AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Salaar: ಪ್ರಭಾಸ್​ ಮನೆಯಲ್ಲಿ ಸೂತಕ; ‘ಸಲಾರ್​’ ಚಿತ್ರದ ಶೂಟಿಂಗ್​ ಮತ್ತೆ ಮುಂದಕ್ಕೆ

Prabhas | Krishnam Raju: ದೊಡ್ಡಪ್ಪನ ನಿಧನದಿಂದ ಕಣ್ಣೀರು ಹಾಕುತ್ತಿರುವ ಪ್ರಭಾಸ್ ಅವರಿಗೆ ಎಲ್ಲರೂ ಸಮಾಧಾನ ಮಾಡುತ್ತಿದ್ದಾರೆ. ಸದ್ಯಕ್ಕೆ ಎಲ್ಲ ಸಿನಿಮಾ ಕೆಲಸಗಳಿಗೆ ಪ್ರಭಾಸ್​ ಬ್ರೇಕ್​ ನೀಡಿದ್ದಾರೆ.

Salaar: ಪ್ರಭಾಸ್​ ಮನೆಯಲ್ಲಿ ಸೂತಕ; ‘ಸಲಾರ್​’ ಚಿತ್ರದ ಶೂಟಿಂಗ್​ ಮತ್ತೆ ಮುಂದಕ್ಕೆ
ಪ್ರಭಾಸ್
TV9 Web
| Edited By: |

Updated on: Sep 15, 2022 | 7:30 AM

Share

ಅನೇಕ ಕಾರಣಗಳಿಂದಾಗಿ ‘ಸಲಾರ್​’ (Salaar) ಸಿನಿಮಾದ ಶೂಟಿಂಗ್​ ಮುಂದೂಡಲ್ಪಡುತ್ತಲೇ ಇದೆ. ಈ ಚಿತ್ರದ ಮೇಲೆ ಅಭಿಮಾನಿಗಳು ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದಷ್ಟು ಬೇಗ ಈ ಸಿನಿಮಾವನ್ನು ನೋಡಬೇಕು ಎಂಬುದು ಫ್ಯಾನ್ಸ್​ ಬಯಕೆ. ಆದರೆ ಒಂದಿಲ್ಲೊಂದು ಸಮಸ್ಯೆಯಿಂದಾಗಿ ಶೂಟಿಂಗ್​ ತಡವಾಗುತ್ತಲೇ ಇದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸೆಪ್ಟೆಂಬರ್ ಮೂರನೇ ವಾರದಲ್ಲಿ ಪ್ರಭಾಸ್​ (Prabhas) ಅವರು ‘ಸಲಾರ್​’​ ಚಿತ್ರೀಕರಣದಲ್ಲಿ ಭಾಗಿ ಆಗಬೇಕಿತ್ತು. ಆದರೆ ಅವರ ಮನೆಯಲ್ಲೀಗ ಸೂತಕದ ವಾತಾವರಣ ಸೃಷ್ಟಿ ಆಗಿದೆ. ಪ್ರಭಾಸ್​ ದೊಡ್ಡಪ್ಪ ಕೃಷ್ಣಂ ರಾಜು (Krishnam Raju) ನಿಧನರಾಗಿರುವುದು ತೀವ್ರ ನೋವುಂಟು ಮಾಡಿದೆ. ಒಂದಷ್ಟು ದಿನಗಳ ಕಾಲ ಪ್ರಭಾಸ್​ ಅವರು ಎಲ್ಲ ಸಿನಿಮಾ ಕೆಲಸಗಳಿಂದ ಬ್ರೇಕ್​ ಪಡೆಯಲಿದ್ದಾರೆ ಎನ್ನಲಾಗಿದೆ.

ಕೃಷ್ಣಂ ರಾಜು ಮತ್ತು ಪ್ರಭಾಸ್​ ಅವರ ನಡುವೆ ತುಂಬ ಆತ್ಮೀಯತೆ ಇತ್ತು. ಪ್ರಭಾಸ್​ ವೃತ್ತಿಜೀವನಕ್ಕೆ ಕೃಷ್ಣಂ ರಾಜು ಅವರು ಮಾರ್ಗದರ್ಶಕರಾಗಿದ್ದರು. ಹಾಗಾಗಿ ಅವರನ್ನು ಕಳೆದುಕೊಂಡಿದ್ದು ‘ಸಲಾರ್​’ ಹೀರೋಗೆ ಭಾವನಾತ್ಮಕವಾಗಿ ತುಂಬಲಾರದ ನಷ್ಟ ಆಗಿದೆ. ಪ್ರಭಾಸ್​ ಮದುವೆಯನ್ನು ನೋಡಬೇಕು, ಪ್ರಭಾಸ್​ ಮಕ್ಕಳ ಜೊತೆ ತಾವು ನಟಿಸಬೇಕು ಎಂಬ ಆಸೆಯನ್ನು ಕೃಷ್ಣಂ ರಾಜು ಇಟ್ಟುಕೊಂಡಿದ್ದರು. ಆದರೆ ಆ ಎಲ್ಲ ಆಸೆಗಳು ಈಡೇರುವುದಕ್ಕೂ ಮುನ್ನವೇ ಅವರು ಇಹಲೋಕ ತ್ಯಜಿಸಿದ್ದಾರೆ.

ದೊಡ್ಡಪ್ಪನ ನಿಧನದಿಂದ ಪ್ರಭಾಸ್​ ಕಣ್ಣೀರು ಹಾಕುತ್ತಿದ್ದಾರೆ. ಅವರಿಗೆ ಎಲ್ಲರೂ ಸಮಾಧಾನ ಮಾಡುತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳು ಪ್ರಭಾಸ್​ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುತ್ತಿದ್ದಾರೆ. ಈ ವೇಳೆ ಪ್ರಭಾಸ್​ ಅವರು ಕುಟುಂಬದ ಸದಸ್ಯರ ಜೊತೆಯಲ್ಲಿ ಇರಬೇಕಾದ್ದು ತುಂಬ ಅಗತ್ಯ. ಹಾಗಾಗಿ ಸದ್ಯಕ್ಕೆ ಎಲ್ಲ ಶೂಟಿಂಗ್​ ಮುಂದೂಡಲಾಗಿದೆ.

ಇದನ್ನೂ ಓದಿ
Image
Prabhas: ದೊಡ್ಡಪ್ಪನ ಅಂತ್ಯ ಸಂಸ್ಕಾರಕ್ಕೆ ಬಂದ ಫ್ಯಾನ್ಸ್​ಗೆ ಊಟದ ವ್ಯವಸ್ಥೆ ಮಾಡಿಸಿ ಕಾಳಜಿ ತೋರಿದ ಪ್ರಭಾಸ್​
Image
Krisham Raju: ಪ್ರಭಾಸ್ ದೊಡ್ಡಪ್ಪ, ಟಾಲಿವುಡ್​ನ​ ರೆಬೆಲ್​ಸ್ಟಾರ್ ಕೃಷ್ಣಂರಾಜು ನಿಧನ
Image
ಪ್ರಭಾಸ್​ ವರ್ಸಸ್​ ಪ್ರಭಾಸ್​: ‘ಸಲಾರ್​’ ಚಿತ್ರದಲ್ಲಿ ಡಬಲ್​ ರೋಲ್​ ಮಾಡಿಸುತ್ತಾರಾ ಪ್ರಶಾಂತ್​ ನೀಲ್​?
Image
ಕಿಸ್​ ಮತ್ತು ಶರ್ಟ್​ ಲೆಸ್​ ದೃಶ್ಯದಲ್ಲಿ ಪ್ರಭಾಸ್​ಗೆ ಕಿರಿಕಿರಿ; ಈ ವಿಚಾರದಲ್ಲಿ ಅವರದ್ದು ಒಂದೇ ಒಂದು ಕಂಡೀಷನ್​

‘ಸಲಾರ್​’ ಸಿನಿಮಾಗೆ ಖ್ಯಾತ ನಿರ್ದೇಶಕ ಪ್ರಶಾಂತ್​ ನೀಲ್​ ಅವರು ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ‘ಕೆಜಿಎಫ್​’ ಚಿತ್ರದ ಭಾರಿ ಯಶಸ್ಸಿನ ಬಳಿಕ ಅವರು ಈ ಸಿನಿಮಾ ಕೈಗೆತ್ತಿಕೊಂಡರು. ಹಾಗಾಗಿ ‘ಸಲಾರ್​’ ಮೇಲೆ ಹೆಚ್ಚು ನಿರೀಕ್ಷೆ ಇದೆ. ಅದರಲ್ಲೂ ‘ಕೆಜಿಎಫ್​: ಚಾಪ್ಟರ್​ 2’ ಸಾರ್ವಕಾಲಿಕ ಹಿಟ್​ ಆಗಿರುವುದರಿಂದ ಪ್ರಶಾಂತ್​ ನೀಲ್​ ಅವರ ಕೆಲಸ ಮೇಲೆ ಪ್ರೇಕ್ಷಕರಿಗೆ ಎಲ್ಲಿಲ್ಲದಷ್ಟು ಭರವಸೆ ಮೂಡಿದೆ.

ಬೃಹತ್​ ಸೆಟ್​ಗಳಲ್ಲಿ ‘ಸಲಾರ್​’ ಸಿನಿಮಾದ ಶೂಟಿಂಗ್​ ಮಾಡಲಾಗುತ್ತಿದೆ. ‘ಹೊಂಬಾಳೆ ಫಿಲ್ಮ್ಸ್​’ ಮೂಲಕ ಅದ್ದೂರಿಯಾಗಿ ನಿರ್ಮಾಣ ಮಾಡಲಾಗುತ್ತಿದೆ. ವಿಜಯ್​ ಕಿರಗಂದೂರು ಅವರು ಈ ಚಿತ್ರಕ್ಕೆ ನೂರಾರು ಕೋಟಿ ರೂಪಾಯಿ ಬಂಡವಾಳ ಹೂಡುತ್ತಿದ್ದಾರೆ. ಶ್ರುತಿ ಹಾಸನ್​ ಅವರು ಪ್ರಭಾಸ್​ಗೆ ಹೀರೋಯಿನ್​ ಆಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ