AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀಪಿಕಾ ಪಡುಕೋಣೆ ಜನ್ಮದಿನ; ನಾಲ್ಕು ವರ್ಷಗಳಿಂದ ಗೆಲುವು ಕಾಣದ ನಟಿಗೆ ಈ ವರ್ಷ ಸಿಗಲಿದೆ ಸಿಹಿ?

Deepika Padukone Birthday: 2020ರಲ್ಲಿ ರಿಲೀಸ್ ಆದ ‘ಚಪಾಕ್​’ ಸಿನಿಮಾ ಸೋತಿತು. ಈ ಸಂದರ್ಭದಲ್ಲಿ ಅವರು ಜೆಎನ್​ಯು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಅಲ್ಲಿನ ಪ್ರತಿಭಟನೆಗೆ ಬೆಂಬಲ ನೀಡಿದ್ದರು. ಇದು ಸಿನಿಮಾ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು.

ದೀಪಿಕಾ ಪಡುಕೋಣೆ ಜನ್ಮದಿನ; ನಾಲ್ಕು ವರ್ಷಗಳಿಂದ ಗೆಲುವು ಕಾಣದ ನಟಿಗೆ ಈ ವರ್ಷ ಸಿಗಲಿದೆ ಸಿಹಿ?
ದೀಪಿಕಾ
TV9 Web
| Edited By: |

Updated on:Jan 05, 2023 | 9:15 AM

Share

ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ಬಾಲಿವುಡ್​ನಲ್ಲಿ ಭದ್ರವಾಗಿ ನೆಲೆ ಊರಿದ್ದಾರೆ. ನಟ ರಣವೀರ್ ಸಿಂಗ್ ಅವರನ್ನು ಮದುವೆ ಆಗಿ ಹಾಯಾಗಿ ಜೀವನ ನಡೆಸುತ್ತಿದ್ದಾರೆ. ಇಂದು (ಜನವರಿ 5) ದೀಪಿಕಾ ಬರ್ತ್​​ಡೇ (Deepika Padukone Birthday). ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯಗಳು ಬರುತ್ತಿವೆ. ದೀಪಿಕಾಗೆ ವೃತ್ತಿಜೀವನದಲ್ಲಿ ಇತ್ತೀಚೆಗೆ ಹಿನ್ನಡೆ ಆಗಿದೆ. ಬ್ಯಾಕ್​​ ಟು ಬ್ಯಾಕ್ ಸೋಲು ಕಾಣುತ್ತಿದ್ದಾರೆ. ಈ ವರ್ಷ ಅವರಿಗೆ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಅದೇ ರೀತಿ ಹಲವು ದೊಡ್ಡ ಬಜೆಟ್​​ನ ಚಿತ್ರಗಳು ಅವರ ಕೈಯಲ್ಲಿ ಇವೆ. ಈ ಪೈಕಿ ಯಾವ ಚಿತ್ರ ದೀಪಿಕಾಗೆ ಗೆಲುವು ತಂದುಕೊಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ದೀಪಿಕಾ ಅವರು 2018ರಲ್ಲಿ ನಟಿಸಿದ ‘ಪದ್ಮಾವತ್​’ ಚಿತ್ರವೇ ಕೊನೆ. ಅದಾದ ಬಳಿಕ ಗೆಲುವು ಕಂಡಿಲ್ಲ. 2019ರಲ್ಲಿ ಅವರ ನಟನೆಯ ಯಾವ ಚಿತ್ರಗಳೂ ರಿಲೀಸ್ ಆಗಿಲ್ಲ. 2020ರಲ್ಲಿ ರಿಲೀಸ್ ಆದ ‘ಚಪಾಕ್​’ ಸಿನಿಮಾ ಸೋತಿತು. ಈ ಸಂದರ್ಭದಲ್ಲಿ ಅವರು ಜೆಎನ್​ಯು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಅಲ್ಲಿನ ಪ್ರತಿಭಟನೆಗೆ ಬೆಂಬಲ ನೀಡಿದ್ದರು. ಇದು ಸಿನಿಮಾ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು. ಈ ಚಿತ್ರ ಸೋಲಲು ದೀಪಿಕಾ ನಿರ್ಧಾರ ಕೂಡ ಕಾರಣ ಎನ್ನಲಾಗಿದೆ.

2022ರ ‘ಗೆಹರಾಯಿಯಾ’ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಯಿತು. ಈ ಚಿತ್ರದಲ್ಲಿ ಹಸಿಬಿಸಿ ದೃಶ್ಯ ಹೆಚ್ಚಿದೆ ಎಂಬ ಕಾರಣಕ್ಕೆ ಅನೇಕರು ಚಿತ್ರವನ್ನು ಟೀಕೆ ಮಾಡಿದರು. ಈ ಕಾರಣಕ್ಕೆ ಸಿನಿಮಾಗೆ ಗೆಲುವು ಕಾಣಬೇಕಿದೆ. ಈಗ ಬರ್ತ್​ಡೇ ತಿಂಗಳಲ್ಲಿ (ಜನವರಿ 25) ‘ಪಠಾಣ್​’ ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕೆ ದೀಪಿಕಾ ನಾಯಕಿ. ಈಗಾಗಲೇ ಅವರು ‘ಬೇಷರಂ ಸಾಂಗ್​​..’ನಲ್ಲಿ ಹಾಕಿದ ಕೇಸರಿ ಬಣ್ಣದ ಬಿಕಿನಿ ವಿವಾದ ಹುಟ್ಟುಹಾಕಿದೆ. ಹೀಗಾಗಿ, ಚಿತ್ರಕ್ಕೆ ಬೈಕಾಟ್ ಬಿಸಿ ತಾಗಿದೆ.

ಇದನ್ನೂ ಓದಿ
Image
Shah Rukh Khan: ಎಷ್ಟೇ ವಿರೋಧ ಬಂದ್ರೂ ಜಗ್ಗದ ಶಾರುಖ್​ ಖಾನ್​; ‘ಪಠಾಣ್​’ ಟೈಟಲ್​ ಬದಲಾಗಬೇಕು ಎಂದವರಿಗೆ ಇಲ್ಲಿದೆ ಉತ್ತರ
Image
Pathan Trailer: ಶಾರುಖ್ ಖಾನ್ ಚಿತ್ರಕ್ಕೆ ಮತ್ತೊಂದು ಪೆಟ್ಟು; ಆನ್​​ಲೈನ್​ನಲ್ಲಿ ‘ಪಠಾಣ್​’ ಚಿತ್ರದ ಟ್ರೇಲರ್ ಲೀಕ್​?
Image
Jhoome Jo Pathaan: ‘ಪಠಾಣ್​’ ಚಿತ್ರದ 2ನೇ ಹಾಡಿನಲ್ಲಿ ಶಾರುಖ್​ ಖಾನ್​, ದೀಪಿಕಾ ಪಡುಕೋಣೆ ಮಿಂಚಿಂಗ್​

ಇದನ್ನೂ ಓದಿ: Jhoome Jo Pathaan: ‘ಪಠಾಣ್​’ ಚಿತ್ರದ 2ನೇ ಹಾಡಿನಲ್ಲಿ ಶಾರುಖ್​ ಖಾನ್​, ದೀಪಿಕಾ ಪಡುಕೋಣೆ ಮಿಂಚಿಂಗ್​ 

ಶಾರುಖ್ ನಟನೆಯ ‘ಜವಾನ್​’ ಚಿತ್ರಕ್ಕೂ ದೀಪಿಕಾ ನಾಯಕಿ. ಹೃತಿಕ್ ರೋಷನ್ ಅಭಿನಯದ ‘ಫೈಟರ್​’ ಚಿತ್ರಕ್ಕೆ ದೀಪಿಕಾ ಹೀರೋಯಿನ್ ಆಗಿದ್ದಾರೆ. ದಕ್ಷಿಣ ಭಾರತದ ಚಿತ್ರರಂಗದಲ್ಲೂ ಅವರು ತೊಡಗಿಕೊಂಡಿದ್ದಾರೆ. ಪ್ರಭಾಸ್ ಅಭಿನಯದ ‘ಪ್ರಾಜೆಕ್ಟ್​ ಕೆ’ ಚಿತ್ರದ ಕೆಲಸಗಳಲ್ಲೂ ಬ್ಯುಸಿ ಇದ್ದಾರೆ. ‘ಫೈಟರ್​’ ಹಾಗೂ ‘ಪ್ರಾಜೆಕ್ಟ್​ ಕೆ’ 2024ರಲ್ಲಿ ರಿಲೀಸ್ ಆಗಲಿದೆ. ಉಳಿದಂತೆ ‘ಪಠಾಣ್​’ ಹಾಗೂ ‘ಜವಾನ್​’ ಈ ವರ್ಷ ರಿಲೀಸ್ ಆಗಲಿದೆ. ಈ ಪೈಕಿ ಯಾವುದು ಗೆಲುವು ತಂದುಕೊಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:50 am, Thu, 5 January 23

Follow Us
Web contact
Web contact

TV9 Kannada

Read More
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​