Krisham Raju: ಪ್ರಭಾಸ್ ದೊಡ್ಡಪ್ಪ, ಟಾಲಿವುಡ್ನ ರೆಬೆಲ್ಸ್ಟಾರ್ ಕೃಷ್ಣಂರಾಜು ನಿಧನ
‘ಗೋಪಿಕೃಷ್ಣ ಮೋವೀಸ್’ ಲಾಂಛನದಲ್ಲಿ ಚಿತ್ರಗಳನ್ನು ನಿರ್ಮಿಸುತ್ತಿದ್ದರು. ಹಲವು ಬಾರಿ ಫಿಲ್ಂಫೇರ್ ಮತ್ತು ನಂದಿ ಪ್ರಶಸ್ತಿಗಳು ಕೃಷ್ಣರಾಜು ಅವರಿಗೆ ಸಂದಿವೆ.
ಹೈದರಾಬಾದ್: ತೆಲುಗು ಸಿನಿಮಾ ರಂಗದ ರೆಬೆಲ್ ಸ್ಟಾರ್ ಎಂದೇ ಖ್ಯಾತರಾಗಿದ್ದ ಉಪ್ಪಲಪತ್ತಿ ವೆಂಕಟ ಕೃಷ್ಣಂರಾಜು (83) (Krishnam Raju) ಭಾನುವಾರ ನಸುಕಿನ 3:25ಕ್ಕೆ ತಮ್ಮ ನಿವಾಸದಲ್ಲಿ ನಿಧನರಾದರು. ನಟ, ಪತ್ರಕರ್ತ, ಛಾಯಾಗ್ರಾಹಕರಾಗಿ ಕೃಷ್ಣಂರಾಜು ಜನಪ್ರಿಯರಾಗಿದ್ದರು. ಪತ್ನಿ, ಮೂವರು ಪುತ್ರಿಯರು, ಅಪಾರ ಸ್ನೇಹಿತರು ಹಾಗೂ ಬಂಧುಗಳನ್ನು ಅವರು ಅಗಲಿದ್ದಾರೆ. ‘ಬಾಹುಬಲಿ’ ಖ್ಯಾತಿಯ ಪ್ರಭಾಸ್ (Prabhas) ಸಹ ಕೃಷ್ಣಂರಾಜು ಅವರ ಹತ್ತಿರದ ಸಂಬಂಧಿ. ಕೃಷ್ಣಂರಾಜು ಅವರು ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ, ಗ್ರಾಹಕ ಸೇವೆಗಳು, ಆಹಾರ ಮತ್ತು ಪಡಿತರ ವಿತರಣೆ, ರಕ್ಷಣಾ ಮತ್ತು ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಪಶ್ಚಿಮ ಗೋದಾವರಿ ಜಿಲ್ಲೆಯ ಮೊಗಲಟೂರು ಗ್ರಾಮದಲ್ಲಿ 1940ರಲ್ಲಿ ಕೃಷ್ಣಂರಾಜು ಜನಿಸಿದರು. 1966ರಲ್ಲಿ ‘ಚಿಲಕ ಗೋರಿಂಕಾ’ ಚಿತ್ರದಲ್ಲಿ ಮೊದಲ ಬಾರಿಗೆ ಬಣ್ಣಹಚ್ಚಿದ್ದರು. ನಂತರ ಹಲವು ಚಿತ್ರಗಳಲ್ಲಿ ಖಳನಾಯಕನಾಗಿ ಅಭಿನಯಿಸಿದರು. ನಂತರದ ದಿನಗಳಲ್ಲಿ ನಾಯಕನಟನಾಗಿ ಅಪಾರ ಜನಪ್ರಿಯ ಪಡೆದುಕೊಂಡರು. ಯುವಜನರ ಆಶೋತ್ತರಗಳಿಗೆ ಸ್ಪಂದಿಸುವ, ಸಿಡುಕು ಸ್ವಭಾವದ ವ್ಯಕ್ತಿಯಾಗಿ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಸುಮಾರು 183 ಚಿತ್ರಗಳಲ್ಲಿ ನಟಿಸಿದ್ದ ಕೃಷ್ಣಂರಾಜು ಅವರು ಕೊನೆಯ ಚಿತ್ರ ‘ರಾಧೇ ಶ್ಯಾಮ್’. ಇವರ ಹತ್ತಿರದ ಸಂಬಂಧಿ ಪ್ರಭಾಸ್ ಈ ಚಿತ್ರದ ನಾಯಕರಾಗಿದ್ದರು.
‘ಗೋಪಿಕೃಷ್ಣ ಮೂವೀಸ್’ ಲಾಂಛನದಲ್ಲಿ ಚಿತ್ರಗಳನ್ನು ನಿರ್ಮಿಸುತ್ತಿದ್ದರು. ಹಲವು ಬಾರಿ ಫಿಲ್ಂಫೇರ್ ಮತ್ತು ನಂದಿ ಪ್ರಶಸ್ತಿಗಳು ಕೃಷ್ಣರಾಜು ಅವರಿಗೆ ಸಂದಿವೆ. ತಂಡ್ರ ಪಾಪಾರಾಯುಡು, ಭಕ್ತ ಕಣ್ಣಪ್ಪ, ಬೊಬ್ಬಿಲಿ ಬ್ರಹ್ಮಣ್ಣ, ಬಾವ ಬಾವಮರ್ದಿ, ಧರ್ಮಾತ್ಮುಡು, ಜೀವನ ತರಂಗಾಲು ಕೃಷ್ಣವೇಣಿ ಸೇರಿದಂತೆ ಕೃಷ್ಣಂರಾಜು ಅಭಿನಯದ ಹಲವು ಸಿನಿಮಾನಗಳು ಮನೆಮಾತಾಗಿದ್ದವು.
ಗಣ್ಯರು, ಅಭಿಮಾನಿಗಳ ಸಂತಾಪ
ಕೃಷ್ಣಂರಾಜು ನಿಧನಕ್ಕೆ ಹಲವು ಸಿನಿ ನಟರು, ಗಣ್ಯರು ಮತ್ತು ಅಭಿಮಾನಿಗಳು ಟ್ವೀಟ್ ಮೂಲಕ ತಮ್ಮ ಸಂತಾಪ ಸಂದೇಶ ಹಂಚಿಕೊಂಡಿದ್ದಾರೆ.
A Legend Has left us… A man with a Heart of Gold.. Rest in Peace sir ?????? will miss your Presence and Motivational words always… @UVKrishnamRaju #KrishnamRaju ?? pic.twitter.com/0a4bhAik0r
— Nikhil Siddhartha (@actor_Nikhil) September 11, 2022
We are saddened and devastated by the passing of Legendary Actor our beloved Rebel Star #KrishnamRaju garu.
You will Always alive in our hearts sir!❤️?#RebelStarKrishnamRaju#RIPKrishnamRajuGaru pic.twitter.com/OiKcSNZILO
— Prasad Bhimanadham (@Prasad_Darling) September 11, 2022
Lost one of the pillars of Telugu Cinema. A pathbreaking actor, this void can never be fulfilled. Stay strong Prabhas Anna, and his family. Let’s all pray as he’s lost his biggest support & strength. #KrishnamRaju garu ?? pic.twitter.com/XedHvTaI3V
— Deepak Reddy (@deepuzoomout) September 11, 2022
రెబల్ స్టార్ కృష్ణంరాజు ఇక లేరు..
హైదరాబాద్ లో ఈ రోజు తెల్లవారుజామున 3.25 ని లకు కన్నుమూశారు. ఆయన వయస్సు 83 సంవత్సరాలు.ఆయన కేంద్ర మంత్రిగా పని చేశారు. కొంతకాలం నుంచి అనారోగ్యంతో ప్రైవేట్ ఆసుపత్రిలో చికిత్స పొందుతూ పరమపదించారు
Rebel Star #KrishnamRaju Garu is no more
Om Shanthi pic.twitter.com/sVQn1Klxtx
— BA Raju’s Team (@baraju_SuperHit) September 11, 2022
ತೆಲುಗಿನಲ್ಲಿ ಸುದ್ದಿ ಓದಲು ಲಿಂಕ್: విలన్, సపోర్టింగ్ రోల్స్లో నటించి మెప్పించిన కృష్ణం రాజు
Published On - 8:39 am, Sun, 11 September 22