‘ಹನುಮಾನ್’ ಚಿತ್ರದ ಟೀಸರ್ನಲ್ಲಿ ಬರುವ ಗ್ರಾಫಿಕ್ಸ್ ನೋಡಿ ಪ್ರಭಾಸ್ಗೆ ಚುಚ್ಚಿದ ಸಿನಿಪ್ರಿಯರು
‘ಹನುಮಾನ್’ ಟೀಸರ್ನಲ್ಲಿಯೂ ಹನುಮಂತನ ಉಲ್ಲೇಖ ಇದೆ. ಫ್ಯಾಂಟಸಿ ಕಥೆಯಲ್ಲಿ ಕಥಾ ನಾಯಕನ ಪಾತ್ರ ಹನುಮಂತನ ಸ್ಫೂರ್ತಿಯಾಗಿಟ್ಟುಕೊಂಡು ಮಾಡಲಾಗಿದೆ ಎಂಬುದಕ್ಕೆ ಟೀಸರ್ ಸಾಕ್ಷ್ಯ ನೀಡಿದೆ.
ಪ್ರಭಾಸ್ಗೆ (Prabhas) ಇತ್ತೀಚೆಗೆ ಸಂಕಷ್ಟ ಎದುರಾಗಿದೆ. ಮಾಡಿದ ಯಾವ ಸಿನಿಮಾಗಳೂ ಯಶಸ್ಸು ಕಾಣುತ್ತಿಲ್ಲ. ‘ಬಾಹುಬಲಿ 2’ (Bahubali 2) ಬಳಿಕ ರಿಲೀಸ್ ಆದ ‘ಸಾಹೋ’ ಹಾಗೂ ‘ರಾಧೆ ಶ್ಯಾಮ್’ (Radhe Shyam Movie) ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಸೋಲು ಕಂಡವು. ಈಗ ‘ಆದಿಪುರುಷ್’ ಚಿತ್ರದಿಂದ ಅವರು ಟ್ರೋಲ್ ಆಗಿದ್ದಾರೆ. ಈ ಚಿತ್ರದ ಗ್ರಾಫಿಕ್ಸ್ ವಿಚಾರ ಸಾಕಷ್ಟು ಟೀಕೆಗೆ ಒಳಗಾಗಿದೆ. ಈ ಮಧ್ಯೆ ಪ್ರಭಾಸ್ ಚಿತ್ರದ ಮೇಲೆ ಮತ್ತೆ ಟೀಕೆಗಳು ಬಂದಿವೆ. ಇದಕ್ಕೆ ಕಾರಣವಾಗಿದ್ದು ‘ಹನುಮಾನ್’ ಚಿತ್ರದ ಟೀಸರ್.
ಕೆಲವೊಮ್ಮೆ ನೂರಾರು ಕೋಟಿ ಖರ್ಚು ಮಾಡಿ ಸಿನಿಮಾ ಮಾಡಿದರೂ ಅದನ್ನು ಪ್ರೇಕ್ಷಕರು ಕೈ ಹಿಡಿಯುವುದಿಲ್ಲ. ಆದರೆ, ಚಿಕ್ಕ ಬಜೆಟ್ನಲ್ಲಿ ಒಳ್ಳೆಯ ಗ್ರಾಫಿಕ್ಸ್ ಮಾಡಿದ ಚಿತ್ರಗಳನ್ನು ಪ್ರೇಕ್ಷಕರು ಹೆಚ್ಚಾಗಿ ಇಷ್ಟಪಡುತ್ತಾರೆ. ಈಗ ಆಗಿದ್ದೂ ಇದೆ. ಪ್ರಶಾಂತ್ ವರ್ಮಾ ನಿರ್ದೇಶನದ ‘ಹನುಮಾನ್’ ಚಿತ್ರದ ಟೀಸರ್ ಅನ್ನು ಪ್ರೇಕ್ಷಕರು ಹೆಚ್ಚಾಗಿ ಇಷ್ಟಪಟ್ಟಿದ್ದಾರೆ. ಸಿನಿಮಾದ ಟೀಸರ್ ನೋಡಿದ ಅನೇಕರು ಮೆಚ್ಚಿಕೊಂಡಿದ್ದಾರೆ.
ರಾಮಾಯಣದಲ್ಲಿ ಬರುವ ಅತಿ ಬಲಶಾಲಿ ದೇವರುಗಳಲ್ಲಿ ಹನುಮಂತ ಕೂಡ ಇದ್ದಾನೆ. ಆತನ ಪರಾಕ್ರಮಗಳ ಬಗ್ಗೆ ರಾಮಾಯಣದಲ್ಲಿ ಉಲ್ಲೇಖವಾಗಿದೆ. ಈ ಪಾತ್ರದ ಬಗ್ಗೆ ಹಲವರು ಹಲವು ರೀತಿಯಲ್ಲಿ ಹೇಳಿದ್ದಾರೆ. ‘ಹನುಮಾನ್’ ಟೀಸರ್ನಲ್ಲಿಯೂ ಹನುಮಂತನ ಉಲ್ಲೇಖ ಇದೆ. ಫ್ಯಾಂಟಸಿ ಕಥೆಯಲ್ಲಿ ಕಥಾ ನಾಯಕನ ಪಾತ್ರ ಹನುಮಂತನ ಸ್ಫೂರ್ತಿಯಾಗಿಟ್ಟುಕೊಂಡು ಮಾಡಲಾಗಿದೆ ಎಂಬುದಕ್ಕೆ ಟೀಸರ್ ಸಾಕ್ಷ್ಯ ನೀಡಿದೆ.
1 ನಿಮಿಷ 41 ಸೆಕೆಂಡ್ನ ಟೀಸರ್ನಲ್ಲಿ ಹಲವು ವಿಚಾರಗಳನ್ನು ತೋರಿಸಲಾಗಿದೆ. ಈಗಿನ ಕಾಲಘಟ್ಟ ಹಾಗೂ ಹಳೆಯ ಕಾಲಘಟ್ಟದಲ್ಲಿ ಕಥೆ ಸಾಗುವ ಸೂಚನೆ ಸಿಕ್ಕಿದೆ. ಹನುಮಂತ ಈಗಲೂ ರಾಮಜಪ ಮಾಡುತ್ತಾ ಕೂತಿದ್ದಾನೆ ಎಂಬ ಮಾತಿದೆ. ಅದೇ ವಿಚಾರವನ್ನು ಟೀಸರ್ನಲ್ಲೂ ತೋರಿಸಲಾಗಿದೆ.
ಇದನ್ನೂ ಓದಿ: ‘ಯಶ್ ಮಾತ್ರವಲ್ಲ, ಬಿಟ್ರೆ ಪ್ರಭಾಸ್ ಹೆಸರನ್ನು ಎಳೆದು ತರ್ತಾರೆ’; ‘ಬ್ರಹ್ಮಾಸ್ತ್ರ’ ಡೈರೆಕ್ಟರ್ ಹೀಗೆ ಹೇಳಿದ್ದೇಕೆ?
‘ಹನುಮಾನ್’ ಸಿನಿಮಾ ಕಡಿಮೆ ಬಜೆಟ್ನಲ್ಲಿ ಸಿದ್ಧಗೊಳ್ಳುತ್ತಿರುವ ಸಿನಿಮಾ. ಆದಾಗ್ಯೂ ಗ್ರಾಫಿಕ್ಸ್ಗಳು ಉತ್ತಮವಾಗಿಯೇ ಮೂಡಿ ಬಂದಿವೆ. ಇದು ಎಲ್ಲರ ಗಮನ ಸೆಳೆದಿದೆ. ಇದರಿಂದ ಸಹಜವಾಗಿಯೇ ಎಲ್ಲರೂ ಪ್ರಭಾಸ್ ನಟನೆಯ ‘ಆದಿಪುರುಷ್’ ಚಿತ್ರದ ಸಿನಿಮಾಗೆ ಇದನ್ನು ಹೋಲಿಕೆ ಮಾಡುತ್ತಿದ್ದಾರೆ. ‘ಹನುಮಾನ್’ ಚಿತ್ರದಲ್ಲಿ ತೇಜಾ ಸಜ್ಜ, ಅಮೃತಾ ಐಯ್ಯರ್ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾ ಶೀಘ್ರವೇ ತೆರೆಗೆ ಬರುವ ನಿರೀಕ್ಷೆ ಇದೆ.