AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ ಹೀರೋ ಜೊತೆ ರೊಮ್ಯಾನ್ಸ್ ಮಾಡಲು ಎಲ್ಲರೂ ಕ್ಯೂನಲ್ಲಿ ನಿಲ್ಲುತ್ತಿದ್ದರು; ಖುಷ್ಬೂ

ಖ್ಯಾತ ನಟಿ ಖುಷ್ಬೂ ತಮ್ಮ ಎರಡನೇ ಇನ್ನಿಂಗ್ಸ್ ಮತ್ತು ಸುದೀರ್ಘ ಸಿನಿಮಾ ಪಯಣದ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿನ ಸಂದರ್ಶನದಲ್ಲಿ, ಅವರು ವೆಂಕಟೇಶ್, ಚಿರಂಜೀವಿ, ರಜನಿಕಾಂತ್, ನಾಗಾರ್ಜುನ, ಕಮಲ್ ಹಾಸನ್ ಮತ್ತು ರಾಜೇಂದ್ರ ಪ್ರಸಾದ್ ಅವರಂತಹ ಸ್ಟಾರ್ ನಟರೊಂದಿಗಿನ ತಮ್ಮ ವಿಶೇಷ ಬಾಂಧವ್ಯ, ಅವರ ಶಿಸ್ತು ಹಾಗೂ ವೃತ್ತಿಪರತೆಯ ಕುರಿತು ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಆ ಹೀರೋ ಜೊತೆ ರೊಮ್ಯಾನ್ಸ್ ಮಾಡಲು ಎಲ್ಲರೂ ಕ್ಯೂನಲ್ಲಿ ನಿಲ್ಲುತ್ತಿದ್ದರು; ಖುಷ್ಬೂ
ಖುಷ್ಬೂ
 ಶ್ರೀಲಕ್ಷ್ಮೀ ಎಚ್
| Edited By: |

Updated on: May 30, 2026 | 8:03 AM

Share

ದಕ್ಷಿಣ ಭಾರತದ ಖ್ಯಾತ ನಟಿ ಖುಷ್ಬೂ ಎರಡನೇ ಇನ್ನಿಂಗ್ಸ್‌ನಲ್ಲಿ ಪೋಷಕ ನಟಿಯಾಗಿ ಬ್ಯುಸಿಯಾಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ಚಲನಚಿತ್ರೋದ್ಯಮದಲ್ಲಿನ ತಮ್ಮ ಸುದೀರ್ಘ ಪ್ರಯಾಣ ಹಾಗೂ ಅಂದಿನ ಟಾಪ್ ಹೀರೊಗಳೊಂದಿಗಿನ ಅಪರೂಪದ ಬಾಂಧವ್ಯದ ಕುರಿತು ಹಲವು ಆಸಕ್ತಿದಾಯಕ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ತಮ್ಮ ಚಲನಚಿತ್ರ ಪ್ರಯಾಣ ಆರಂಭವಾಗಿದ್ದೇ ‘ಕಲಿಯುಗ ಪಾಂಡವುಲು’ ಚಿತ್ರದ ಮೂಲಕ ಎಂದು ನೆನಪಿಸಿಕೊಂಡ ಖುಷ್ಬೂ, ವಿಕ್ಟರಿ ವೆಂಕಟೇಶ್ ತಮ್ಮ ಮೊದಲ ನಾಯಕ ಮತ್ತು ಮೊದಲ ಸ್ನೇಹಿತ ಎಂದು ಹೇಳಿದ್ದಾರೆ. ವೆಂಕಟೇಶ್ ಅವರನ್ನು ತಮ್ಮ ಭಾವನಾತ್ಮಕ ವ್ಯಕ್ತಿ ಎಂದು ಕರೆದಿರುವ ಅವರು, ನಾವು ಪ್ರತಿದಿನ ಮಾತನಾಡದಿದ್ದರೂ, ಯಾವುದೇ ಸಮಸ್ಯೆ ಎದುರಾದಾಗ ಪರಸ್ಪರ ಬೆಂಬಲವಾಗಿ ನಿಲ್ಲುತ್ತೇವೆ ಎಂದಿದ್ದಾರೆ.

ನಟ ನಾಗಾರ್ಜುನ ಅವರ ಫಿಟ್‌ನೆಸ್ ಮತ್ತು ಸ್ಟೈಲ್ ಅನ್ನು ಖುಷ್ಬೂ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. 1986ರ ‘ಕ್ಯಾಪ್ಟನ್ ನಾಗಾರ್ಜುನ’ ಚಿತ್ರದ ಸಮಯದಲ್ಲಿ ಕಾರ್ಗೋ ಪ್ಯಾಂಟ್‌ನಲ್ಲಿ ಅವರು ಕಾಣಿಸುತ್ತಿದ್ದ ರೀತಿಗೆ ಪ್ರತಿಯೊಬ್ಬ ಮಹಿಳೆಯೂ ಫಿದಾ ಆಗುತ್ತಿದ್ದರು. ನಾಗಾರ್ಜುನ ಇಂದಿಗೂ ಅಷ್ಟೇ ಫಿಟ್ ಮತ್ತು ಹ್ಯಾಂಡ್ಸಮ್ ಆಗಿ ಉಳಿದಿದ್ದಾರೆ ಎಂದು ಅವರು ಬಣ್ಣಿಸಿದ್ದಾರೆ. ಆಗಿನ ಕಾಲದಲ್ಲಿ ಎಲ್ಲಾ ನಾಯಕಿಯರು ಇವರ ಜೊತೆ ರೊಮ್ಯಾನ್ಸ್ ಮಾಡಬೇಕು ಎಂದುಕೊಳ್ಳುತ್ತಿದ್ದರಂತೆ.

ಮೆಗಾಸ್ಟಾರ್ ಸರಳತೆಗೆ ಸಾಟಿ ಇಲ್ಲ:

ಮೆಗಾಸ್ಟಾರ್ ಚಿರಂಜೀವಿ ಅವರನ್ನು ದಂತಕಥೆ ಎಂದು ಕರೆದಿರುವ ಖುಷ್ಬೂ, ಅವರ ವಿನಮ್ರತೆ ಮತ್ತು ಕೆಲಸದ ಮೇಲಿನ ಸಮರ್ಪಣೆ ಅದ್ಭುತ ಎಂದು ಹೇಳಿದ್ದಾರೆ. ಇಂದಿಗೂ ಪ್ರತಿದಿನ ಸೆಟ್‌ನಲ್ಲಿ ಹೊಸದನ್ನು ಕಲಿಯಲು ಚಿರಂಜೀವಿ ಶ್ರಮಿಸುತ್ತಾರೆ, ಅದಕ್ಕಾಗಿಯೇ ಅವರು ಸದಾ ಮೆಗಾಸ್ಟಾರ್ ಆಗಿ ಮಿಂಚುತ್ತಿದ್ದಾರೆ ಎಂದು ಹೇಳಿದ್ದಾರೆ.

ರಾಜೇಂದ್ರ ಪ್ರಸಾದ್ ‘ಶಾಶ್ವತ ಸೋದರ ಮಾವ’:

ಹಿರಿಯ ನಟ ರಾಜೇಂದ್ರ ಪ್ರಸಾದ್ ಅವರನ್ನು ತಾವೆಂದೂ ಪ್ರೀತಿಯಿಂದ “ಅಳಿಯ” ಎಂದೇ ಕರೆಯುವುದಾಗಿ ಖುಷ್ಬೂ ತಿಳಿಸಿದ್ದಾರೆ. ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಒಟ್ಟಿಗೆ ಓದಿದ ದಿನಗಳಿಂದ ಆರಂಭವಾದ ಇವರ ಸ್ನೇಹ, ಇಂದಿಗೂ ಒಂದು ವಿಶೇಷ ಬಾಂಧವ್ಯವಾಗಿ ಮುಂದುವರಿದಿದೆ ಎಂದಿದ್ದಾರೆ.

ಇದನ್ನೂ ಓದಿ: ಚುನಾವಣೆ ಗೆದ್ದರೆ ಮಾಂಸ ಮಾರಾಟ ಬ್ಯಾನ್ ಮಾಡ್ತಾರಾ ಖುಷ್ಬೂ ಪತಿ ಸುಂದರ್? ಸಿಕ್ತು ಸ್ಪಷ್ಟನೆ

ಕಮಲ್-ರಜನಿ ಶಿಸ್ತಿಗೆ ಸಲಾಂ:

ಕಮಲ್ ಹಾಸನ್ ಅವರನ್ನು ತಮ್ಮ ಆತ್ಮೀಯ ಗೆಳೆಯ ಎಂದು ಕರೆದಿರುವ ಖುಷ್ಬೂ, ಅವರ ಮೇಲಿರುವ ಗೌರವವನ್ನು ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಸೂಪರ್‌ಸ್ಟಾರ್ ರಜನಿಕಾಂತ್ ಅವರ ಸಮಯಪ್ರಜ್ಞೆಯನ್ನು ಕೊಂಡಾಡಿದ ಅವರು, ‘ಬೆಳಿಗ್ಗೆ 7 ಗಂಟೆಗೆ ಕಾಲ್ ಶೀಟ್ ಇದ್ದರೆ, ರಜನಿಕಾಂತ್ 6:50 ರ ಹೊತ್ತಿಗೆ ಮೇಕಪ್ ಮುಗಿಸಿ ಸೆಟ್‌ನಲ್ಲಿರುತ್ತಾರೆ. ನಿರ್ದೇಶಕರು ಬ್ರೇಕ್ ಕೊಟ್ಟರೂ ಸೆಟ್ ಬಿಟ್ಟು ಕದಲದೆ ಚಿತ್ರೀಕರಣದ ಸೂಕ್ಷ್ಮತೆಗಳನ್ನು ಗಮನಿಸುತ್ತಾರೆ’ ಎಂದು ಅವರ ಶಿಸ್ತಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Shreelaxmi H
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More