AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೋಳಲ್ಲೊಂದು ಮಗು, ಕೈಯಲ್ಲೊಂದು ಪುಸ್ತಕ, 9ನೇ ತರಗತಿ ಬಾಲಕಿ ಹೆಗಲ ಮೇಲಿರುವ ಜವಾಬ್ದಾರಿ ನೋಡಿ

ತೋಳಲ್ಲೊಂದು ಮಗು, ಕೈಯಲ್ಲೊಂದು ಪುಸ್ತಕ, 9ನೇ ತರಗತಿ ಬಾಲಕಿ ಹೆಗಲ ಮೇಲಿರುವ ಜವಾಬ್ದಾರಿ ನೋಡಿ

ನಯನಾ ರಾಜೀವ್
|

Updated on: May 30, 2026 | 7:48 AM

Share

ಸಣ್ಣ ವಯಸ್ಸಿನಲ್ಲಿಯೇ ಕುಟುಂಬದ ಜವಾಬ್ದಾರಿ ಹೊತ್ತಿರುವ 9ನೇ ತರಗತಿ ಬಾಲಕಿಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತರಗತಿಯಲ್ಲಿ ಮಗುವನ್ನು ತೊಡೆಯ ಮೇಲೆ ಕೂರಿಸಿಕೊಂಡು ಬಾಲಕಿ ಪಾಠ ಕೇಳುತ್ತಿದ್ದಳು. ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಇಡೀ ಕುಟುಂಬದ ಜವಾಬ್ದಾರಿಯನ್ನು ತನ್ನ ಪುಟ್ಟ ಹೆಗಲ ಮೇಲೆ ಹೊತ್ತುಕೊಂಡಿರುವ ಘಟನೆ ನೇಪಾಳದಲ್ಲಿ ನಡೆದಿದೆ.

ಕಠ್ಮಂಡು, ಮೇ 30: ಸಣ್ಣ ವಯಸ್ಸಿನಲ್ಲಿಯೇ ಕುಟುಂಬದ ಜವಾಬ್ದಾರಿ ಹೊತ್ತಿರುವ 9ನೇ ತರಗತಿ ಬಾಲಕಿಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತರಗತಿಯಲ್ಲಿ ಮಗುವನ್ನು ತೊಡೆಯ ಮೇಲೆ ಕೂರಿಸಿಕೊಂಡು ಬಾಲಕಿ ಪಾಠ ಕೇಳುತ್ತಿದ್ದಳು. ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಇಡೀ ಕುಟುಂಬದ ಜವಾಬ್ದಾರಿಯನ್ನು ತನ್ನ ಪುಟ್ಟ ಹೆಗಲ ಮೇಲೆ ಹೊತ್ತುಕೊಂಡಿರುವ ಘಟನೆ ನೇಪಾಳದಲ್ಲಿ ನಡೆದಿದೆ.

ಮನೆಯಲ್ಲಿ ತನ್ನ ಮೂವರು ಕಿರಿಯ ಒಡಹುಟ್ಟಿದವರನ್ನು ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿ ಈಕೆಯ ಮೇಲಿದೆ. ತಾಯಿ ಕೂಲಿ ಕೆಲಸಕ್ಕೆ ಹೋಗದಿದ್ದರೆ ಸಂಸಾರ ಸಾಗುವುದಿಲ್ಲ. ಹೀಗಾಗಿ, ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ, ಈ ಬಾಲಕಿ ತನ್ನ ಅತಿ ಕಿರಿಯ ಮಗುವನ್ನು ಎತ್ತಿಕೊಂಡು ಶಾಲೆಗೆ ಬರಲು ಆರಂಭಿಸಿದ್ದಾಳೆ. ಒಂದು ಕೈಯಲ್ಲಿ ಮಗುವನ್ನು ಸಮಾಧಾನಪಡಿಸುತ್ತಾ, ಮತ್ತೊಂದು ಕೈಯಲ್ಲಿ ಪುಸ್ತಕ ಹಿಡಿದು ಪಾಠ ಕೇಳುವ ಈಕೆಯ ಸ್ಥಿತಿ ಎಲ್ಲರ ಕಣ್ಣನ್ನು ತೇವಗೊಳಿಸುವಂತಿದೆ.

ಇತ್ತೀಚೆಗೆ ಶಾಲೆಯಲ್ಲಿ ಅತಿಯಾದ ಆಯಾಸ ಮತ್ತು ಜವಾಬ್ದಾರಿಗಳ ಭಾರವನ್ನು ತಾಳಲಾರದೆ ಆಕೆ ತರಗತಿಯಲ್ಲೇ ಕಣ್ಣೀರು ಹಾಕಿದ್ದಾಳೆ. ಕೇವಲ ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯೊಬ್ಬಳು ಶಿಕ್ಷಣದ ಆಸೆಯೊಂದಿಗೆ, ಕೌಟುಂಬಿಕ ಪರಿಸ್ಥಿತಿಯ ಅಡಿಯಲ್ಲಿ ನಲುಗುತ್ತಿರುವ ಈ ಚಿತ್ರ ಇಡೀ ಸಾಮಾಜಿಕ ಜಾಲತಾಣಗಳಲ್ಲಿ ಜನರ ಹೃದಯವನ್ನು ಕಲಕಿದೆ. ಬಾಲಕಿಯ ಈ ಪರಿಸ್ಥಿತಿಯನ್ನು ಕಂಡು ನೆಟ್ಟಿಗರು ಆಕೆಗೆ ಸಹಾಯ ಹಸ್ತ ಚಾಚುವಂತೆ ಸ್ಥಳೀಯ ಸಂಸ್ಥೆಗಳಿಗೆ ಮನವಿ ಮಾಡುತ್ತಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us