Ponniyin Selvan: 125 ಕೋಟಿ ರೂಪಾಯಿಗೆ ‘ಪೊನ್ನಿಯಿನ್ ಸೆಲ್ವನ್’ ಒಟಿಟಿ ಹಕ್ಕು ಮಾರಾಟ; ಮಣಿರತ್ನಂ ಚಿತ್ರಕ್ಕೆ ಭಾರಿ ಬಿಸ್ನೆಸ್
Amazon Prime Video: ‘ಪೊನ್ನಿಯಿನ್ ಸೆಲ್ವನ್’ ರೀತಿಯ ಹೈ ಬಜೆಟ್ ಸಿನಿಮಾ ಎಂದರೆ ಮಾರುಕಟ್ಟೆ ದೊಡ್ಡದಾಗಿಯೇ ಇರುತ್ತದೆ. 125 ಕೋಟಿ ರೂಪಾಯಿ ನೀಡಿ ಒಟಿಟಿ ಹಕ್ಕುಗಳನ್ನು ‘ಅಮೇಜಾನ್ ಪ್ರೈಂ ವಿಡಿಯೋ’ ಸಂಸ್ಥೆ ಖರೀದಿಸಿದೆ.
ಚಿತ್ರಮಂದಿರದಲ್ಲಿ ರಿಲೀಸ್ ಆಗುವ ಎಲ್ಲ ಹೈ ಬಜೆಟ್ ಸಿನಿಮಾಗಳಿಗೆ ನಷ್ಟದ ಭಯ ಇದ್ದೇ ಇರುತ್ತದೆ. ಆದರೆ ಒಟಿಟಿ (OTT) ಆಯ್ಕೆ ಇರುವುದರಿಂದ ಅಲ್ಲಿಂದಲೂ ಭರ್ಜರಿ ಲಾಭ ಮಾಡಬಹುದು. ಇದೇ ಸೂತ್ರವನ್ನು ‘ಪೊನ್ನಿಯಿನ್ ಸೆಲ್ವನ್’ (Ponniyin Selvan) ಸಿನಿಮಾ ಫಾಲೋ ಮಾಡಿದೆ. ಸೆಪ್ಟೆಂಬರ್ 30ರಂದು ಚಿತ್ರಮಂದಿರದಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಬಾಕ್ಸ್ ಆಫೀಸ್ನಲ್ಲಿ ಎಷ್ಟು ಕಲೆಕ್ಷನ್ ಆಗುತ್ತೋ ಬಿಡುತ್ತೋ ಗೊತ್ತಿಲ್ಲ. ಆದರೆ ಅದಕ್ಕೂ ಮುನ್ನವೇ ಒಟಿಟಿ ಪ್ರಸಾರ ಹಕ್ಕುಗಳನ್ನು ಮಾರಾಟ ಮಾಡುವ ಮೂಲಕ ಈ ಚಿತ್ರ ಬರೋಬ್ಬರಿ 125 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ ಎಂದು ವರದಿ ಆಗಿದೆ. ಅಮೇಜಾನ್ ಪ್ರೈಂ ವಿಡಿಯೋಗೆ (Amazon Prime Video) ಇದರ ಒಟಿಟಿ ಪ್ರಸಾರ ಹಕ್ಕುಗಳು ಮಾರಾಟ ಆಗಿವೆ ಎನ್ನಲಾಗಿದೆ. ಈ ಚಿತ್ರಕ್ಕೆ ಮಣಿರತ್ನಂ ನಿರ್ದೇಶನ ಮಾಡಿದ್ದಾರೆ.
ಲಾಕ್ಡೌನ್ ಬಳಿಕ ಒಟಿಟಿಯಲ್ಲಿ ಮನರಂಜನೆ ಬಯಸುವವರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಬಹುನಿರೀಕ್ಷಿತ ಸಿನಿಮಾಗಳನ್ನು ಕೊಂಡುಕೊಳ್ಳಲು ಒಟಿಟಿ ಸಂಸ್ಥೆಗಳು ಮುಂದೆ ಬಂದಿವೆ. ಎಲ್ಲ ಒಟಿಟಿ ಪ್ಲಾಟ್ಫಾರ್ಮ್ಗಳ ನಡುವೆ ಭರ್ಜರಿ ಪೈಪೋಟಿ ಇದೆ. ಅದರಲ್ಲೂ ‘ಪೊನ್ನಿಯಿನ್ ಸೆಲ್ವನ್’ ರೀತಿಯ ಹೈ ಬಜೆಟ್ ಸಿನಿಮಾ ಎಂದರೆ ಮಾರುಕಟ್ಟೆ ದೊಡ್ಡದಾಗಿಯೇ ಇರುತ್ತದೆ. 125 ಕೋಟಿ ರೂಪಾಯಿ ನೀಡಿ ಒಟಿಟಿ ಹಕ್ಕುಗಳನ್ನು ‘ಅಮೇಜಾನ್ ಪ್ರೈಂ ವಿಡಿಯೋ’ ಸಂಸ್ಥೆ ಖರೀದಿಸಿದ್ದು, ಟಿವಿ ಪ್ರಸಾರ ಹಕ್ಕುಗಳು ಸನ್ ನೆಟ್ವರ್ಕ್ ಪಾಲಾಗಿವೆ ಎನ್ನಲಾಗಿದೆ. ಆದರೆ ಅದರಿಂದ ಎಷ್ಟು ಹಣ ಬಂದಿದೆ ಎಂಬುದು ಸದ್ಯಕ್ಕೆ ಬಹಿರಂಗ ಆಗಿಲ್ಲ.
‘ಪೊನ್ನಿಯಿನ್ ಸೆಲ್ವನ್’ ಚಿತ್ರದಲ್ಲಿ ಬಹುತಾರಾಗಣ ಇದೆ. ಐಶ್ವರ್ಯಾ ರೈ ಬಚ್ಚನ್, ಚಿಯಾನ್ ವಿಕ್ರಮ್, ಕಾರ್ತಿ, ಜಯಂ ರವಿ, ತ್ರಿಷಾ, ಪ್ರಕಾಶ್ ರಾಜ್ ಮುಂತಾದವರು ಅಭಿನಯಿಸಿದ್ದಾರೆ. ಎ.ಆರ್. ರೆಹಮಾನ್ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಹಾಡುಗಳು ಸೂಪರ್ ಹಿಟ್ ಆಗಿವೆ. ಟ್ರೇಲರ್ ಕೂಡ ಪ್ರೇಕ್ಷಕರ ಗಮನ ಸೆಳೆದಿದೆ. ಬೃಹತ್ ಸೆಟ್ಗಳನ್ನು ನಿರ್ಮಿಸಿ ಶೂಟಿಂಗ್ ಮಾಡಲಾಗಿದೆ. ಅದನ್ನು ದೊಡ್ಡ ಪರದೆಯಲ್ಲಿ ನೋಡಿ ಎಂಜಾಯ್ ಮಾಡಲು ಸಿನಿಪ್ರಿಯರು ಕಾದಿದ್ದಾರೆ.
‘ಪೊನ್ನಿಯಿನ್ ಸೆಲ್ವಂ’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಮೂಲ ತಮಿಳಿನ ಈ ಚಿತ್ರ ಕನ್ನಡ, ಹಿಂದಿ, ಮಲಯಾಳಂ ಹಾಗೂ ಹಿಂದಿ ಭಾಷೆಗೆ ಡಬ್ ಆಗಿ ರಿಲೀಸ್ ಆಗುತ್ತಿದೆ. ಎಲ್ಲ ಭಾಷೆಯಲ್ಲೂ ಈ ಟ್ರೇಲರ್ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:20 pm, Thu, 15 September 22