ಟ್ರೋಲ್​ಗಳ ಮಧ್ಯೆ ನಿರ್ದೇಶಕ ಓಂ ರಾವತ್ ಪರ ನಿಂತ ‘ಆದಿಪುರುಷ್’ ನಟಿ ಕೃತಿ ಸನೋನ್

ನವರಾತ್ರಿ ಸಂದರ್ಭದಲ್ಲಿ ‘ಆದಿಪುರುಷ್’ ಚಿತ್ರದ ಟೀಸರ್ ರಿಲೀಸ್ ಆಯಿತು. ಈ ಟೀಸರ್​ ಅನ್ನು ಜನರು ಮೆಚ್ಚಿಕೊಳ್ಳುತ್ತಾರೆ ಎಂಬುದು ಚಿತ್ರತಂಡದ ಆಲೋಚನೆ ಆಗಿತ್ತು. ಆದರೆ, ಹಾಗಾಗಿಲ್ಲ.

ಟ್ರೋಲ್​ಗಳ ಮಧ್ಯೆ ನಿರ್ದೇಶಕ ಓಂ ರಾವತ್ ಪರ ನಿಂತ ‘ಆದಿಪುರುಷ್’ ನಟಿ ಕೃತಿ ಸನೋನ್
ಕೃತಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Nov 19, 2022 | 6:14 PM

ಪ್ರಭಾಸ್ (Prabhas) ಹಾಗೂ ಕೃತಿ ಸನೋನ್ ನಟನೆಯ ‘ಆದಿಪುರುಷ್’ (Adipurush Movie) ಸಿನಿಮಾದ ಟೀಸರ್ ಇತ್ತೀಚೆಗೆ ತೆರೆಗೆ ಬಂತು. ಓಂ ರಾವತ್ ನಿರ್ದೇಶನದ ಈ ಚಿತ್ರದ ಟೀಸರ್ ಸಾಕಷ್ಟು ಟ್ರೋಲ್ ಆಯಿತು. ಈ ಚಿತ್ರದ ಬಗ್ಗೆ ಅನೇಕರು ಟೀಕೆ ಮಾಡಿದ್ದಾರೆ. ಕಳಪೆ ಗ್ರಾಫಿಕ್ಸ್ ಎಂದು ಕೆಲವರು ದೂರಿದರೆ, ಇನ್ನೂ ಕೆಲವರು ರಾವಣನ ಪಾತ್ರದ ಬಗ್ಗೆ ಅಪಸ್ವರ ತೆಗೆದಿದ್ದರು. ಉತ್ತಮ ಗ್ರಾಫಿಕ್ಸ್ ಬಳಕೆ ಮಾಡುವ ಉದ್ದೇಶದಿಂದ ಸಿನಿಮಾ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿದೆ ಎಂಬ ಮಾತಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ನಟಿ ಕೃತಿ ಸನೋನ್ ಅವರು ಮೌನ ಮುರಿದಿದ್ದಾರೆ. ಅವರು ನಿರ್ದೇಶಕ ಓಂ ರಾವತ್ ಪರ ಬ್ಯಾಟ್ ಬೀಸಿದ್ದಾರೆ.

ನವರಾತ್ರಿ ಸಂದರ್ಭದಲ್ಲಿ ‘ಆದಿಪುರುಷ್’ ಚಿತ್ರದ ಟೀಸರ್ ರಿಲೀಸ್ ಆಯಿತು. ಈ ಟೀಸರ್​ ಅನ್ನು ಜನರು ಮೆಚ್ಚಿಕೊಳ್ಳುತ್ತಾರೆ ಎಂಬುದು ಚಿತ್ರತಂಡದ ಆಲೋಚನೆ ಆಗಿತ್ತು. ಆದರೆ, ಹಾಗಾಗಿಲ್ಲ. ಜನರು ಟೀಸರ್​ ಬಗ್ಗೆ ಕೊಂಕು ತೆಗೆದರು. ರಾವಣನ ಪಾತ್ರ ಅಲ್ಲಾವುದ್ದೀನ್ ಖಿಲ್ಜಿ ರೀತಿ ಕಾಣುತ್ತದೆ ಎಂದು ಕೆಲವರು ಹೇಳಿದರು. ರಾಮ ಸೇತುವೆ ಕಟ್ಟುವ ಸಂದರ್ಭದಲ್ಲಿ ವಾನರ ಸೇನೆ ಜತೆಗೆ ಬೇರೆ ಬೇರೆ ಪ್ರಾಣಿಗಳು ಕಾಣಿಸಿಕೊಂಡಿದ್ದವು. ಇದಕ್ಕೂ ಜನರು ಟೀಕೆ ಮಾಡಿದರು.

‘ಆದಿಪುರುಷ್​’ ಸಿನಿಮಾದಲ್ಲಿ ನಟಿಸಿದ ಬಗ್ಗೆ ನಟಿ ಕೃತಿಗೆ ಹೆಮ್ಮೆ ಇದೆ. ಅವರು ಚಿತ್ರದ ಪರವಾಗಿ ಮಾತನಾಡಿದ್ದಾರೆ. ಸಿನಿಮಾ ಬಗ್ಗೆ ಸಾಕಷ್ಟು ನೀರೀಕ್ಷೆ ಇಟ್ಟುಕೊಂಡಿದ್ದಾರೆ ಅವರು. ‘ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸಿದ್ಧವಾಗಿದೆ. ಇದು ನಮ್ಮ ಇತಿಹಾಸದ ಒಂದು ಭಾಗವಾಗಿದೆ. ಹೀಗಾಗಿ ಎಲ್ಲ ದೃಷ್ಟಿಯಲ್ಲೂ ತುಂಬಾನೇ ಮುಖ್ಯ. ಹೀಗಾಗಿ ಸರಿಯಾದ ರೀತಿಯಲ್ಲಿ ಸಿನಿಮಾ ತೆರೆಮೇಲೆ ತರುವ ಅವಶ್ಯಕತೆ ಇದೆ. ನಮ್ಮ ಕೈಲಾದಷ್ಟು ಒಳ್ಳೆಯ ರೀತಿಯಲ್ಲಿ ಸಿನಿಮಾ ತೆರೆಗೆ ತರುವ ಆಲೋಚನೆ ನಮ್ಮದು’ ಎಂದಿದ್ದಾರೆ ಕೃತಿ ಸನೋನ್.

ಇದನ್ನೂ ಓದಿ:Prabhas: ರಾವಣನ ಪ್ರತಿಕೃತಿ ಸುಡಲು ಮುಂದಾದ ಪ್ರಭಾಸ್​; ಯಾಕೀ ನಿರ್ಧಾರ?

‘ಆದಿಪುರುಷ್’ ಚಿತ್ರಕ್ಕೆ 500 ಕೋಟಿ ರೂಪಾಯಿ ಖರ್ಚಾಗಿದೆ ಎನ್ನಲಾಗಿದೆ. ಈಗ ಸಿನಿಮಾ ಬಗ್ಗೆ ನೆಗೆಟಿವ್ ಟಾಕ್ ಶುರುವಾಗಿರುವುದು ಚಿತ್ರತಂಡಕ್ಕೆ ತಲೆಬಿಸಿ ತಂದಿದೆ. ಈ ಕಾರಣಕ್ಕೆ ವಿಎಫ್​​ಎಕ್ಸ್ ವಿಚಾರದಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳುವ ಆಲೋಚನೆಯಲ್ಲಿ ಚಿತ್ರತಂಡ ಇದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ 2023ರ ಜನವರಿ ತಿಂಗಳಲ್ಲಿ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಚಿತ್ರದ ರಿಲೀಸ್ ದಿನಾಂಕವನ್ನು ಜೂನ್​​ಗೆ ಮುಂದೂಡಲಾಗಿದೆ. ಇದು ಪ್ರಭಾಸ್ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್