Ranveer Singh: ‘ಸರ್ಕಸ್​’ ಸೋಲಿನ ಬೆನ್ನಲ್ಲೇ ಪತ್ನಿ ದೀಪಿಕಾ ಜತೆ ಮುಂಬೈ ಬಿಟ್ಟ ರಣವೀರ್ ಸಿಂಗ್

ವರ್ಷಾಂತ್ಯ ಬಂತು ಎಂದರೆ ಬಹುತೇಕ ಸೆಲೆಬ್ರಿಟಿಗಳು ವೆಕೇಶನ್​ಮೂಡ್​ಗೆ ತೆರಳುತ್ತಾರೆ. ಕುಟುಂಬದವರ ಜತೆ ವಿದೇಶಿ ಪ್ರಯಾಣ ಮಾಡುತ್ತಾರೆ. ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಕೂಡ ಇದಕ್ಕೆ ಹೊರತಾಗಿಲ್ಲ.

Ranveer Singh: ‘ಸರ್ಕಸ್​’ ಸೋಲಿನ ಬೆನ್ನಲ್ಲೇ ಪತ್ನಿ ದೀಪಿಕಾ ಜತೆ ಮುಂಬೈ ಬಿಟ್ಟ ರಣವೀರ್ ಸಿಂಗ್
ರಣವೀರ್​-ದೀಪಿಕಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Dec 26, 2022 | 7:54 AM

ಬಾಲಿವುಡ್​ಗೆ ಈ ವರ್ಷ ಅದೃಷ್ಟ ಕೈಕೊಟ್ಟಿದೆ. ಈ ಬಾರಿ ತೆರೆಗೆ ಬಂದ ಸಿನಿಮಾಗಳ ಪೈಕಿ ಕೆಲವೇ ಕೆಲವು ಚಿತ್ರಗಳು ಗೆದ್ದಿವೆ. ಸ್ಟಾರ್ ಹೀರೋಗಳ ಚಿತ್ರಗಳು ಕೂಡ ಸೋಲು ಕಾಣುತ್ತಿವೆ. ರಣವೀರ್ ಸಿಂಗ್ (Ranveer Singh) ನಟನೆಯ ‘ಸರ್ಕಸ್​’ ಸಿನಿಮಾ ಇತ್ತೀಚೆಗೆ ತೆರೆಗೆ ಬಂತು. ಗೆಲುವಿನೊಂದಿಗೆ ಈ ವರ್ಷವನ್ನು ಪೂರ್ಣಗೊಳಿಸಬಹುದು ಎಂದು ಬಾಲಿವುಡ್ ಮಂದಿ ಭಾವಿಸಿದ್ದರು. ಆದರೆ, ಅದು ಸುಳ್ಳಾಗಿದೆ. ‘ಸರ್ಕಸ್​’ ಸಿನಿಮಾ (Circus Movie) ಹೀನಾಯವಾಗಿ ಸೋತಿದೆ. ಈ ಮಧ್ಯೆ ರಣವೀರ್ ಹಾಗೂ ದೀಪಿಕಾ ಮುಂಬೈ ಬಿಟ್ಟು ರಜೆಯ ಮಜ ಕಳೆಯಲು ತೆರಳಿದ್ದಾರೆ.

ವರ್ಷಾಂತ್ಯ ಬಂತು ಎಂದರೆ ಬಹುತೇಕ ಸೆಲೆಬ್ರಿಟಿಗಳು ವೆಕೇಶನ್​ಮೂಡ್​ಗೆ ತೆರಳುತ್ತಾರೆ. ಕುಟುಂಬದವರ ಜತೆ ವಿದೇಶಿ ಪ್ರಯಾಣ ಮಾಡುತ್ತಾರೆ. ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಕೂಡ ಇದಕ್ಕೆ ಹೊರತಾಗಿಲ್ಲ. ‘ಸರ್ಕಸ್​’ ಸೋಲಿನ ಬೆನ್ನಲ್ಲೇ ರಣವೀರ್ ಸಿಂಗ್ ಅವರು ಪತ್ನಿ ಜತೆ ಮುಂಬೈ ಬಿಟ್ಟು ತೆರಳಿದ್ದಾರೆ. ಅವರು ಬೋಟ್ ಏರಿ ಹೊರಟಿರುವ ವಿಡಿಯೋ ವೈರಲ್ ಆಗಿದೆ. ಮೂಲಗಳ ಪ್ರಕಾರ ಕ್ರ್ಯೂಸ್ ಶಿಪ್ ಏರಿ ಅವರು ವಿದೇಶಕ್ಕೆ ತೆರಳಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ
Image
Ranveer Singh: ಮತ್ತೆ ಬೆತ್ತಲಾಗುವಂತೆ ರಣವೀರ್​ ಸಿಂಗ್​ಗೆ ಬೇಡಿಕೆ; ಈ ಬಾರಿ ಆಹ್ವಾನ ಬಂದಿರೋದು ಪ್ರಾಣಿಗಳಿಗೋಸ್ಕರ
Image
Ranveer Singh: ಬೆತ್ತಲೆ ಫೋಟೋ ಹಂಚಿಕೊಂಡ ರಣವೀರ್​ ಸಿಂಗ್​ ವಿರುದ್ಧ ಕೇಸ್​ ದಾಖಲಿಸಿದ ಮುಂಬೈ ಪೊಲೀಸರು
Image
Alia Bhatt: ‘ರಣವೀರ್​ ಸಿಂಗ್​ ಜತೆ ಏನು ಬೇಕಾದ್ರೂ ಮಾತಾಡ್ತೀನಿ’; ಮದುವೆ ಬಳಿಕ ಆಲಿಯಾ ಭಟ್​ ಅಚ್ಚರಿಯ ಹೇಳಿಕೆ
Image
Ranveer Singh: ರಣವೀರ್​ ಸಿಂಗ್​ ಒಟ್ಟು ಆಸ್ತಿ ಎಷ್ಟು? 2 ಸಿನಿಮಾ ಸೋತ ಮಾತ್ರಕ್ಕೆ ಕರಗಿಲ್ಲ ಸ್ಟಾರ್​ ನಟನ ನೂರಾರು ಕೋಟಿ ಸಂಪತ್ತು

ರೋಹಿತ್ ಶೆಟ್ಟಿ ನಟನೆಯ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಸದ್ದು ಮಾಡುತ್ತವೆ. ಆದರೆ, ‘ಸರ್ಕಸ್​’ ಸಿನಿಮಾದಲ್ಲಿ ಈ ಮ್ಯಾಜಿಕ್ ಕೆಲಸ ಮಾಡಿಲ್ಲ. ಕಡಿಮೆ ರೇಟಿಂಗ್ ಪಡೆಯುವುದರ ಜತೆಗೆ ಬಾಕ್ಸ್ ಆಫೀಸ್​ನಲ್ಲಿ ಡಲ್​​ ಆರಂಭ ಕಾಣುವ ಮೂಲಕ ಸಿನಿಮಾ ಸೋಲಿನ ರುಚಿ ಕಂಡಿದೆ. ರಣವೀರ್ ಸಿಂಗ್ ಅವರು ಡಬಲ್ ರೋಲ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಕಾಮಿಡಿ ಶೈಲಿಯಲ್ಲಿ ಮೂಡಿ ಬಂದಿದೆ.

ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಅವರು ವಿಚ್ಛೇದನ ಪಡೆಯುತ್ತಾರೆ ಎನ್ನುವ ಸುದ್ದಿ ಇತ್ತೀಚೆಗೆ ಹುಟ್ಟಿಕೊಂಡಿತ್ತು. ಇದನ್ನು ಕೇಳಿ ಅಭಿಮಾನಿಗಳು ಬೇಸರಗೊಂಡರು. ಚಿತ್ರರಂಗದ ಅನೇಕರು ವಿಚ್ಛೇದನ ಪಡೆದುಕೊಳ್ಳುತ್ತಿದ್ದಾರೆ. ಈ ಸಾಲಿಗೆ ಈ ಜೋಡಿಯೂ ಸೇರ್ಪಡೆ ಆಗಲಿದೆಯೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡಿತ್ತು. ಆದರೆ, ಇದು ಸುಳ್ಳು ಎಂಬುದು ಬಳಿಕ ಗೊತ್ತಾಯಿತು. ಇಬ್ಬರೂ ಹಾಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ.

ಇದನ್ನೂ ಓದಿ: ಫಿಫಾ ವಿಶ್ವಕಪ್​ ಫೈನಲ್​ ವೇಳೆ ರವಿ ಶಾಸ್ತ್ರಿಗೆ ಕಿಸ್ ಮಾಡಿದ ರಣವೀರ್ ಸಿಂಗ್; ಇಲ್ಲಿದೆ ವೈರಲ್ ವಿಡಿಯೋ

ರಣವೀರ್ ಸಿಂಗ್ ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ದೀಪಿಕಾ ಪಡುಕೋಣೆ ಅವರು ‘ಪಠಾಣ್​’ ಸಿನಿಮಾ ರಿಲೀಸ್​ ಅನ್ನು ಎದುರು ನೋಡುತ್ತಿದ್ದಾರೆ. ವಿವಾದದಿಂದ ಸದ್ದು ಮಾಡಿದ ಈ ಸಿನಿಮಾ 2023ರ ಜನವರಿ 25ರಂದು ತೆರೆಗೆ ಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಗೆಳೆಯನನ್ನು ಕಚ್ಚಿ ಹಿಡಿದ ಸಿಂಹಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ
ಗೆಳೆಯನನ್ನು ಕಚ್ಚಿ ಹಿಡಿದ ಸಿಂಹಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ
ಮಹಾರಾಷ್ಟ್ರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ
ಮಹಾರಾಷ್ಟ್ರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ
ಸೋಮನಹಳ್ಳಿಯ ಚಿತಾಗಾರದಿಂದ ಭಾರವಾದ ಹೆಜ್ಜೆಹಾಕುತ್ತ ವಾಪಸ್ಸಾದರು ಪ್ರೇಮ
ಸೋಮನಹಳ್ಳಿಯ ಚಿತಾಗಾರದಿಂದ ಭಾರವಾದ ಹೆಜ್ಜೆಹಾಕುತ್ತ ವಾಪಸ್ಸಾದರು ಪ್ರೇಮ
ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ಸಂಸ್ಕಾರದಲ್ಲಿ ಅನೇಕ ಗಣ್ಯರು ಭಾಗಿ
ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ಸಂಸ್ಕಾರದಲ್ಲಿ ಅನೇಕ ಗಣ್ಯರು ಭಾಗಿ
ಉಗ್ರಂ ಮಂಜು ನಿಜವಾದ ಮುಖ ಬಯಲು ಮಾಡಿದ ಗೌತಮಿ; ಬದಲಾಯ್ತು ಆಟ
ಉಗ್ರಂ ಮಂಜು ನಿಜವಾದ ಮುಖ ಬಯಲು ಮಾಡಿದ ಗೌತಮಿ; ಬದಲಾಯ್ತು ಆಟ
ಮಗಳು ಮತ್ತು ಮೊಮ್ಮಗನೊಂದಿಗೆ ಆಗಮಿಸಿ ತಿರಂಗ ಸ್ವೀಕರಿಸಿದ ಪ್ರೇಮ ಕೃಷ್ಣ
ಮಗಳು ಮತ್ತು ಮೊಮ್ಮಗನೊಂದಿಗೆ ಆಗಮಿಸಿ ತಿರಂಗ ಸ್ವೀಕರಿಸಿದ ಪ್ರೇಮ ಕೃಷ್ಣ
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ರಾಜ್ಯ ಮತ್ತು ರಾಷ್ಟ್ರದ ಹಲವಾರು ನಾಯಕರು ಕೃಷ್ಣರ ಅಂತ್ಯಕ್ರಿಯೆಯಲ್ಲಿ ಭಾಗಿ
ರಾಜ್ಯ ಮತ್ತು ರಾಷ್ಟ್ರದ ಹಲವಾರು ನಾಯಕರು ಕೃಷ್ಣರ ಅಂತ್ಯಕ್ರಿಯೆಯಲ್ಲಿ ಭಾಗಿ
ರಜತ್ ವಿರುದ್ಧ ಮುಗಿಬಿದ್ದ ಮಂಜು, ತ್ರಿವಿಕ್ರಮ್
ರಜತ್ ವಿರುದ್ಧ ಮುಗಿಬಿದ್ದ ಮಂಜು, ತ್ರಿವಿಕ್ರಮ್
ಅಂತ್ಯಕ್ರಿಯೆ ಉಸ್ತುವಾರಿ ವಹಿಸಿಕೊಂಡ ಡಿಕೆ ಶಿವಕುಮಾರ್​ರಿಂದ ಚುರುಕು ಓಡಾಟ
ಅಂತ್ಯಕ್ರಿಯೆ ಉಸ್ತುವಾರಿ ವಹಿಸಿಕೊಂಡ ಡಿಕೆ ಶಿವಕುಮಾರ್​ರಿಂದ ಚುರುಕು ಓಡಾಟ