AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಸ್ಟಾರ್ ಸೆಲೆಬ್ರಿಟಿಗಳು ಪ್ರತಿ ತಿಂಗಳು ಕಟ್ಟುವ ಎಲೆಕ್ಟ್ರಿಸಿಟಿ ಬಿಲ್‌ ಎಷ್ಟು ಲಕ್ಷ ರೂಪಾಯಿ ಗೊತ್ತಾ? ಇಲ್ಲಿದೆ ವಿವರ

ಬಾಲಿವುಡ್​ನ ಬಹುತೇಕ ಸ್ಟಾರ್​ಗಳು ಮುಂಬೈನಲ್ಲಿ ಸ್ವಂತ ಮನೆ ಹೊಂದಿದ್ದಾರೆ. ಶಾರುಖ್ ಖಾನ್ ಅವರ ನಿವಾಸ ‘ಮನ್ನತ್​’, ಅಮಿತಾಭ್ ಬಚ್ಚನ್ ಅವರ ಐಷಾರಾಮಿ ಬಂಗಲೆ ಸೇರಿ ಅನೇಕ ಕಲಾವಿದರ ಮನೆಯನ್ನು ಅಭಿಮಾನಿಗಳು ಹೊರಗಿನಿಂದ ನೋಡಿ ಕಣ್ತುಂಬಿಕೊಂಡಿದ್ದಿದೆ.

ಈ ಸ್ಟಾರ್ ಸೆಲೆಬ್ರಿಟಿಗಳು ಪ್ರತಿ ತಿಂಗಳು ಕಟ್ಟುವ ಎಲೆಕ್ಟ್ರಿಸಿಟಿ ಬಿಲ್‌ ಎಷ್ಟು ಲಕ್ಷ ರೂಪಾಯಿ ಗೊತ್ತಾ? ಇಲ್ಲಿದೆ ವಿವರ
ಸ್ಟಾರ್ ನಟರು ಪ್ರತಿ ತಿಂಗಳು ಕಟ್ಟುವ ಎಲೆಕ್ಟ್ರಿಸಿಟಿ ಬಿಲ್‌ ಎಷ್ಟು ಲಕ್ಷ ರೂಪಾಯಿ ಗೊತ್ತಾ
TV9 Web
| Edited By: |

Updated on: Sep 11, 2022 | 6:31 AM

Share

ಸೆಲೆಬ್ರಿಟಿಗಳ (Celebrity) ವೈಯಕ್ತಿಕ ವಿಚಾರಗಳನ್ನು ತಿಳಿದುಕೊಳ್ಳಲು ಫ್ಯಾನ್ಸ್ ಸದಾ ಕಾತುರರಾಗಿರುತ್ತಾರೆ. ಅವರ ಬಗ್ಗೆ ಯಾವುದೇ ಹೊಸ ವಿಚಾರ ಹೊರ ಬಿದ್ದರೂ ಆ ಬಗ್ಗೆ ಅಚ್ಚರಿಯಿಂದ ನೋಡುತ್ತಾರೆ. ನಟರ ಆಸ್ತಿ ಎಷ್ಟು? ಅವರ ಬಳಿ ಯಾವ ಕಾರುಗಳು ಇವೆ? ಹೀಗೆ ಅನೇಕ ವಿಚಾರ ತಿಳಿದುಕೊಳ್ಳಲು ಫ್ಯಾನ್ಸ್ ಉತ್ಸುಕರಾಗಿರುತ್ತಾರೆ. ಇದರ ಜತೆಗೆ ಸೆಲೆಬ್ರಿಟಿಗಳ ಮನೆಗೆ ಬರುವ ಪವರ್ ಬಿಲ್ (Electricity Bill) ಎಷ್ಟು ಎಂಬ ಕುತೂಹಲವೂ ಅನೇಕರಲ್ಲಿ ಇದೆ. ಆ ಪ್ರಶ್ನೆಗೂ ಉತ್ತರ ಇದೆ.

ಬಾಲಿವುಡ್​ನ ಬಹುತೇಕ ಸ್ಟಾರ್​ಗಳು ಮುಂಬೈನಲ್ಲಿ ಸ್ವಂತ ಮನೆ ಹೊಂದಿದ್ದಾರೆ. ಶಾರುಖ್ ಖಾನ್ ಅವರ ನಿವಾಸ ‘ಮನ್ನತ್​’, ಅಮಿತಾಭ್ ಬಚ್ಚನ್ ಅವರ ಐಷಾರಾಮಿ ಬಂಗಲೆ ಸೇರಿ ಅನೇಕ ಕಲಾವಿದರ ಮನೆಯನ್ನು ಅಭಿಮಾನಿಗಳು ಹೊರಗಿನಿಂದ ನೋಡಿ ಕಣ್ತುಂಬಿಕೊಂಡಿದ್ದಿದೆ. ಮನೆ ಅಂದವಾಗಿ ಕಾಣಬೇಕು ಎಂಬ ಕಾರಣಕ್ಕೆ ಸೆಲೆಬ್ರಿಟಿಗಳು ಪ್ರತಿನಿತ್ಯ ರಾತ್ರಿ ಮನೆಯನ್ನು ಲೈಟ್​ನಿಂದ ಅಲಂಕಾರ ಮಾಡುತ್ತಾರೆ. ಹಾಗಾದರೆ, ಸೆಲೆಬ್ರಿಟಿಗಳ ಮನೆಗೆ ಬರುವ ಪವರ್​ಬಿಲ್ ಎಷ್ಟು ಎಂಬ ಮಾಹಿತಿ ಇಲ್ಲಿದೆ.

ಶಾರುಖ್ ಖಾನ್ ಅವರು ಮುಂಬೈನಲ್ಲಿ ‘ಮನ್ನತ್​’ ಹೆಸರಿನ ಮನೆ ಹೊಂದಿದ್ದಾರೆ. ಈ ನಿವಾಸ ತುಂಬಾನೇ ದೊಡ್ಡದಾಗಿದೆ. ಶಾರುಖ್ ಖಾನ್ ಪ್ರತಿ ವಾರ 43-45 ಲಕ್ಷ ರೂಪಾಯಿ ಪವರ್​ ಬಿಲ್ ಪಾವತಿಸುತ್ತಿದ್ದಾರೆ ಎಂದು ವರದಿ ಆಗಿದೆ. ಕಳೆದ ವರ್ಷ ಡಿಸೆಂಬರ್​ನಲ್ಲಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಮದುವೆ ಆದರು. ಇವರು ಮುಂಬೈನಲ್ಲಿ 4 ರೂಂನ ಅಪಾರ್ಟ್​ಮೆಂಟ್​ ಹೊಂದಿದ್ದಾರೆ. ಈ ದಂಪತಿ ಪ್ರತಿ ತಿಂಗಳು 8-10 ಲಕ್ಷ ರೂಪಾಯಿ ಎಲೆಕ್ಟ್ರಿಸಿಟಿ ಬಿಲ್ ತುಂಬುತ್ತಾರೆ ಎನ್ನಲಾಗಿದೆ.

ಸಲ್ಮಾನ್ ಖಾನ್ ಅವರು ಬಾಲಿವುಡ್​ನ ಬೇಡಿಕೆಯ ನಟ. ಅವರು ಮುಂಬೈನಲ್ಲಿ ಹಲವು ಪ್ರಾಪರ್ಟಿ ಹೊಂದಿದ್ದಾರೆ. ಗ್ಯಾಲಕ್ಸಿ ಅಪಾರ್ಟ್​ಮೆಂಟ್​ನಲ್ಲಿ ಸಲ್ಲು ವಾಸವಾಗಿದ್ದಾರೆ. ಅವರು ಪ್ರತಿ ತಿಂಗಳು 23-25 ಲಕ್ಷ ರೂಪಾಯಿ ಪವರ್ ಬಿಲ್​ ಪಾವತಿಸುತ್ತಾರೆ ಎನ್ನಲಾಗಿದೆ.

ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಅವರು ಮದುವೆ ಆಗಿ ಹಲವು ವರ್ಷ ಕಳೆದಿದೆ. ಇಬ್ಬರೂ ಹಾಯಾಗಿ ಸುಖ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ. ಈ ದಂಪತಿ ಮುಂಬೈನಲ್ಲಿ 4 ರೂಂನ ಅಪಾರ್ಟ್​​ಮೆಂಟ್​ನಲ್ಲಿ ವಾಸವಾಗಿದ್ದಾರೆ. ಈ ದಂಪತಿ 13-15 ಲಕ್ಷ ರೂಪಾಯಿ ಎಲೆಕ್ಟ್ರಿಸಿಟಿ ಬಿಲ್​ ಕಟ್ಟುತ್ತಿದ್ದಾರೆ ಎನ್ನಲಾಗಿದೆ.

ಅಮಿತಾಭ್ ಬಚ್ಚನ್ ಅವರು ಹಲವು ವರ್ಷಗಳ ಕಾಲ ಬಾಲಿವುಡ್​ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಜುಹುದಲ್ಲಿ ತಮ್ಮದೇ ಬಂಗಲೆ ಹೊಂದಿದ್ದಾರೆ. ಅವರು ಪ್ರತಿ ತಿಂಗಳು 22-25 ಲಕ್ಷ ರೂಪಾಯಿ ವಿದ್ಯುತ್​ ಬಿಲ್ ಪಾವತಿಸುತ್ತಾರೆ ಎನ್ನಲಾಗಿದೆ.

ಇದನ್ನೂ ಓದಿ: ಫನ್ನಿ ಕಾರಣಕ್ಕೆ ಮತ್ತೆ ಒಂದಾದ ಕರೀನಾ ಕಪೂರ್​​-ಆಮಿರ್​ ಖಾನ್​; ವಿಡಿಯೋ ವೈರಲ್​

ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಬಾಲಿವುಡ್​ನ ಬೇಡಿಕೆಯ ಕಲಾವಿದರು. ಈ ದಂಪತಿ ಪ್ರತಿ ತಿಂಗಳು 30-32 ಲಕ್ಷ ರೂಪಾಯಿ ಪವರ್​ಬಿಲ್ ಪೇ ಮಾಡುತ್ತಾರೆ. ಆಮಿರ್ ಖಾನ್ ಅವರು ಮುಂಬೈನಲ್ಲಿ ಅಪಾರ್ಟ್​ಮೆಂಟ್ ಹೊಂದಿದ್ದಾರೆ. ಅವರು 9-11 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಪಾವತಿಸುತ್ತಾರೆ.

Follow Us
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ