ವಯಸ್ಸಿನಲ್ಲಿ 11 ವರ್ಷ ಚಿಕ್ಕ ನಟಿಯ ಜತೆ ಪ್ರಭಾಸ್ ಡೇಟಿಂಗ್? ಸೂತಕದ ಮನೆಗೆ ಬೇಸರ ತಂದ ಗಾಸಿಪ್
ಈ ಸಿನಿಮಾದಲ್ಲಿ ಕೃತಿ ಸನನ್ ಅವರು ಮುಖ್ಯಭೂಮಿಕೆಯಲ್ಲಿದ್ದಾರೆ. ಈಗ ಇಬ್ಬರ ನಡುವೆ ಏನೋ ನಡೆಯುತ್ತಿದೆ ಎಂದು ಗಾಸಿಪ್ ಮಂದಿ ಸುದ್ದಿ ಹಬ್ಬಿಸಿದ್ದಾರೆ.
ನಟ ಪ್ರಭಾಸ್ (Prabhas) ಅವರು ಟಾಲಿವುಡ್ನ ಬೇಡಿಕೆಯ ನಟ. ‘ಬಾಹುಬಲಿ’ ಅಂತಹ ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಅವರಿಗೆ ಇದೆ. ಕೇವಲ ನಟನೆ ಮಾತ್ರವಲ್ಲದೆ, ಮದುವೆ ವಿಚಾರಕ್ಕೂ ಪ್ರಭಾಸ್ ಸಾಕಷ್ಟು ಬಾರಿ ಸುದ್ದಿ ಆಗಿದ್ದು ಇದೆ. ಅನುಷ್ಕಾ ಶೆಟ್ಟಿ (Anushka Shetty) ಹಾಗೂ ಪ್ರಭಾಸ್ ಮದುವೆ ಆಗುತ್ತಾರೆ ಎನ್ನಲಾಗಿತ್ತು. ಈ ಸುದ್ದಿ ಸಾಕಷ್ಟು ಸಮಯದವರೆಗೆ ಹಾಗೆಯೇ ಇತ್ತು. ಆದರೆ, ಅದೇಕೋ ನಿಜ ಆಗಲಿಲ್ಲ. ಇಬ್ಬರ ಮಧ್ಯೆ ವೈಮನಸ್ಸು ಬಂದ ಕಾರಣ ವಿವಾಹ ನಡೆದಿಲ್ಲ ಎಂದು ಕೆಲವರು ಹೇಳುತ್ತಾರೆ. ಆದರೆ, ಅಸಲಿ ವಿಚಾರ ಇನ್ನೂ ಬಯಲಾಗಿಲ್ಲ. ಈಗ ಪ್ರಭಾಸ್ ಮತ್ತೆ ಸುದ್ದಿಯಲ್ಲಿದ್ದಾರೆ. ಅವರು ಸಹ ನಟಿಯ ಜತೆ ಸುತ್ತಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ. ಅವರು ಬೇರಾರೂ ಅಲ್ಲ ಕೃತಿ ಸನೋನ್ (Kriti Sanon).
ಓಂ ರಾವುತ್ ಅವರು ‘ಆದಿಪುರುಷ್’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ‘ಆದಿಪುರುಷ್’ ಬಿಗ್ ಬಜೆಟ್ ಚಿತ್ರ. ಈ ಚಿತ್ರಕ್ಕಾಗಿ ಅದ್ದೂರಿ ಸೆಟ್ ಹಾಕಲಾಗಿದೆ. ಪ್ರಭಾಸ್ ಅವರ ಪಾಲಿಗೆ ಈ ಚಿತ್ರ ವಿಶೇಷವಾಗಿರಲಿದೆ. ರಾಮನ ಪಾತ್ರದಲ್ಲಿ ಪ್ರಭಾಸ್ ಮಿಂಚಲಿದ್ದಾರೆ. ಈ ಸಿನಿಮಾದಲ್ಲಿ ಕೃತಿ ಸನನ್ ಅವರು ಮುಖ್ಯಭೂಮಿಕೆಯಲ್ಲಿದ್ದಾರೆ. ಈಗ ಇಬ್ಬರ ನಡುವೆ ಏನೋ ನಡೆಯುತ್ತಿದೆ ಎಂದು ಗಾಸಿಪ್ ಮಂದಿ ಸುದ್ದಿ ಹಬ್ಬಿಸಿದ್ದಾರೆ.
ಕೃತಿ ಸನನ್ಗೆ 32 ವರ್ಷ. ಪ್ರಭಾಸ್ ಅಕ್ಟೋಬರ್ನಲ್ಲಿ 43ನೇ ವಯಸ್ಸಿಗೆ ಕಾಲಿಡಲಿದ್ದಾರೆ. ಇಬ್ಬರ ಮಧ್ಯೆ 11 ವರ್ಷ ವಯಸ್ಸಿನ ಅಂತರ ಇದೆ. ಇವರು ಡೇಟಿಂಗ್ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಹಲವು ಕಡೆಗಳಲ್ಲಿ ಈ ಬಗ್ಗೆ ಸುದ್ದಿ ಹರಿದಾಡಿದೆ. ಅಸಲಿಗೆ ಈ ವಿಚಾರ ಹುಟ್ಟಿಕೊಂಡಿದ್ದು ಬಾಲಿವುಡ್ನಲ್ಲಿ ಎನ್ನಲಾಗುತ್ತಿದೆ. ಈ ವಿಚಾರ ಫ್ಯಾನ್ಸ್ಗೆ ಬೇಸರ ಮೂಡಿಸಿದೆ.
ಪ್ರಭಾಸ್ ಹಾಗೂ ಕೃತಿ ಹಲವು ಸಮಯದಿಂದ ಈ ಸಿನಿಮಾದ ಶೂಟಿಂಗ್ನಲ್ಲಿ ಭಾಗಿ ಆಗುತ್ತಿದ್ದಾರೆ. ಇಬ್ಬರ ನಡುವೆ ಒಳ್ಳೆಯ ಫ್ರೆಂಡ್ಶಿಪ್ ಬೆಳೆದಿದೆ. ಆದರೆ, ಇದನ್ನು ಬಾಲಿವುಡ್ ಮಂದಿ ಬೇರೆಯದೇ ರೀತಿಯಲ್ಲಿ ಅರ್ಥೈಸುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Salaar: ಪ್ರಭಾಸ್ ಮನೆಯಲ್ಲಿ ಸೂತಕ; ‘ಸಲಾರ್’ ಚಿತ್ರದ ಶೂಟಿಂಗ್ ಮತ್ತೆ ಮುಂದಕ್ಕೆ
ಪ್ರಭಾಸ್ ದೊಡ್ಡಪ್ಪ ಕೃಷ್ಣಂ ರಾಜು ಇತ್ತೀಚೆಗೆ ನಿಧನರಾಗಿದ್ದರು. ಇದು ಪ್ರಭಾಸ್ ಹಾಗೂ ಪ್ರಭಾಸ್ ಫ್ಯಾನ್ಸ್ಗೆ ತೀವ್ರ ನೋವುಂಟು ಮಾಡಿದೆ. ಒಂದಷ್ಟು ದಿನಗಳ ಕಾಲ ಪ್ರಭಾಸ್ ಅವರು ಎಲ್ಲ ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆಯಲಿದ್ದಾರೆ ಎನ್ನಲಾಗುತ್ತಿದೆ. ಹೀಗಿರುವಾಗಲೇ ಹೊಸ ವದಂತಿ ಹುಟ್ಟಿಕೊಂಡಿದೆ.