ ಕ್ರಿಕೆಟಿಗನ ಜೊತೆ ರೊಮ್ಯಾಂಟಿಕ್ ವಿಡಿಯೋ ಹಂಚಿಕೊಂಡ ಊರ್ವಶಿ ರೌಟೇಲ
Image
Rishabh Pant-Urvashi Rautela: ‘ನಿಮ್ಮ ಗೌರವ ಉಳಿಸಿದ್ದೇನೆ’; ಪಂತ್​ಗೆ ಮತ್ತೊಂದು ಪಂಚ್ ನೀಡಿದ ನಟಿ ಊರ್ವಶಿ..!

ಇನ್​​ಸ್ಟಾಗ್ರಾಮ್ ಸ್ಟೋರಿಯಲ್ಲಿ ಊರ್ವಶಿ ಈ ಬಗ್ಗೆ ಬರೆದುಕೊಂಡಿದ್ದಾರೆ. ‘ಸುದ್ದಿ ವಾಹಿನಿಗಳು ಹಾಗೂ ಮೀಮ್ ಪೇಜ್​ಗಳು ಟಿವಿ ಶೋ ಹಾಗೂ ಸಿನಿಮಾಗಿಂತ ಒಳ್ಳೆಯ ಸ್ಕ್ರಿಪ್ಟ್ ಬರೆಯುತ್ತಿವೆ. ನಾನು ಕ್ಷಮೆ ಕೇಳಿದ್ದು ನನ್ನ ಫ್ಯಾನ್ಸ್​ಗೆ ಹಾಗೂ ಪ್ರೀತಿಪಾತ್ರರಿಗೆ’ ಎಂದು ಹೇಳಿದ್ದಾರೆ ಅವರು. ಊರ್ವಶಿ ಹೊಸ ಹೇಳಿಕೆ ಮತ್ತೆ ಸೆನ್ಸೇಶನ್ ಸೃಷ್ಟಿ ಮಾಡಿದೆ.

ಇದನ್ನೂ ಓದಿ: ಯಾರೀ ಊರ್ವಶಿ ಎಂದ ಪಾಕ್ ಬೌಲರ್; ಕೋಪಗೊಂಡ ಬಾಲಿವುಡ್ ನಟಿ ಮಾಡಿದ್ದೇನು ಗೊತ್ತಾ?

ಊರ್ವಶಿ ಹಾಗೂ ರಿಷಬ್ 2018ರಲ್ಲಿ ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿದೆ. ಇಬ್ಬರೂ ಕೆಲವು ಕಡೆಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ನಂತರ ಇಬ್ಬರೂ ಬೇರೆ ಆದರು ಎನ್ನಲಾಗಿದೆ. ಆದರೆ, ಈ ವಿಚಾರವನ್ನು ರಿಷಭ್ ಪಂತ್ ಅಲ್ಲ ಗಳೆದಿದ್ದರು. ಜತೆಗೆ ಇಶಾ ನೇಗಿ ಜತೆ ರಿಲೇಶನ್​ಶಿಪ್​ನಲ್ಲಿರುವ ಬಗ್ಗೆ ಘೋಷಣೆ ಮಾಡಿದ್ದರು.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ