Salman Khan Birthday: ಸಲ್ಮಾನ್​ ಖಾನ್​ಗೆ ಈಗ 57 ವರ್ಷ ವಯಸ್ಸು; ಡೇಟಿಂಗ್​ ಇತಿಹಾಸ ದೊಡ್ಡದಿದೆ; ಶಾದಿ ಬಗ್ಗೆ ಮಾತೇ ಇಲ್ಲ

Salman Khan Dating History: ಎಲ್ಲವೂ ಅಂದುಕೊಂಡಂತೆ ಆಗಿದ್ದರೆ 80ರ ದಶಕದಲ್ಲಿಯೇ ಸಲ್ಮಾನ್​ ಖಾನ್​ ಮದುವೆ ಆಗಬೇಕಿತ್ತು. ಆದರೆ ಇಷ್ಟು ವರ್ಷ ಕಳೆದರೂ ಅವರಿಗೆ ಕಂಕಣ ಭಾಗ್ಯ ಕೂಡಿಬಂದಿಲ್ಲ.

Salman Khan Birthday: ಸಲ್ಮಾನ್​ ಖಾನ್​ಗೆ ಈಗ 57 ವರ್ಷ ವಯಸ್ಸು; ಡೇಟಿಂಗ್​ ಇತಿಹಾಸ ದೊಡ್ಡದಿದೆ; ಶಾದಿ ಬಗ್ಗೆ ಮಾತೇ ಇಲ್ಲ
ಸಲ್ಮಾನ್ ಖಾನ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Dec 27, 2022 | 6:38 AM

ನಟ ಸಲ್ಮಾನ್​ ಖಾನ್​ (Salman Khan) ಅವರಿಗೆ ಇಂದು (ಡಿ.27) ಜನ್ಮದಿನದ ಸಂಭ್ರಮ. ವಿಶ್ವಾದ್ಯಂತ ಇರುವ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಬರ್ತ್​ಡೇ ವಿಶ್​ ಮಾಡುತ್ತಿದ್ದಾರೆ. ಅನೇಕ ಕಡೆಗಳಲ್ಲಿ ಅದ್ದೂರಿಯಾಗಿ ಸೆಲೆಬ್ರೇಟ್​ ಮಾಡಲಾಗುತ್ತಿದೆ. ಸಲ್ಮಾನ್​ ಖಾನ್​ ಅವರ ಆಪ್ತ ಬಳಗದಲ್ಲೂ ಆಚರಣೆ ಜೋರಾಗಿದೆ. ಸಲ್ಲು ಹುಟ್ಟುಹಬ್ಬದ (Salman Khan Birthday) ಪ್ರಯುಕ್ತ ಸೋಶಿಯಲ್​ ಮೀಡಿಯಾದಲ್ಲಿ ಶುಭಾಶಯಗಳ ಮಳೆ ಸುರಿಸಲಾಗುತ್ತಿದೆ. ಈಗ ಸಲ್ಮಾನ್​ ಖಾನ್​ ಅವರಿಗೆ 57 ವರ್ಷ ವಯಸ್ಸು. ಆದರೂ ಅವರ ಎನರ್ಜಿ ಕಮ್ಮಿ ಆಗಿಲ್ಲ. ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆಗಾಗ ಅವರ ಮದುವೆ (Salman Khan Marriage) ಬಗ್ಗೆ ಪ್ರಶ್ನೆ ಎದುರಾಗುತ್ತಲೇ ಇರುತ್ತದೆ. ಆದರೆ ಸಲ್ಲು ಯಾಕೋ ಶಾದಿ ಕುರಿತು ತಲೆ ಕೆಡಿಸಿಕೊಂಡಿಲ್ಲ. ಆದರೂ ಕೂಡ ಅವರ ಡೇಟಿಂಗ್​ ಇತಿಹಾಸ ದೊಡ್ಡದಿದೆ.

ಸಲ್ಮಾನ್​ ಖಾನ್​-ಸಂಗೀತಾ ಬಿಜಲಾನಿ:

ಸಲ್ಮಾನ್​ ಖಾನ್​ ಅವರ ಜೀವನದಲ್ಲಿ ಹಲವು ಹುಡುಗಿಯರು ಬಂದು ಹೋಗಿದ್ದಾರೆ. ಆದರೆ ಯಾರ ಜೊತೆಗೂ ಕಂಕಣ ಭಾಗ್ಯ ಕೂಡಿಬರಲಿಲ್ಲ. 80ರ ದಶಕದಲ್ಲಿ ಸಂಗೀತಾ ಬಿಜಲಾನಿ ಅವರನ್ನು ಸಲ್ಲು ಪ್ರೀತಿಸುತ್ತಿದ್ದರು. ಸುಮಾರು 10 ವರ್ಷಗಳ ಕಾಲ ಅವರು ಡೇಟಿಂಗ್​ ಮಾಡುತ್ತಿದ್ದರು. ಇನ್ನೇನು ಮದುವೆ ಆಗಬೇಕು ಎಂಬಷ್ಟರಲ್ಲಿ ಅವರ ಸಂಬಂಧ ಮುರಿದು ಬಿತ್ತು.

ಸೋಮಿ ಅಲಿ ಬಳಿಕ ಐಶ್ವರ್ಯಾ ರೈ ಎಂಟ್ರಿ:

ನಟಿ ಸೋಮಿ ಅಲಿ ಜೊತೆ ಸಲ್ಮಾನ್​ ಖಾನ್​ ಪ್ರೀತಿಯಲ್ಲಿ ಮುಳುಗಿದ್ದರು. 8 ವರ್ಷ ಜೊತೆಗಿದ್ದ ಈ ಜೋಡಿ ನಂತರ ಬ್ರೇಕಪ್​ ಮಾಡಿಕೊಂಡಿತು. ಆ ಬಳಿಕ ಸಲ್ಲು ಬದುಕಿನಲ್ಲಿ ಐಶ್ವರ್ಯಾ ರೈ ಎಂಟ್ರಿ ನೀಡಿದರು. 1999ರಲ್ಲಿ ಸಲ್ಮಾನ್​ ಖಾನ್​ ಮತ್ತು ಐಶ್ವರ್ಯಾ ರೈ ನಡುವೆ ಪ್ರೀತಿ ಚಿಗುರಿತು. ಅವರಿಬ್ಬರ ಲವ್​ ಸ್ಟೋರಿ ಬಗ್ಗೆ ಇಡೀ ಬಾಲಿವುಡ್ ಗಲ್ಲಿಯಲ್ಲಿ ಸುದ್ದಿ ಹರಡಿತ್ತು. ಆದರೆ ಆ ಪ್ರೀತಿ ಕೂಡ ಬ್ರೇಕಪ್​ನಲ್ಲಿ ಅಂತ್ಯವಾಯ್ತು. ಅದಕ್ಕೆ ಸಲ್ಮಾನ್​ ಖಾನ್​ ಅವರ ಕೋಪವೇ ಕಾರಣ ಎಂಬ ಮಾತಿದೆ.

ಇದನ್ನೂ ಓದಿ: Salman Khan: ಸಲ್ಮಾನ್​ ಖಾನ್​-ಪೂಜಾ ಹೆಗ್ಡೆ ಪ್ರೀತಿಸ್ತಾರೆ ಅಂತ ಗಾಸಿಪ್​ ಹಬ್ಬಿಸಿದವರಿಗೆ ತಿರುಗೇಟು ನೀಡಿದ ಸಲ್ಲು ಆಪ್ತರು

ಯೂಲಿಯಾ ವಂಟೂರ್​ ಜತೆ ಸಲ್ಲು ಓಡಾಟ:

ರೊಮೇನಿಯನ್​ ಚೆಲುವೆ ಯೂಲಿಯಾ ವಂಟೂರ್​ ಅವರು ಕೂಡ ಸಲ್ಮಾನ್​ ಖಾನ್​ ಅವರ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ಅನೇಕ ಬಾರಿ ಅವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಎಂದಿಗೂ ಕೂಡ ತಮ್ಮ ಪ್ರೀತಿಯ ಬಗ್ಗೆ ಈ ಜೋಡಿ ಬಹಿರಂಗವಾಗಿ ಹೇಳಿಕೊಂಡಿಲ್ಲ. ಹಾಗಾಗಿ ಅವರ ಈ ಸಂಬಂಧಕ್ಕೆ ಒಂದು ಸ್ಪಷ್ಟ ಹೆಸರು ಈವರೆಗೂ ಸಿಕ್ಕಿಲ್ಲ.

ಇದನ್ನೂ ಓದಿ: Prabhas: ‘ಸಲ್ಮಾನ್​ ಖಾನ್​ ಮದುವೆ ಆದ ನಂತರವೇ ನನ್ನ ವಿವಾಹ’: ಎಲ್ಲರೆದುರು ಘೋಷಿಸಿದ ಪ್ರಭಾಸ್​

ಸಲ್ಮಾನ್​ ಖಾನ್​-ಕತ್ರಿನಾ ಕೈಫ್​ ಲವ್​ ಸ್ಟೋರಿ:

ನಟಿ ಕತ್ರಿನಾ ಕೈಫ್​ ಕೂಡ ಸಲ್ಮಾನ್​ ಖಾನ್​ ಅವರನ್ನು ಪ್ರೀತಿಸುತ್ತಿದ್ದರು ಎಂಬ ಮಾತಿದೆ. ಕತ್ರಿನಾ ವೃತ್ತಿಬದುಕಿಗೆ ಸಲ್ಲು ಬೆಂಬಲವಾಗಿ ನಿಂತಿದ್ದರು. ನಂತರ ರಣಬೀರ್​ ಕಪೂರ್​ ಕಡೆಗೆ ಕತ್ರಿನಾ ಮನಸ್ಸು ವಾಲಿತು. ಈಗ ಅವರು ವಿಕ್ಕಿ ಕೌಶಲ್​ ಜೊತೆ ಮದುವೆಯಾಗಿ ಖುಷಿಯಾಗಿದ್ದಾರೆ. ಸಲ್ಲು ಮಾತ್ರ ಒಂಟಿಯಾಗಿ ಉಳಿದುಕೊಂಡಿದ್ದಾರೆ.

ಸಲ್ಲು ಮದುವೆ ಯಾವಾಗ ಎಂಬುದು ಒಂದು ಯಕ್ಷ ಪ್ರಶ್ನೆಯಾಗಿಯೇ ಉಳಿದುಕೊಂಡಿದೆ. ಈ ಬಗ್ಗೆ ಕೇಳಿದಾಗಲೆಲ್ಲ ಸಲ್ಮಾನ್​ ಖಾನ್​ ಅವರು ಜೋರಾಗಿ ನಕ್ಕು ಸುಮ್ಮನಾಗುತ್ತಾರೆ. ಸದ್ಯ ಒಂಟಿಯಾಗಿಯೇ ಹ್ಯಾಪಿ ಆಗಿರುವುದಾಗಿ ಅವರು ಹೇಳುತ್ತಾ ಬಂದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:30 am, Tue, 27 December 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ