- Kannada News Photo gallery Shah Rukh Khan And Deepika Padukone Starrer Pathan Movie Pre Booking to Start from Jan 14th
Shah Rukh Khan: ನಿಗದಿತ ದಿನದಂದೇ ರಿಲೀಸ್ ಆಗಲಿದೆ ‘ಪಠಾಣ್’; ಅಡ್ವಾನ್ಸ್ ಬುಕಿಂಗ್ ಆರಂಭಕ್ಕೆ ದಿನಾಂಕ ಫಿಕ್ಸ್
ಈ ಚಿತ್ರದ ರಿಲೀಸ್ ದಿನಾಂಕ ಮುಂದೂಡಲ್ಪಡಲಿದೆ ಎಂದು ಸುದ್ದಿ ಹಬ್ಬಿತ್ತು. ಆದರೆ, ಅದು ಸುಳ್ಳಾಗಿದೆ. ನಿಗದಿತ ದಿನಾಂಕದಂದು ‘ಪಠಾಣ್’ ರಿಲೀಸ್ ಆಗಲಿದೆ.
Updated on: Jan 05, 2023 | 6:30 AM

ದೀಪಿಕಾ ಪಡುಕೋಣೆ ಹಾಗೂ ಶಾರುಖ್ ಖಾನ್ ನಟನೆಯ ‘ಪಠಾಣ್’ ಚಿತ್ರ ಜನವರಿ 25ರಂದು ರಿಲೀಸ್ ಆಗಲಿದೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳು ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಈ ಚಿತ್ರದ ರಿಲೀಸ್ ದಿನಾಂಕ ಮುಂದೂಡಲ್ಪಡಲಿದೆ ಎಂದು ಸುದ್ದಿ ಹಬ್ಬಿತ್ತು. ಆದರೆ, ಅದು ಸುಳ್ಳಾಗಿದೆ. ನಿಗದಿತ ದಿನಾಂಕದಂದು ‘ಪಠಾಣ್’ ರಿಲೀಸ್ ಆಗಲಿದೆ.

ಜನವರಿ 14ರಿಂದ ಅಡ್ವಾನ್ಸ್ ಬುಕಿಂಗ್ ಆರಂಭ ಆಗಲಿದೆ ಎಂದು ವರದಿ ಆಗಿದೆ. 10 ದಿನ ಮೊದಲೇ ‘ಪಠಾಣ್’ ಟಿಕೆಟ್ ಬುಕಿಂಗ್ಗೆ ಅವಕಾಶ ಇರುವುದರಿಂದ ಸಿನಿಮಾ ದೊಡ್ಡ ಮಟ್ಟದ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ.

‘ಪಠಾಣ್’ ವಿಶ್ವಾದ್ಯಂತ ತೆರೆಗೆ ಬರುತ್ತಿದೆ. ಈ ಮೊದಲು ‘ವಾರ್’ ಅಂತಹ ಮಾಸ್ ಆ್ಯಕ್ಷನ್ ಸಿನಿಮಾ ಮಾಡಿದ್ದ ಸಿದ್ದಾರ್ಥ್ ಆನಂದ್ ಅವರು ‘ಪಠಾಣ್’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

‘ಪಠಾಣ್’ ಸಿನಿಮಾದಲ್ಲಿ ಶಾರುಖ್ ಖಾನ್ ಅವರು ಸಾಕಷ್ಟು ಆ್ಯಕ್ಷನ್ ಮರೆದಿದ್ದಾರೆ. ಇದಕ್ಕೆ ಟೀಸರ್ ಸಾಕ್ಷ್ಯ ನೀಡಿದೆ. ಶೀಘ್ರವೇ ಚಿತ್ರದ ಟ್ರೇಲರ್ ರಿಲೀಸ್ ಆಗಲಿದೆ.




