- Kannada News Photo gallery Cricket photos Rishabh pant urvashi rautela social media battle continues actress new post
Rishabh Pant-Urvashi Rautela: ‘ನಿಮ್ಮ ಗೌರವ ಉಳಿಸಿದ್ದೇನೆ’; ಪಂತ್ಗೆ ಮತ್ತೊಂದು ಪಂಚ್ ನೀಡಿದ ನಟಿ ಊರ್ವಶಿ..!
Rishabh Pant-Urvashi Rautela: ಊರ್ವಶಿ ಅವರ ಈ ಪೋಸ್ಟ್ ನೋಡಿದ ಅಭಿಮಾನಿಗಳು, ಪಂತ್ ಬಗ್ಗೆ ಊರ್ವಶಿ ಈ ಪೋಸ್ಟ್ ಮಾಡಿದ್ದಾರೆ ಎಂದು ಚರ್ಚಿಸಲು ಪ್ರಾರಂಭಿಸಿದ್ದಾರೆ.
Updated on: Aug 26, 2022 | 7:39 PM

ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಊರ್ವಶಿ ರೌಟೇಲಾ ಮತ್ತು ರಿಷಬ್ ಪಂತ್ ನಡುವೆ ಶುರುವಾದ ಕದನ ಇನ್ನೂ ನಿಂತಿಲ್ಲ. ಪಂತ್ ಒಂದು ಹಂತದಲ್ಲಿ ಈ ಇನ್‌ಸ್ಟಾ ಯುದ್ದಕ್ಕೆ ಅಂತ್ಯ ಹಾಡಿದರು. ಆದರೆ ಊರ್ವಶಿ ಮಾತ್ರ ಇನ್ನೂ ಪಂತ್ ಅವರನ್ನು ಟಾರ್ಗೆಟ್ ಮಾಡಿ ಪೋಸ್ಟ್ ಹಾಕುತ್ತಿದ್ದಾರೆ.

ಇತ್ತೀಚಿಗೆ ಊರ್ವಶಿ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಾಕಿದ್ದು, ಅದಸರಲ್ಲಿ ಅವರು ಸುಂದರವಾದ ಉಡುಪನ್ನು ಧರಿಸಿದ್ದಾರೆ. ಆದರೆ ಅವರ ಪೋಸ್ಟ್‌ಗಳಿಗಿಂತ ಅವರು ನೀಡಿರುವ ಶೀರ್ಷಿಕೆ ಹೆಚ್ಚು ಮಾತನಾಡುತ್ತಿದೆ. ಊರ್ವಶಿ ತಮ್ಮ ಶೀರ್ಷಿಕೆಯಲ್ಲಿ, ನಿಮ್ಮ ಗೌರವವನ್ನು ಉಳಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಊರ್ವಶಿ ಅವರ ಈ ಪೋಸ್ಟ್ ನೋಡಿದ ಅಭಿಮಾನಿಗಳು, ಪಂತ್ ಬಗ್ಗೆ ಊರ್ವಶಿ ಈ ಪೋಸ್ಟ್ ಮಾಡಿದ್ದಾರೆ ಎಂದು ಚರ್ಚಿಸಲು ಪ್ರಾರಂಭಿಸಿದ್ದಾರೆ. ಈ ಹಿಂದೆ ಆರ್‌ಪಿ ಎಂಬ ವ್ಯಕ್ತಿ ತನ್ನನ್ನು ಭೇಟಿಯಾಗಲು ದೆಹಲಿಯ ಹೋಟೆಲ್‌ನಲ್ಲಿ ಹಲವು ಗಂಟೆಗಳ ಕಾಲ ಕಾಯುತ್ತಿದ್ದರು ಎಂದು ಊರ್ವಶಿ ಸಂದರ್ಶನವೊಂದರಲ್ಲಿ ಹೇಳಿದ್ದರು.

ಈ ಹೇಳಿಕೆಯನ್ನು ನೋಡಿದ ಪಂತ್, ನಂತರ ಇನ್‌ಸ್ಟಾ ಸ್ಟೋರಿಯಲ್ಲಿ ಪೋಸ್ಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದರು. ಪಂತ್ ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ 'ನನ್ನ ಬೆನ್ನಟ್ಟುವುದನ್ನು ನಿಲ್ಲಿಸಿ, ಸುಳ್ಳು ಹೇಳುವುದಕ್ಕೂ ಮಿತಿಯಿದೆ' ಎಂದು ಹೇಳಿದ್ದರು.

ಇದಾದ ಬಳಿಕ ಊರ್ವಶಿ ರಿಷಭ್‌ಗೆ ಸಾಮಾಜಿಕ ಜಾಲತಾಣದಲ್ಲಿ ಉತ್ತರಿಸಿ, 'ಛೋಟು ಭಯ್ಯಾ ನೀನು ಕೇವಲ ಬ್ಯಾಟ್ ಬಾಲ್ ಮಾತ್ರ ಆಡು ಎಂದು ಟಾಂಗ್ ನೀಡಿದ್ದರು. ಅಲ್ಲಿಂದ ಶುರುವಾದ ಇವರ ನಡುವೆ ಶುರುವಾದ ಈ ಮಾತಿನ ಚಕಮಕಿ ಇನ್ನೂ ಮುಂದುವರೆದಿದೆ.




