AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

The Kerala Story: ‘ದಿ ಕೇರಳ ಸ್ಟೋರಿ’ ವಿವಾದ: ‘ನಾವು ಸಾಕ್ಷಿ ಇಲ್ಲದೇ ಏನನ್ನೂ ಹೇಳಲ್ಲ’ ಎಂದ ನಿರ್ಮಾಪಕ ವಿಪುಲ್​ ಶಾ

The Kerala Story Teaser | Vipul Shah: ‘ಆರೋಪಗಳಿಗೆ ಸೂಕ್ತ ಸಮಯದಲ್ಲಿ ಉತ್ತರ ನೀಡುತ್ತೇವೆ’ ಎಂದು ‘ದಿ ಕೇರಳ ಸ್ಟೋರಿ’ ಚಿತ್ರದ ನಿರ್ಮಾಪಕ ವಿಪುಲ್​ ಶಾ ಹೇಳಿದ್ದಾರೆ. ಈ ಚಿತ್ರದ ಟೀಸರ್​ ಬಗ್ಗೆ ಟೀಕೆ ವ್ಯಕ್ತವಾಗಿದೆ.

The Kerala Story: ‘ದಿ ಕೇರಳ ಸ್ಟೋರಿ’ ವಿವಾದ: ‘ನಾವು ಸಾಕ್ಷಿ ಇಲ್ಲದೇ ಏನನ್ನೂ ಹೇಳಲ್ಲ’ ಎಂದ ನಿರ್ಮಾಪಕ ವಿಪುಲ್​ ಶಾ
ವಿಪುಲ್ ಶಾ, ಅದಾ ಶರ್ಮಾ
TV9 Web
| Edited By: |

Updated on: Dec 26, 2022 | 7:42 PM

Share

ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ಕುರಿತು ಮೂಡಿಬಂದ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ 2022ರಲ್ಲಿ ಭಾರಿ ಚರ್ಚೆ ಹುಟ್ಟು ಹಾಕಿತು. ಅದೇ ರೀತಿ ಈಗ ಮತ್ತೊಂದು ಸಿನಿಮಾ ಕೂಡ ಚರ್ಚೆಯ ಬಿರುಗಾಳಿ ಎಬ್ಬಿಸುವ ಮುನ್ಸೂಚನೆ ನೀಡಿದೆ. ಈ ಸಿನಿಮಾ ಹೆಸರು ‘ದಿ ಕೇರಳ ಸ್ಟೋರಿ’. ಒಂದಷ್ಟು ವಾರಗಳ ಹಿಂದೆ ಈ ಚಿತ್ರದ ಟೀಸರ್​ ಬಿಡುಗಡೆ ಆಗಿತ್ತು. ಆಗ ಅನೇಕ ಪ್ರಶ್ನೆಗಳು ಹುಟ್ಟಿಕೊಂಡವು. ಕೇರಳದಲ್ಲಿ ನಡೆದ ಸಾವಿರಾರು ಹುಡುಗಿಯರ ಮತಾಂತರದ ಬಗ್ಗೆ ಈ ಚಿತ್ರದಲ್ಲಿ ಹೇಳಲಾಗುತ್ತಿದೆ ಎಂಬುದು ಟೀಸರ್​ನಲ್ಲಿ ಸ್ಪಷ್ಟವಾಗಿದೆ. ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ಕುರಿತು ನಿರ್ಮಾಪಕ ವಿಪುಲ್​ ಅಮೃತ್​ಲಾಲ್​ ಶಾ (Vipul Shah) ಮಾತನಾಡಿದ್ದಾರೆ. ‘ಸಾಕ್ಷಿ ಇಲ್ಲದೇ ನಾವು ಏನನ್ನೂ ತೋರಿಸುತ್ತಿಲ್ಲ’ ಎಂದು ಅವರು ಹೇಳಿದ್ದಾರೆ. ಈ ಸಿನಿಮಾದಲ್ಲಿ ನಟಿ ಅದಾ ಶರ್ಮಾ (Adah Sharma) ಅವರು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡ ಹುಡುಗಿಯಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ.

‘ಮಿಡ್​-ಡೇ’ಗೆ ನೀಡಿದ ಸಂದರ್ಶನದಲ್ಲಿ ‘ದಿ ಕೇರಳ ಸ್ಟೋರಿ’ ಸಿನಿಮಾದ ಕುರಿತ ವಿವಾದದ ಬಗ್ಗೆ ವಿಪುಲ್​ ಶಾ ಮಾತನಾಡಿದ್ದಾರೆ. ‘ಆರೋಪಗಳಿಗೆ ಸೂಕ್ತ ಸಮಯದಲ್ಲಿ ಉತ್ತರ ನೀಡುತ್ತೇವೆ. ಸಾಕ್ಷಿ ಇಲ್ಲದೇ ನಾವು ಏನನ್ನೂ ಹೇಳುವುದಿಲ್ಲ. ಸತ್ಯಾಂಶ ಮತ್ತು ಅಂಕಿಅಂಶಗಳನ್ನು ನಾವು ತೆರೆದಿಟ್ಟಾಗ ಜನರಿಗೆ ಉತ್ತರ ಸಿಗಲಿದೆ. ಅದನ್ನು ಒಪ್ಪಿಕೊಳ್ಳುವುದು ಬಿಡುವುದು ಜನರಿಗೆ ಆಯ್ಕೆಗೆ ಬಿಟ್ಟ ವಿಚಾರ. ಈ ಸಿನಿಮಾ ಶುರು ಮಾಡುವುದಕ್ಕೂ ಮುನ್ನ ನಿರ್ದೇಶಕ ಸುದಿಪ್ತೋ ಸೇನ್​ ಅವರು 4 ವರ್ಷಗಳ ಕಾಲ ಅಧ್ಯಯನ ನಡೆಸಿದ್ದಾರೆ’ ಎಂದು ವಿಪುಲ್​ ಶಾ ಹೇಳಿದ್ದಾರೆ.

ಇದನ್ನೂ ಓದಿ: Vivek Agnihotri: ‘ಸತ್ಯ ಅಲ್ಲ ಅಂತ ಸಾಬೀತಾದ್ರೆ ಸಿನಿಮಾ ಮಾಡೋದು ಬಿಟ್ಟು ಬಿಡ್ತೀನಿ’; ವಿವೇಕ್​ ಅಗ್ನಿಹೋತ್ರಿ ಸವಾಲು

ಇದನ್ನೂ ಓದಿ
Image
‘ದಿ ಕಾಶ್ಮೀರ್​ ಫೈಲ್ಸ್​ ಚಿತ್ರ ಆಸ್ಕರ್​ಗೆ ಹೋದ್ರೆ ಭಾರತಕ್ಕೆ ಮುಜುಗರ; ಇದು ದ್ವೇಷ ಹಬ್ಬಿಸುವ ಕಸ’: ಕೇಳಿಬಂತು ಕಟು ಟೀಕೆ
Image
ಒಟಿಟಿಗೆ ಬರ್ತಿದೆ ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರ; ಕನ್ನಡ ಪ್ರೇಕ್ಷಕರಿಗೂ ಇಲ್ಲಿದೆ ಒಂದು ಗುಡ್​ ನ್ಯೂಸ್​
Image
‘ದಿ ಕಾಶ್ಮೀರ್​ ಫೈಲ್ಸ್​’ ನಟನ ಅಚ್ಚರಿಯ ಬದಲಾವಣೆ; ಹೇಗಿದ್ದ ಅನುಪಮ್​ ಖೇರ್​ ಹೇಗಾದ್ರು ನೋಡಿ
Image
‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರದ್ದು ‘ಬಾಹುಬಲಿ’ಗಿಂತಲೂ ದೊಡ್ಡ ಗೆಲುವು: ಇದು ಆಮಿರ್ ಖಾನ್ ಫಾರ್ಮುಲಾ

‘ದಿ ಕೇರಳ ಸ್ಟೋರಿ’ ಟೀಸರ್​ನಲ್ಲಿ ಏನಿದೆ?

‘ದಿ ಕೇರಳ ಸ್ಟೋರಿ’ ಟೀಸರ್​ ಸಖತ್​ ವೈರಲ್​ ಆಗಿದೆ. ಕೇರಳವನ್ನು ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ ಎಂಬ ಕಾರಣದಿಂದ ಈ ಟೀಸರ್​ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ‘ನನ್ನ ಹೆಸರು ಶಾಲಿನಿ ಉನ್ನಿಕೃಷ್ಣನ್​ ಆಗಿತ್ತು. ನರ್ಸ್​ ಆಗಿ ಜನರ ಸೇವೆ ಮಾಡಬೇಕು ಅಂತ ನಾನು ಬಯಸಿದ್ದೆ. ಈಗ ನಾನು ಫಾತಿಮಾ ಬಾ ಎಂಬ ಐಸಿಸ್​ ಭಯೋತ್ಪಾದಕಿ ಆಗಿದ್ದೇನೆ. ಅಫ್ಘಾನಿಸ್ತಾನದ ಜೈಲಿನಲ್ಲಿ ಇದ್ದೇನೆ’ ಎಂಬ ಡೈಲಾಗ್​ನೊಂದಿಗೆ ಈ ಟೀಸರ್​ ಆರಂಭ ಆಗುತ್ತದೆ.

ಇದನ್ನೂ ಓದಿ: ತುಮಕೂರಿನಲ್ಲಿ ಕ್ರೈಸ್ತ ಮಿಷನರಿಗಳ ಮತಾಂತರ ಜಾಲ ಪತ್ತೆ: ಹಿಂದೂ ದೇವರುಗಳ ಬಗ್ಗೆ ಅವಮಾನ ಆರೋಪ

‘ನಾನು ಒಬ್ಬಳೇ ಅಲ್ಲ. ನನ್ನಂತಹ 32 ಸಾವಿರ ಹುಡುಗಿಯರು ಮತಾಂತರಗೊಂಡು ಸಿರಿಯಾ ಮತ್ತು ಯೆಮನ್​ ಮರುಭೂಮಿಯಲ್ಲಿ ಸತ್ತಿದ್ದಾರೆ. ಕೇರಳದಲ್ಲಿ ಓರ್ವ ಸಿಂಪಲ್​ ಹುಡುಗಿಯನ್ನು ಅಪಾಯಕಾರಿ ಟೆರೆರಿಸ್ಟ್​ ಆಗಿ ಮಾಡುವ ಭಯಂಕರ ಆಟ ನಡೆದಿದೆ. ಅದು ಕೂಡ ಬಹಿರಂಗವಾಗಿ. ಇದನ್ನು ಯಾರೂ ತಡೆಯೋದಿಲ್ಲವೇ? ಇದು ನನ್ನ ಕಥೆ. ಇದು ಆ 32 ಸಾವಿರ ಹುಡುಗಿಯರ ಕಥೆ. ಇದು ಕೇರಳದ ಕಥೆ’ ಎಂಬ ಡೈಲಾಗ್​ ಮೂಲಕ ಟೀಸರ್​ ಕೊನೆಯಾಗುತ್ತದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!