‘ನಾನು ಇನ್ಮುಂದೆ ಮಾತಾಡಲ್ಲ’; ಸಾನ್ಯಾ-ರೂಪೇಶ್ ಮಧ್ಯೆ ಹೆಚ್ಚುತ್ತಿದೆ ಮನಸ್ತಾಪ

ರೂಪೇಶ್ ಅವರು ಸಣ್ಣ ಸಣ್ಣ ವಿಚಾರಕ್ಕೆ ಸಾನ್ಯಾ ಜತೆ ಜಗಳ ಆಡುತ್ತಿದ್ದಾರೆ. ಇದು ವೀಕ್ಷಕರ ಗಮನಕ್ಕೆ ಬಂದಿದೆ. ‘ಇನ್ಮುಂದೆ ನಾನು ನಿನ್ನ ಜತೆ ಮಾತನಾಡಲ್ಲ’ ಎಂದು ರೂಪೇಶ್ ಹೇಳಿದರು. ಇದನ್ನು ಕೇಳಿ ಸಾನ್ಯಾ ಬೇಸರ ಹೊರಹಾಕಿದ್ದಾರೆ.

‘ನಾನು ಇನ್ಮುಂದೆ ಮಾತಾಡಲ್ಲ’; ಸಾನ್ಯಾ-ರೂಪೇಶ್ ಮಧ್ಯೆ ಹೆಚ್ಚುತ್ತಿದೆ ಮನಸ್ತಾಪ
ರೂಪೇಶ್​-ಸಾನ್ಯಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 15, 2022 | 6:30 AM

ರೂಪೇಶ್ ಶೆಟ್ಟಿ (Roopesh Shetty) ಹಾಗೂ ಸಾನ್ಯಾ ಅಯ್ಯರ್ ಬಿಗ್ ಬಾಸ್ ಮನೆಯಲ್ಲಿ ಕ್ಲೋಸ್ ಆಗಿದ್ದಾರೆ. ಇಬ್ಬರೂ ಸಾಕಷ್ಟು ಸಮಯವನ್ನು ಒಟ್ಟಾಗಿ ಕಳೆಯುತ್ತಿದ್ದಾರೆ. ಆರಂಭದಿಂದಲೂ ಇವರ ಮಧ್ಯೆ ಒಳ್ಳೆಯ ಕನೆಕ್ಷನ್ ಬೆಳೆದಿದೆ. ಇಬ್ಬರೂ ಕ್ಲೋಸ್ ಆಗಿದ್ದಾರೆ. ಆದರೆ, ಕೊನೆಯ ವಾರ ಸಮೀಪಿಸುತ್ತಿದ್ದಂತೆ ಇವರ ಮಧ್ಯೆ ಮನಸ್ತಾಪ ಹೆಚ್ಚಾಗಿದೆ. ಹೀಗಾಗಿ, ಪದೇಪದೇ ಜಗಳ ಆಗುತ್ತಿದೆ. ಇದು ವೀಕ್ಷಕರ ಗಮನಕ್ಕೆ ಬಂದಿದೆ. ಇದು ಸಾನ್ಯಾ-ರೂಪೇಶ್​ ಪರ್ಫಾರ್ಮೆನ್ಸ್ ಮೇಲೆ ನೇರ ಪರಿಣಾಮ ಬೀರುವ ಸೂಚನೆ ಸಿಕ್ಕಿದೆ.

ಸಾನ್ಯಾ ಅಯ್ಯರ್ ಹಾಗೂ ರೂಪೇಶ್ ಶೆಟ್ಟಿಗೆ ಬಿಗ್ ಬಾಸ್ ಮನೆಯಲ್ಲಿ ಪರಿಚಯ ಬೆಳೆಯಿತು. ಸಾನ್ಯಾಗೆ ಕಿರುತೆರೆ ಹಿನ್ನೆಲೆ ಇದೆ. ರೂಪೇಶ್ ತುಳು ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದವರು. ಆರ್​ಜೆ ಆಗಿಯೂ ಅವರು ಕೆಲಸ ಮಾಡುತ್ತಿದ್ದರು. ಇಬ್ಬರೂ ಕೆಲಸ ಮಾಡುವ ಇಂಡಸ್ಟ್ರಿಗೆ ಸಾಮ್ಯತೆ ಇದ್ದಿದ್ದರಿಂದ ಹಾಗೂ ಆಲೋಚನೆಗಳು ಹೊಂದಾಣಿಕೆ ಆದ ಕಾರಣ ಇಬ್ಬರ ಮಧ್ಯೆ ಬಾಂಧವ್ಯ ಬೆಳೆದಿದೆ.

ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಅಯ್ಯರ್ ಒಟ್ಟಿಗೆ ಇರುವ ಬಗ್ಗೆ ಮನೆಯಲ್ಲಿ ಅನೇಕರು ಕೊಂಕು ತೆಗೆದಿದ್ದು ಇದೆ. ಸೋಮಣ್ಣ ಮಾಚಿಮಾಡ ಅವರು ಅನೇಕ ಬಾರಿ ರೂಪೇಶ್ ಹಾಗೂ ಸಾನ್ಯಾ ಜತೆ ಇದೇ ವಿಚಾರಕ್ಕೆ ಜಗಳ ಮಾಡಿದ್ದರು. ಆದರೆ, ಇವರು ಬೇರೆ ಆಗಿಲ್ಲ. ನಮ್ಮ ಮಧ್ಯೆ ಇರೋದು ಫ್ರೆಂಡ್​ಶಿಪ್ ಎಂದು ಹೇಳಿಕೊಳ್ಳುತ್ತಾ ಬರುತ್ತಿದ್ದಾರೆ. ಆದರೆ, ಇತ್ತೀಚೆಗೆ ರೂಪೇಶ್​ ಬೇರೆಯದೇ ರೀತಿಯಲ್ಲಿ ವರ್ತಿಸುತ್ತಿದ್ದಾರೆ.

ಇದನ್ನೂ ಓದಿ
Image
ದೊಡ್ಮನೆಯಲ್ಲಿ ಎದೆ ಬಡಿದುಕೊಂಡು ಅತ್ತ ಜಯಶ್ರೀ; ಬಿಗ್​ ಬಾಸ್​ ಶೋನಲ್ಲಿ ಅಂಥದ್ದೇನಾಯ್ತು?
Image
BBK: ಬಿಗ್​ ಬಾಸ್​ಗೆ ಅವಮಾನ ಮಾಡಿದ ಸೋನು ಗೌಡ; ಮುಲಾಜಿಲ್ಲದೇ ಕ್ಲಾಸ್​ ತೆಗೆದುಕೊಂಡ ಕಿಚ್ಚ ಸುದೀಪ್​
Image
ಬಿಗ್​ ಬಾಸ್​ನಲ್ಲಿ ಹುಡುಗರಿಗೆ ಹೊರಗಿನಿಂದ ಸಿಗುತ್ತಿದೆ ಆ ಒಂದು ವಸ್ತು; ಸೋನು ಹೇಳಿಯೇ ಬಿಟ್ರು
Image
‘ಬಿಗ್​ ಬಾಸ್​ ಒಟಿಟಿ’ ಮನೆಯೊಳಗೆ ನಿಜವಾಗಿ ಏನೆಲ್ಲ ನಡೆಯಿತು? ಎಲ್ಲವನ್ನೂ ವಿವರಿಸಿದ ಸ್ಫೂರ್ತಿ ಗೌಡ

ರೂಪೇಶ್ ಅವರು ಸಣ್ಣ ಸಣ್ಣ ವಿಚಾರಕ್ಕೆ ಸಾನ್ಯಾ ಜತೆ ಜಗಳ ಆಡುತ್ತಿದ್ದಾರೆ. ಇದು ವೀಕ್ಷಕರ ಗಮನಕ್ಕೆ ಬಂದಿದೆ. ‘ಇನ್ಮುಂದೆ ನಾನು ನಿನ್ನ ಜತೆ ಮಾತನಾಡಲ್ಲ’ ಎಂದು ರೂಪೇಶ್ ಹೇಳಿದರು. ಇದನ್ನು ಕೇಳಿ ಸಾನ್ಯಾ ಬೇಸರ ಹೊರಹಾಕಿದ್ದಾರೆ. ಇಬ್ಬರ ನಡುವೆ ಮನಸ್ತಾಪ ಮುಂದುವರಿದೇ ಇದೆ.

ಒಂದು ಹಂತದಲ್ಲಿ ‘ನೀನು ಉದಯ್ ರೀತಿಯಲ್ಲಿ ಆಡ್ತಾ ಇದ್ದೀಯಾ’ ಎಂದು ರೂಪೇಶ್​ಗೆ ಸಾನ್ಯಾ ಹೇಳಿದರು. ಇದನ್ನು ಕೇಳಿ ರೂಪೇಶ್ ಮತ್ತೆ ಸಿಟ್ಟಾದರು. ‘ಯಾರ್ಯಾರನ್ನೋ ನನಗೆ ಹೋಲಿಕೆ ಮಾಡಬೇಡ. ಸಿಟ್ಟು ಬಂದಿದೆ ಎಂದು ಅವನಿಗೆಲ್ಲ ನನ್ನನ್ನು ಹೋಲಿಕೆ ಮಾಡಿದರೆ? ಇದು ನಿಜಕ್ಕೂ ಬೇಸರ ಮೂಡಿಸಿತು’ ಎಂದು ರೂಪೇಶ್ ಬೇಸರ ಹೊರಹಾಕಿದರು.

ಇದನ್ನೂ ಓದಿ: ಪ್ರೇಯಸಿ ನಂದಿನಿ ಔಟ್​ ಆದ್ಮೇಲೆ ಸಾನ್ಯಾ ಜತೆ ಹೆಚ್ಚಿತು ಜಶ್ವಂತ್​ ಸಲುಗೆ; ರೂಪೇಶ್​ಗೆ ಟೆನ್ಷನ್​ ಶುರು

ಇಬ್ಬರ ಮಧ್ಯೆ ಈ ರೀತಿ ವಿಚಾರ, ಕಿತ್ತಾಟ ನಡೆದೇ ಇತ್ತು. ಇದರಿಂದ ಅವರ ಪರ್ಫಾರ್ಮೆನ್ಸ್ ಮೇಲೆ ಪ್ರಭಾವ ಬೀರುತ್ತಿದೆ. ಒಟಿಟಿ ಫಿನಾಲೆಗೆ ಕೆಲವೇ ದಿನ ಮಾತ್ರ ಬಾಕಿ ಇದೆ. ಈ ಹಂತದಲ್ಲಿ ಇಬ್ಬರು ಈ ರೀತಿ ಕಿತ್ತಾಟ ಮಾಡಿಕೊಳ್ಳುವುದು ಮುಂದಿನ ಆಟದ ಮೇಲೆ ಪ್ರಭಾವ ಬೀರಬಹುದು.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ