AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Prabhas: ‘ಸಲ್ಮಾನ್​ ಖಾನ್​ ಮದುವೆ ಆದ ನಂತರವೇ ನನ್ನ ವಿವಾಹ’: ಎಲ್ಲರೆದುರು ಘೋಷಿಸಿದ ಪ್ರಭಾಸ್​

Prabhas Marriage | Unstoppable: ಮದುವೆ ಬಗ್ಗೆ ಕೇಳಿದ್ದಕ್ಕೆ ಪ್ರಭಾಸ್ ಅವರು ಸಲ್ಮಾನ್ ಖಾನ್​ ಕಡೆಗೆ ಕೈ ತೋರಿಸಿದ್ದಾರೆ. ಈ ಮಾತು ಕೇಳಿ ಎಲ್ಲರೂ ಜೋರಾಗಿ ನಕ್ಕಿದ್ದಾರೆ.

Prabhas: ‘ಸಲ್ಮಾನ್​ ಖಾನ್​ ಮದುವೆ ಆದ ನಂತರವೇ ನನ್ನ ವಿವಾಹ’: ಎಲ್ಲರೆದುರು ಘೋಷಿಸಿದ ಪ್ರಭಾಸ್​
ಪ್ರಭಾಸ್
TV9 Web
| Edited By: |

Updated on:Dec 18, 2022 | 9:24 PM

Share

ನಟ ಪ್ರಭಾಸ್​ (Prabhas) ಅವರು ಹಲವು ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಆಗಿದ್ದಾರೆ. ಬರೀ ಸಿನಿಮಾ ಕೆಲಸಗಳಲ್ಲೇ ಮುಳುಗಿ ಹೋಗಿರುವ ಅವರು ಮದುವೆ ಬಗ್ಗೆ ಇನ್ನೂ ಆಲೋಚನೆ ಮಾಡಿದಂತಿಲ್ಲ. ಅವರು ಎಲ್ಲೇ ಹೋದರೂ ಅಭಿಮಾನಿಗಳು ವಿವಾಹದ ಬಗ್ಗೆ ಪ್ರಶ್ನೆ ಕೇಳುತ್ತಾರೆ. ಹಲವು ಸಂದರ್ಶನಗಳಲ್ಲೂ ಪ್ರಭಾಸ್​ ಅವರಿಗೆ ಈ ಪ್ರಶ್ನೆ ಎದುರಾಗೋದು ಸಹಜ ಎಂಬಂತಾಗಿದೆ. ಇತ್ತೀಚೆಗೆ ಅವರು ‘ಅನ್​ಸ್ಟಾಪಬಲ್​’ (Unstoppable) ಟಾಕ್​ ಶೋಗೆ ಅತಿಥಿಯಾಗಿ ಹೋಗಿದ್ದಾರೆ. ಅದರಲ್ಲಿಯೂ ಮದುವೆ ಬಗ್ಗೆ ಮಾತು ಬಂದಿದೆ. ಅದಕ್ಕೆ ಪ್ರಭಾಸ್​ ಅಚ್ಚರಿಯ ಉತ್ತರ ನೀಡಿದ್ದಾರೆ. ‘ಸಲ್ಮಾನ್​ ಖಾನ್​ (Salman Khan) ಮದುವೆ ಆದ ನಂತರವೇ ನನ್ನ ಮದುವೆ’ ಎಂದು ಅವರು ಹೇಳಿದ್ದಾರೆ. ಇದರ ಪ್ರೋಮೋ ಸಖತ್​ ವೈರಲ್​ ಆಗಿದೆ.

ಟಾಲಿವುಡ್​ನ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಅವರು ‘ಅನ್​ಸ್ಟಾಪಬಲ್​’ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ತೆಲುಗಿನ ಅನೇಕ ಸ್ಟಾರ್​ ಸೆಲೆಬ್ರಿಟಿಗಳು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಪ್ರಭಾಸ್​ ಪಾಲ್ಗೊಂಡಿರುವ ಈ ಸಂಚಿಕೆ ಡಿಸೆಂಬರ್​​ 30ರಂದು ‘ಆಹಾ’ ಒಟಿಟಿಯಲ್ಲಿ ಪ್ರಸಾರ ಆಗಲಿದೆ. ಪ್ರಭಾಸ್​ ಜೊತೆ ನಟ ಗೋಪಿಚಂದ್​ ಕೂಡ ಸಾಥ್​ ನೀಡಿದ್ದಾರೆ.

ಇದನ್ನೂ ಓದಿ
Image
Adipurush: ಪ್ರಭಾಸ್​ ಫ್ಯಾನ್ಸ್​ ಮನ ಗೆದ್ದ ‘ಆದಿಪುರುಷ್​’ ಟೀಸರ್​; ಇಲ್ಲಿದೆ ರಾಮ-ರಾವಣರ ಮುಖಾಮುಖಿ
Image
Adipurush Teaser: ‘ಆದಿಪುರುಷ್​’ ಟೀಸರ್​ ಬಿಡುಗಡೆ; ಅಯೋಧ್ಯೆಯಲ್ಲಿ ರಾಮನಾಗಿ ದರ್ಶನ ನೀಡಿದ ಪ್ರಭಾಸ್​
Image
Prabhas: ದೊಡ್ಡಪ್ಪನ ನಿಧನದ ನೋವಿಟ್ಟುಕೊಂಡು ಕೆಲಸಕ್ಕೆ ಬಂದ ಪ್ರಭಾಸ್​; ‘ಸಲಾರ್​’ ಶೂಟಿಂಗ್​ ಮತ್ತೆ ಶುರು
Image
Prabhas: ದೊಡ್ಡಪ್ಪನ ಅಂತ್ಯ ಸಂಸ್ಕಾರಕ್ಕೆ ಬಂದ ಫ್ಯಾನ್ಸ್​ಗೆ ಊಟದ ವ್ಯವಸ್ಥೆ ಮಾಡಿಸಿ ಕಾಳಜಿ ತೋರಿದ ಪ್ರಭಾಸ್​

ಇದನ್ನೂ ಓದಿ: Prabhas: ಪ್ರಭಾಸ್​ ಹೊಸ ಚಿತ್ರದ ಒಂದೇ ಸೆಟ್​ಗೆ 10 ಕೋಟಿ ರೂ. ಸುರಿಯಲು ಮುಂದಾದ ನಿರ್ಮಾಪಕರು

‘ಶರ್ವಾನಂದ್​ ಹೇಳ್ತಾಯಿದ್ರು.. ಪ್ರಭಾಸ್​ ಮದುವೆ ಆದ್ಮೇಲೆ ಅವರು ಮದುವೆ ಆಗ್ತಾರಂತೆ’ ಎಂದು ಬಾಲಯ್ಯ ಹೇಳಿದರು. ಅದಕ್ಕೆ ಉತ್ತರಿಸಿದ ಪ್ರಭಾಸ್​, ‘ಸಲ್ಮಾನ್ ಖಾನ್​ ಮದುವೆ ಆದ ನಂತರ ನಾನು ಮದುವೆ ಆಗ್ತೀನಿ’ ಎಂದಿದ್ದಾರೆ. ಈ ಮಾತು ಕೇಳಿ ಎಲ್ಲರೂ ಜೋರಾಗಿ ನಕ್ಕಿದ್ದಾರೆ. ಈ ಮಸ್ತ್​ ಎಪಿಸೋಡ್​ ನೋಡಲು ಪ್ರಭಾಸ್​ ಅಭಿಮಾನಿಗಳು ಕಾದಿದ್ದಾರೆ.

View this post on Instagram

A post shared by ahavideoin (@ahavideoin)

ಪ್ರಭಾಸ್​-ಕೃತಿ ಸನೋನ್​ ಬಗ್ಗೆ ಹಬ್ಬಿತ್ತು ಗಾಸಿಪ್​:

ಕೆಲವೇ ದಿನಗಳ ಹಿಂದೆ ರಿಯಾಲಿಟಿ ಶೋವೊಂದರಲ್ಲಿ ವರುಣ್​ ಧವನ್​ ಭಾಗವಹಿಸಿದ್ದರು. ಆ ಕಾರ್ಯಕ್ರಮದಲ್ಲಿ ಕೃತಿ ಸನೋನ್​ ಕೂಡ ಇದ್ದರು. ಕರಣ್​ ಜೋಹರ್​ ಕೇಳಿದ ಒಂದು ಪ್ರಶ್ನೆಗೆ ಉತ್ತರಿಸುವಾಗ ನಾಯಕಿಯರ ಪಟ್ಟಿ ಮಾಡಿದ ವರುಣ್​ ಧವನ್​ ಅವರು ಕೃತಿ ಸನೋನ್​ ಹೆಸರನ್ನು ಕೈ ಬಿಟ್ಟಿದ್ದರು. ಯಾಕೆ ಎಂದು ಪ್ರಶ್ನಿಸಿದಾಗ ವರುಣ್​ ಧವನ್​ ಅಸಲಿ ವಿಷಯ ಬಾಯ್ಬಿಟ್ಟಿದ್ದರು. ‘ಈ ಪಟ್ಟಿಯಲ್ಲಿ ಕೃತಿ ಸನೋನ್​ ಹೆಸರು ಇಲ್ಲ. ಯಾಕೆಂದರೆ ಅವರ ಹೆಸರು ಬೇರೆ ವ್ಯಕ್ತಿಯ ಹೃದಯದಲ್ಲಿದೆ. ಅವರು ಈಗ ಮುಂಬೈನಲ್ಲಿ ಇಲ್ಲ. ಈಗ ದೀಪಿಕಾ ಪಡುಕೋಣೆ ಜೊತೆ ಶೂಟಿಂಗ್​ ಮಾಡುತ್ತಿದ್ದಾರೆ’ ಎಂದು ವರುಣ್​ ಧವನ್​ ಹೇಳಿದರು. ‘ಪ್ರಾಜೆಕ್ಟ್​ ಕೆ’ ಸಿನಿಮಾಗಾಗಿ ಪ್ರಭಾಸ್​ ಅವರು ದೀಪಿಕಾ ಜೊತೆ ಶೂಟಿಂಗ್​ ಮಾಡುತ್ತಿದ್ದಾರೆ. ಹಾಗಾಗಿ ವರುಣ್​ ಧವನ್​ ಹೇಳಿದ್ದು ಪ್ರಭಾಸ್​ ಬಗ್ಗೆಯೇ ಎಂದು ಎಲ್ಲರೂ ಊಹಿಸಿದರು.

ಇದನ್ನೂ ಓದಿ: ‘ಹನುಮಾನ್’ ಚಿತ್ರದ ಟೀಸರ್​ನಲ್ಲಿ ಬರುವ ಗ್ರಾಫಿಕ್ಸ್ ನೋಡಿ ಪ್ರಭಾಸ್​ಗೆ ಚುಚ್ಚಿದ ಸಿನಿಪ್ರಿಯರು

ಗಾಸಿಪ್​ಗೆ ಸ್ಪಷ್ಟನೆ ನೀಡಿದ ಕೃತಿ ಸನೋನ್​:

‘ಅದು ಪ್ರೀತಿ ಅಲ್ಲ. ಪ್ರಚಾರದ ಗಿಮಿಕ್ ಕೂಡ ಅಲ್ಲ. ರಿಯಾಲಿಟಿ ಶೋನಲ್ಲಿ ವರುಣ್​ ಧವನ್​ ಸ್ವಲ್ಪ ವೈಲ್ಡ್​ ಆಗಿ ನಡೆದುಕೊಂಡರು ಅಷ್ಟೇ. ತಮಾಷೆಗೆ ಆಡಿದ ಮಾತಿನಿಂದ ಸಾಕಷ್ಟು ವದಂತಿಗಳು ಹುಟ್ಟಿಕೊಂಡಿವೆ. ಬೇರೆ ಯಾವುದೋ ಮಾಧ್ಯಮದವರು ನನ್ನ ಮದುವೆ ಡೇಟ್ ಅನೌನ್ಸ್​ ಮಾಡುವ ಮುನ್ನ ನಾನೇ ಆ ಭ್ರಮೆಯನ್ನು ಹೊಡೆದುಹಾಕುತ್ತೇನೆ. ಎಲ್ಲ ವದಂತಿಗಳು ಆಧಾರರಹಿತವಾಗಿವೆ’ ಎಂದು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಕೃತಿ ಸನೋನ್​ ಬರೆದುಕೊಂಡಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:00 pm, Sun, 18 December 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್