ಬಾಕ್ಸ್ ಆಫೀಸ್​ನಲ್ಲಿ ಬಂಗಾರದ ಬೆಳೆ ತೆಗೆದ ‘ದೃಶ್ಯಂ 2’; ಅಕ್ಷಯ್ ಕುಮಾರ್ ದಾಖಲೆ ಉಡೀಸ್

ಮೊದಲ ದಿನ ‘ದೃಶ್ಯಂ 2’ ಚಿತ್ರ 15.38 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಅಕ್ಷಯ್ ಕುಮಾರ್ ನಟನೆಯ ‘ರಾಮ್ ಸೇತು’ ಚಿತ್ರದ ಮೊದಲ ದಿನದ ಗಳಿಕೆಯನ್ನು ಈ ಸಿನಿಮಾ ಹಿಂದಿಕ್ಕಿದೆ.

ಬಾಕ್ಸ್ ಆಫೀಸ್​ನಲ್ಲಿ ಬಂಗಾರದ ಬೆಳೆ ತೆಗೆದ ‘ದೃಶ್ಯಂ 2’; ಅಕ್ಷಯ್ ಕುಮಾರ್ ದಾಖಲೆ ಉಡೀಸ್
ಅಜಯ್ ದೇವಗನ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Nov 19, 2022 | 3:22 PM

ಬಾಲಿವುಡ್​ಗೆ ರಿಮೇಕ್ ಹೊಸದಲ್ಲ. ದಕ್ಷಿಣದಲ್ಲಿ ಹಿಟ್ ಆದ ಅನೇಕ ಚಿತ್ರಗಳನ್ನು ಬಾಲಿವುಡ್​ಗೆ (Bollywood) ರಿಮೇಕ್ ಮಾಡಲಾಗಿದೆ. ಈ ಪೈಕಿ ಕೆಲವೇ ಕೆಲವು ಚಿತ್ರಗಳು ಗೆಲುವು ಕಂಡಿವೆ. ನವೆಂಬರ್ 18ರಂದು ರಿಲೀಸ್ ಆದ ‘ದೃಶ್ಯಂ 2’ ಸಿನಿಮಾ ಗೆಲ್ಲುವ ಸೂಚನೆ ಕೊಟ್ಟಿದೆ. ಅಜಯ್ ದೇವಗನ್ (Ajay Devgn) ನಟನೆಯ ಈ ಚಿತ್ರ ಒಳ್ಳೆಯ ಪ್ರತಿಕ್ರಿಯೆ ಪಡೆದಿದ್ದು, ಮೊದಲ ದಿನವೇ ಬಂಗಾರದ ಬೆಳೆ ತೆಗೆದಿದೆ. ಈ ಚಿತ್ರದಿಂದ ಬಾಲಿವುಡ್​ಗೆ ಹೊಸ ಚೇತರಿಕೆ ಬರುವ ಸಾಧ್ಯತೆ ದಟ್ಟವಾಗಿದೆ.

ಮಲಯಾಳಂನಲ್ಲಿ ‘ದೃಶ್ಯಂ’ ಚಿತ್ರ ಹಿಟ್ ಆಯಿತು. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಈ ಸಿನಿಮಾ ಮೂಡಿ ಬಂದಿತ್ತು. ಇದನ್ನು ಹಿಂದಿಗೂ ರಿಮೇಕ್ ಮಾಡಲಾಗಿತ್ತು. ಆ ಚಿತ್ರ ಗೆದ್ದಿತ್ತು. ನಂತರ ಮಲಯಾಳಂನಲ್ಲಿ ‘ದೃಶ್ಯಂ 2’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡಲಾಗಿದೆ. ಅಜಯ್ ದೇವಗನ್, ಇಶಿತಾ ದತ್​, ಅಕ್ಷಯ್ ಖನ್ನಾ ಮೊದಲಾದವರು ಚಿತ್ರದಲ್ಲಿ ನಟಿಸಿದ್ದಾರೆ. ನವೆಂಬರ್ 18ರಂದು ಸಿನಿಮಾ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು.

ಇದನ್ನೂ ಓದಿ
Image
Mili Twitter Review: ಜಾನ್ವಿ ಕಪೂರ್​ ಅಭಿನಯಕ್ಕೆ ಕೇಳಿಬರ್ತಿದೆ ಮೆಚ್ಚುಗೆ; ‘ಮಿಲಿ’ ನೋಡಿ ವಿಮರ್ಶೆ ತಿಳಿಸಿದ ಸಿನಿಪ್ರಿಯರು
Image
Gandhada Gudi Twitter Review: ಹೇಗಿದೆ ‘ಗಂಧದ ಗುಡಿ’?; ಪ್ರೀಮಿಯರ್​ ಶೋ ಬಳಿಕ ಟ್ವಿಟರ್​ ಮೂಲಕ ವಿಮರ್ಶೆ ತಿಳಿಸಿದ ಫ್ಯಾನ್ಸ್​
Image
Ram Setu Twitter Review: ‘ರಾಮ್​ ಸೇತು’ ಟ್ವಿಟರ್​ ವಿಮರ್ಶೆ: ಅಕ್ಷಯ್​ ಕುಮಾರ್​ ಚಿತ್ರಕ್ಕೆ ಜನರಿಂದ ಸಿಕ್ತಾ ಪ್ರಶಂಸೆ?
Image
Goodbye Twitter Review: ರಶ್ಮಿಕಾ ಮೊದಲ ಹಿಂದಿ ಚಿತ್ರ ‘ಗುಡ್​ಬೈ’ ಹೇಗಿದೆ? ಜನರು ತಿಳಿಸಿದ ಟ್ವಿಟರ್ ವಿಮರ್ಶೆ ಇಲ್ಲಿದೆ ಓದಿ..

ಮೊದಲ ದಿನ ‘ದೃಶ್ಯಂ 2’ ಚಿತ್ರ 15.38 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಅಕ್ಷಯ್ ಕುಮಾರ್ ನಟನೆಯ ‘ರಾಮ್ ಸೇತು’ ಚಿತ್ರದ ಮೊದಲ ದಿನದ ಗಳಿಕೆಯನ್ನು ಈ ಸಿನಿಮಾ ಹಿಂದಿಕ್ಕಿದೆ. ಇಂದು (ನವೆಂಬರ್ 19) ಹಾಗೂ ನಾಳೆ (ನವೆಂಬರ್ 20) ಚಿತ್ರ ಒಳ್ಳೆಯ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ. ಈ ಚಿತ್ರದಿಂದ ಬಾಲಿವುಡ್​ಗೆ ಹೊಸ ಚೈತನ್ಯ ಸಿಗುವ ಸೂಚನೆ ಸಿಕ್ಕಿದೆ.

ಒಂದು ಕೊಲೆ ನಡೆಯುತ್ತದೆ. ಕಥಾ ನಾಯಕ ಆ ಕೊಲೆಯನ್ನು ಮುಚ್ಚಿ ಹಾಕುತ್ತಾನೆ. ಎರಡನೇ ಪಾರ್ಟ್​​ನಲ್ಲಿ ಈ ಕೊಲೆ ಪ್ರಕರಣ ರೀ-ಓಪನ್ ಆಗುತ್ತದೆ. ಅದರಿಂದ ಹೀರೋ ಹೇಗೆ ತಪ್ಪಿಸಿಕೊಳ್ಳುತ್ತಾನೆ ಅನ್ನೋದು ದ್ವಿತೀಯಾರ್ಧದ ಹೈಲೈಟ್. ಚಿತ್ರವನ್ನು ನೋಡಿದ ಎಲ್ಲರೂ ಮೆಚ್ಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Drishyam 2 Twitter Review: ‘ದೃಶ್ಯಂ 2’ ಟ್ವಿಟರ್​ ವಿಮರ್ಶೆ; ಅಜಯ್​ ದೇವಗನ್​ ಚಿತ್ರಕ್ಕೆ ಪ್ರೇಕ್ಷಕರ ರಿಯಾಕ್ಷನ್​ ಇಲ್ಲಿದೆ..

ಇತ್ತೀಚೆಗೆ ​ ಸಾಲು ಸಾಲು ಬಾಲಿವುಡ್ ಸಿನಿಮಾಗಳು ಸೋಲು ಕಾಣುತ್ತಿವೆ. ಬೆರಳೆಣಿಕೆ ಚಿತ್ರಗಳು ಗೆದ್ದಿವೆ. ‘ಬ್ರಹ್ಮಾಸ್ತ್ರ’ ಸೇರಿ ಕೆಲವೇ ಕೆಲವು ಚಿತ್ರಗಳು ನೂರು ಕೋಟಿ ರೂಪಾಯಿ ಕ್ಲಬ್ ಸೇರಿವೆ. ಈಗ ‘ದೃಶ್ಯಂ 2’ ಚಿತ್ರಕ್ಕೆ ಸಿಗುತ್ತಿರುವ ರೆಸ್ಪಾನ್ಸ್ ನೋಡಿದರೆ ಸಿನಿಮಾ ಒಳ್ಳೆಯ ಗಳಿಕೆ ಮಾಡುವ ಸೂಚನೆ ಸಿಕ್ಕಿದೆ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ