Prabhas: ದೊಡ್ಡಪ್ಪನ ನಿಧನದ ನೋವಿಟ್ಟುಕೊಂಡು ಕೆಲಸಕ್ಕೆ ಬಂದ ಪ್ರಭಾಸ್; ‘ಸಲಾರ್’ ಶೂಟಿಂಗ್ ಮತ್ತೆ ಶುರು
Salaar: ಕೃಷ್ಣಂ ರಾಜು ನಿಧನರಾದ ಕಾರಣದಿಂದ ಪ್ರಭಾಸ್ ಅವರು ಕನಿಷ್ಠ ಎರಡು ವಾರವಾದರೂ ಬ್ರೇಕ್ ತೆಗೆದುಕೊಳ್ಳಬಹುದು ಅಂತ ಎಲ್ಲರೂ ಊಹಿಸಿದ್ದರು. ಆದರೆ ಅದಕ್ಕೂ ಮುನ್ನವೇ ಅವರು ಶೂಟಿಂಗ್ಗೆ ಮರಳಿದ್ದಾರೆ.
ನಟ ಪ್ರಭಾಸ್ (Prabhas) ಅವರ ಮನೆಯಲ್ಲಿ ಸೂತಕ ಛಾಯೆ ಇದೆ. ಅವರ ದೊಡ್ಡಪ್ಪ ಕೃಷ್ಣಂ ರಾಜು ನಿಧನದಿಂದ ಇಡೀ ಕುಟುಂಬದಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ. ಪ್ರಭಾಸ್ ಅವರ ವೃತ್ತಿಜೀವನದನಲ್ಲಿ ಕೃಷ್ಣಂ ರಾಜು (Krishnam Raju) ಅವರು ತುಂಬ ಮಹತ್ವದ ಪಾತ್ರ ವಹಿಸಿದ್ದರು. ಹಾಗಾಗಿ ಅವರನ್ನು ಕಂಡರೆ ಪ್ರಭಾಸ್ಗೆ ತುಂಬ ಪ್ರೀತಿ, ಗೌರವ. ಆದರೆ ಏಕಾಏಕಿ ದೊಡ್ಡಪ್ಪನನ್ನು ಕಳೆದುಕೊಂಡಿರುವುದು ಪ್ರಭಾಸ್ ಮನಸ್ಸಿಗೆ ಆಘಾತ ಉಂಟು ಮಾಡಿದೆ. ಹಾಗಿದ್ದರೂ ಕೂಡ ಅವರು ಕೆಲಸದ ಮೇಲಿರುವ ನಿಷ್ಠೆಯನ್ನು ಕಡಿಮೆ ಮಾಡಿಕೊಂಡಿಲ್ಲ. ಎಲ್ಲರೂ ಊಹಿಸಿದ್ದಕ್ಕಿಂತಲೂ ಮುಂಚೆಯೇ ಅವರು ಶೂಟಿಂಗ್ಗೆ ಮರಳಿದ್ದಾರೆ. ಮನದಲ್ಲಿ ಬೆಟ್ಟದಷ್ಟು ನೋವಿದ್ದರೂ ಕೂಡ ‘ಸಲಾರ್’ (Salaar) ಸಿನಿಮಾದ ಚಿತ್ರೀಕರಣಕ್ಕೆ ಅವರು ಹಾಜರಾಗಿದ್ದಾರೆ. ಇದು ಎಲ್ಲರಿಗೂ ಅಚ್ಚರಿ ಉಂಟು ಮಾಡಿದೆ.
ಪ್ರಶಾಂತ್ ನೀಲ್ ಅವರು ‘ಸಲಾರ್’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಬೃಹತ್ ಸೆಟ್ಗಳನ್ನು ನಿರ್ಮಿಸಿ ಶೂಟಿಂಗ್ ಮಾಡಲಾಗುತ್ತಿದೆ. ಆದರೆ ಪ್ರಭಾಸ್ ಅವರ ದೊಡ್ಡಪ್ಪ ಕೃಷ್ಣಂ ರಾಜು ನಿಧನರಾದ ಕಾರಣದಿಂದ ಚಿತ್ರೀಕರಣಕ್ಕೆ ಹಿನ್ನಡೆ ಆಗಿತ್ತು. ಪ್ರಭಾಸ್ ಅವರು ಕನಿಷ್ಠ ಎರಡು ವಾರವಾದರೂ ಬ್ರೇಕ್ ತೆಗೆದುಕೊಳ್ಳಬಹುದು ಎಂದೇ ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಅದಕ್ಕೂ ಮುನ್ನವೇ ಅವರು ಶೂಟಿಂಗ್ಗೆ ಮರಳಿದ್ದಾರೆ.
ಕೃಷ್ಣಂ ರಾಜು ಅವರ 11ನೇ ದಿನದ ಕಾರ್ಯಗಳನ್ನು ಮಾಡಲಾಗಿದೆ. ಹಾಗಾಗಿ ಪ್ರಭಾಸ್ ಅವರು ಮತ್ತೆ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಳ್ಳಲು ಆರಂಭಿಸಿದ್ದಾರೆ. ಗುರುವಾರವೇ (ಸೆಪ್ಟೆಂಬರ್ 22) ಅವರು ‘ಸಲಾರ್’ ಸೆಟ್ಗೆ ಮರಳಿದ್ದಾರೆ. ಒಂದೆರಡು ದೃಶ್ಯಗಳಲ್ಲಿ ಅಭಿನಯಿಸಿದ್ದಾರೆ. ಇದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಈ ಚಿತ್ರದಲ್ಲಿ ಪ್ರಭಾಸ್ಗೆ ಜೋಡಿಯಾಗಿ ಶ್ರುತಿ ಹಾಸನ್ ನಟಿಸುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ಶೂಟಿಂಗ್ಗೆ ಹಾಜರಾಗುವಂತೆ ಅವರಿಗೆ ಪ್ರಭಾಸ್ ನೀಲ್ ಸೂಚಿಸಿದ್ದಾರೆ ಎಂದು ವರದಿ ಆಗಿದೆ.
ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಕಾಂಬಿನೇಷನ್ನಲ್ಲಿ ‘ಸಲಾರ್’ ಸಿನಿಮಾ ಮೂಡಿಬರುತ್ತಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ. ತುಂಬ ಅದ್ದೂರಿಯಾಗಿ ನಿರ್ಮಾಣ ಆಗುತ್ತಿರುವ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವುದು ‘ಕೆಜಿಎಫ್: ಚಾಪ್ಟರ್ 2’ ಖ್ಯಾತಿಯ ನಿರ್ಮಾಪಕ ವಿಜಯ್ ಕಿರಗಂದೂರು. ಘಟಾನುಘಟಿ ತಂತ್ರಜ್ಞರು ಪ್ರಶಾಂತ್ ನೀಲ್ ಜೊತೆ ಕೆಲಸ ಮಾಡುತ್ತಿದ್ದಾರೆ.
ಪ್ರಭಾಸ್ ಅವರು ‘ಆದಿಪುರುಷ್’ ಚಿತ್ರದಲ್ಲೂ ನಟಿಸಿದ್ದು, ಆ ಸಿನಿಮಾದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಅನೇಕ ಕಡೆಗಳಲ್ಲಿ ತೆರಳಿ ಅವರು ಪ್ರಚಾರ ಮಾಡಬೇಕಿದೆ. ಇಲ್ಲದೇ ‘ಪ್ರಾಜೆಕ್ಟ್ ಕೆ’ ಸಿನಿಮಾದ ಕೆಲಸಗಳು ಕೂಡ ಪ್ರಗತಿಯಲ್ಲಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:02 am, Fri, 23 September 22