Sonam Kapoor: 32 ಕೋಟಿ ರೂಪಾಯಿಗೆ ಮನೆ ಮಾರಿಕೊಂಡ ನಟಿ ಸೋನಂ ಕಪೂರ್
Sonam Kapoor Mumbai Apartment: ಸೋನಂ ಕಪೂರ್ ಮಾರಾಟ ಮಾಡಿದ ಈ ಅಪಾರ್ಟ್ಮೆಂಟ್ನಲ್ಲಿ ಅನೇಕ ಸೌಕರ್ಯಗಳು ಇವೆ. ದೆಹಲಿ ಮೂಲದ ಒಂದು ಕಂಪನಿಗೆ ಈ ಪ್ರಾಪರ್ಟಿ ಮಾರಾಟ ಆಗಿದೆ.
ಹಿಂದಿ ಚಿತ್ರರಂಗದ ಖ್ಯಾತ ನಟಿ ಸೋನಂ ಕಪೂರ್ (Sonam Kapoor) ಅವರು ಇತ್ತೀಚಿನ ದಿನಗಳಲ್ಲಿ ಸಖತ್ ಚ್ಯೂಸಿ ಆಗಿದ್ದಾರೆ. ಸ್ಟಾರ್ ಕಿಡ್ ಆಗಿ ಚಿತ್ರರಂಗಕ್ಕೆ ಕಾಲಿಟ್ಟ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದರು. ಈಗ ಅವರು ಸಿನಿಮಾಗಳಿಗಿಂತಲೂ ಹೆಚ್ಚಾಗಿ ಸಂಸಾರದ ಕಡೆಗೆ ಗಮನ ನೀಡುತ್ತಿದ್ದಾರೆ. ಈ ನಡುವೆ ಅವರು ಮನೆ ಮಾರಿಕೊಂಡ ವಿಚಾರಕ್ಕೆ ಸುದ್ದಿ ಆಗಿದ್ದಾರೆ. ಮುಂಬೈನಲ್ಲಿ ಇದ್ದ ಐಷಾರಾಮಿ ಅಪಾರ್ಟಮೆಂಟ್ ಅನ್ನು ಸೋನಂ ಕಪೂರ್ ಅವರು ಬರೋಬ್ಬರಿ 32.5 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ ಎಂದು ವರದಿ ಆಗಿದೆ. ಈ ಅಪಾರ್ಟ್ಮೆಂಟ್ (Mumbai Apartment) ಸಾಕಷ್ಟು ವಿಶೇಷಗಳಿಂದ ಕೂಡಿದೆ. ಹಾಗಿದ್ದರೂ ಕೂಡ ಅವರು ಮಾರಾಟ ಮಾಡಿದ್ದಾರೆ.
ಸೋನಂ ಕಪೂರ್ ಅವರು ಮನೆ ಮಾರಿದ್ದಕ್ಕೆ ನಿರ್ದಿಷ್ಟ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಅವರ ಈ ಅಪಾರ್ಟ್ಮೆಂಟ್ ಅನ್ನು 2015ರಲ್ಲಿ 31.48 ಕೋಟಿ ರೂಪಾಯಿಗೆ ಖರೀದಿಸಿದ್ದರು. ಈಗ, ಅಂದರೆ 2022ರ ಡಿಸೆಂಬರ್ 29ರಂದು ಈ ಪ್ರಾಪರ್ಟಿಯನ್ನು ಅವರು ಮಾರಾಟ ಮಾಡಿದ್ದಾರೆ. ಈ ಮಾರಾಟದಿಂದಾಗಿ ಅವರಿಗೆ ಒಂದು ಕೋಟಿ ರೂಪಾಯಿ ಹೆಚ್ಚುವರಿ ಹಣ ಸಿಕ್ಕಿದೆ. ಆದರೂ ಮುಂಬೈನಲ್ಲಿ ಇರುವ ಆಸ್ತಿಯನ್ನು ಮಾರಾಟ ಮಾಡಿಕೊಂಡಿದ್ದು ಅನೇಕರಿಗೆ ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ: ವಾಯು ಎಂದು ಮಗನಿಗೆ ಹೆಸರಿಟ್ಟ ಸೋನಂ ಕಪೂರ್; ಕಾರಣ ವಿವರಿಸಿದ ನಟಿ
ಸೋನಂ ಕಪೂರ್ ಅವರು ಮಾರಾಟ ಮಾಡಿರುವ ಈ ಅಪಾರ್ಟ್ಮೆಂಟ್ ಅಲ್ಲಿ ನಿಂತು ನೋಡಿದರೆ ಮುಂಬೈ ನಗರದ ವೀವ್ ತುಂಬ ಚೆನ್ನಾಗಿ ಕಾಣುತ್ತದೆ. ಟೆಂಪ್ರೆಚರ್ ನಿಯಂತ್ರಿಸುವ ಈಜುಗೊಳ ಇದರಲ್ಲಿದೆ. ಮಿನಿ ಥಿಯೇಟರ್, ವಿಶಾಲವಾದ ಗಾರ್ಡನ್, ಜಿಮ್, ಹೆಲ್ತ್ ಕ್ಲಬ್, ಮಕ್ಕಳಿಗೆ ಆಟವಾಡಲು ಜಾಗ ಸೇರಿದಂತೆ ಅನೇಕ ಸೌಕರ್ಯಗಳು ಈ ಪಾರ್ಟ್ಮೆಂಟ್ನಲ್ಲಿ ಇವೆ. ದೆಹಲಿ ಮೂಲದ ಒಂದು ಕಂಪನಿಗೆ ಈ ಪ್ರಾಪರ್ಟಿ ಮಾರಾಟ ಆಗಿದೆ.
ಇದನ್ನೂ ಓದಿ: ಮನೆ ಒಳಗೇ ಇದ್ದ ಕಳ್ಳರು; ಸೋನಂ ಕಪೂರ್ ನಿವಾಸದಿಂದ ಕೋಟಿಕೋಟಿ ಕದ್ದವರು ಅರೆಸ್ಟ್
ಪ್ರಿಯಕರ ಆನಂದ್ ಅಹುಜಾ ಅವರನ್ನು ಮದುವೆ ಆದ ಬಳಿಕ ಸೋನಂ ಕಪೂರ್ ಅವರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಮುಂಬೈನ ಜೊತೆಗೆ ಅವರು ಲಂಡನ್ನಲ್ಲೂ ಹೆಚ್ಚಾಗಿ ವಾಸ ಮಾಡುತ್ತಾರೆ. ಸಿನಿಮಾಗಳ ಆಯ್ಕೆಯಲ್ಲಿ ಯಾವುದೇ ಅವಸರ ತೋರುತ್ತಿಲ್ಲ. ಅಲ್ಲೊಂದು ಇಲ್ಲೊಂದು ಚಿತ್ರಗಳನ್ನು ಮಾತ್ರ ಒಪ್ಪಿಕೊಳ್ಳುತ್ತಿದ್ದಾರೆ.
2022ರ ಆಗಸ್ಟ್ನಲ್ಲಿ ಸೋನಂ ಕಪೂರ್ ಅವರು ಮೊದಲ ಮಗುವಿಗೆ ಜನ್ಮ ನೀಡಿದರು. ಆ ಬಳಿಕ ಅವರು ಮಗುವಿನ ಆರೈಕೆಯಲ್ಲಿ ಹೆಚ್ಚು ತೊಡಗಿಕೊಂಡಿದ್ದಾರೆ. ಅವರು ನಟಿಸಿರುವ ‘ಬ್ಲೈಂಡ್’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಅವರು ಮೊದಲಿನ ರೀತಿ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸಲಿ ಎಂಬುದು ಅಭಿಮಾನಿಗಳ ಆಸೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:27 pm, Wed, 4 January 23