‘ಪಠಾಣ್’ ಚಿತ್ರದಲ್ಲಿರಲ್ಲ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿದ ದೃಶ್ಯ; ಕತ್ತರಿ ಹಾಕಿಸಿದ ಶಾರುಖ್
Pathan Movie Controversy: ‘ಬೇಷರಂ ರಂಗ್..’ ಹಾಡಿನಲ್ಲಿ ದೀಪಿಕಾ ಕೇಸರಿ ಬಣ್ಣದ ಬಿಕಿನಿ ಹಾಕಿ ಡ್ಯಾನ್ಸ್ ಮಾಡಿದ್ದರು. ಈ ದೃಶ್ಯ ತೆಗೆಯಲಾಗಿದೆ. ಇದಲ್ಲದೆ ದೀಪಿಕಾ ಹಾಟ್ ಆಗಿ ಕಾಣಿಸಿಕೊಂಡ ಇನ್ನೂ ಕೆಲ ದೃಶ್ಯಗಳಿಗೆ ಶಾರುಖ್ ಕತ್ತರಿ ಹಾಕಿದ್ದಾರೆ.
ಶಾರುಖ್ ಖಾನ್ (Shah Rukh Khan) ಹಾಗೂ ದೀಪಿಕಾ ಪಡುಕೋಣೆ ನಟನೆಯ ‘ಪಠಾಣ್’ ಸಿನಿಮಾ ಸಾಕಷ್ಟು ವಿವಾದ ಹುಟ್ಟುಹಾಕಿದೆ. ಈ ಸಿನಿಮಾದಲ್ಲಿ ದೀಪಿಕಾ ಕೇಸರಿ ಬಣ್ಣದ ಬಿಕಿನಿ ಧರಿಸಿ, ‘ಬೇಷರಂ ರಂಗ್..’ (ನಾಚಿಕೆ ಇಲ್ಲದ ಬಣ್ಣ) ಎಂದು ಹೇಳಿದ್ದು ಈ ವಿವಾದ ಹುಟ್ಟಿಕೊಳ್ಳಲು ಮುಖ್ಯ ಕಾರಣ. ಅಚ್ಚರಿಯ ವಿಷಯ ಎಂದರೆ ‘ಪಠಾಣ್’ ಚಿತ್ರದಲ್ಲಿ (Pathan Movie) ಈ ದೃಶ್ಯ ಇರುವುದಿಲ್ಲವಂತೆ! ಶಾರುಖ್ ಖಾನ್ ಅವರು ಈ ರೀತಿಯ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಸುದ್ದಿ ಆಗಿದೆ.
ಶಾರುಖ್ ಖಾನ್ ಅವರು ವಿವಾದದಿಂದ ದೂರ ಇರಲು ಬಯಸುತ್ತಾರೆ. ಆದರೆ, ವಿವಾದ ಅವರನ್ನು ಬಿಡುವುದಿಲ್ಲ. ಕಳೆದ ವರ್ಷ ಆರ್ಯನ್ ಖಾನ್ ಡ್ರಗ್ ಕೇಸ್ನಲ್ಲಿ ಅರೆಸ್ಟ್ ಆದಾಗ ಶಾರುಖ್ ಸಾಕಷ್ಟು ಸುದ್ದಿ ಆದರು. ಈಗ ‘ಪಠಾಣ್’ ಚಿತ್ರದ ವಿವಾದದಿಂದ ಅವರು ಸುದ್ದಿ ಆಗುತ್ತಿದ್ದಾರೆ. ಇದನ್ನು ತಡೆಯಲು ಶಾರುಖ್ ತಾವೇ ಖುದ್ದು ಕೆಲ ದೃಶ್ಯಗಳಿಗೆ ಕತ್ತರಿ ಹಾಕಿಸಿದ್ದಾರೆ.
‘ಬೇಷರಂ ರಂಗ್..’ ಹಾಡಿನಲ್ಲಿ ದೀಪಿಕಾ ಕೇಸರಿ ಬಣ್ಣದ ಬಿಕಿನಿ ಹಾಕಿ ಡ್ಯಾನ್ಸ್ ಮಾಡಿದ್ದರು. ಈ ದೃಶ್ಯ ತೆಗೆಯಲಾಗಿದೆ. ಇದಲ್ಲದೆ ದೀಪಿಕಾ ಹಾಟ್ ಆಗಿ ಕಾಣಿಸಿಕೊಂಡ ಇನ್ನೂ ಕೆಲ ದೃಶ್ಯಗಳಿಗೆ ಶಾರುಖ್ ಕತ್ತರಿ ಹಾಕಿದ್ದಾರೆ. ಒಟ್ಟಾರೆ ‘ಬೇಷರಂ ರಂಗ್..’ ಹಾಡಿನ ಒಟ್ಟಾರೆ ಒಂದು ನಿಮಿಷ ಕಡಿಮೆ ಆಗಲಿದೆ ಎನ್ನಲಾಗುತ್ತಿದೆ. ಇದರಿಂದ ವಿವಾದ ತಣ್ಣಗಾಗಲೂ ಬಹುದು.
ಬಾಲಿವುಡ್ನ ಹಲವು ಸಿನಿಮಾಗಳು ಬೈಕಾಟ್ ಟ್ರೆಂಡ್ಗೆ ತುತ್ತಾಗಿವೆ. ಆ ಸಾಲಿನಲ್ಲಿ ‘ಪಠಾಣ್’ ಸಿನಿಮಾ ಕೂಡ ಇದೆ. ಇದರಿಂದ ತಪ್ಪಿಸಿಕೊಳ್ಳಲು ಚಿತ್ರತಂಡ ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದೆ. ಕೇಸರಿ ಬಣ್ಣದ ಬಿಕಿನಿ ತೊಟ್ಟು ಡ್ಯಾನ್ಸ್ ಮಾಡಿದ ದೃಶ್ಯವನ್ನು ಕತ್ತರಿಸಿ ತೆಗೆದಿದ್ದರ ಹಿಂದೆ ಇದೇ ಕಾರಣ ಇದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Shah Rukh Khan: ನಿಗದಿತ ದಿನದಂದೇ ರಿಲೀಸ್ ಆಗಲಿದೆ ‘ಪಠಾಣ್’; ಅಡ್ವಾನ್ಸ್ ಬುಕಿಂಗ್ ಆರಂಭಕ್ಕೆ ದಿನಾಂಕ ಫಿಕ್ಸ್
‘ಪಠಾಣ್’ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಕಾಣಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಶಾರುಖ್ ನಾಲ್ಕು ವರ್ಷಗಳ ಬಳಿಕ ಕಂಬ್ಯಾಕ್ ಮಾಡುತ್ತಿರುವುದರಿಂದ ಸಹಜವಾಗಿಯೇ ಹೆಚ್ಚಿನ ನಿರೀಕ್ಷೆ ಇದೆ. ಈ ಚಿತ್ರದ ಟೈಟಲ್ ವಿಚಾರವಾಗಿಯೂ ಕೆಲವರು ಅಪಸ್ವರ ತೆಗೆದಿದ್ದರು. ‘ಪಠಾಣ್’ ಟೈಟಲ್ನಿಂದ ಪಠಾಣ್ ಸಮುದಾಯದವರಿಗೆ ಅವಮಾನ ಮಾಡಿದಂತಾಗುತ್ತಿದೆ ಎಂದು ಕೆಲವರು ದೂರಿದ್ದರು. ಆದರೆ, ಟೈಟಲ್ ಬದಲಾವಣೆ ಮಾಡದೆ ಇರಲು ತಂಡ ನಿರ್ಧರಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ