Gandhada Gudi Twitter Review: ಹೇಗಿದೆ ‘ಗಂಧದ ಗುಡಿ’?; ಪ್ರೀಮಿಯರ್​ ಶೋ ಬಳಿಕ ಟ್ವಿಟರ್​ ಮೂಲಕ ವಿಮರ್ಶೆ ತಿಳಿಸಿದ ಫ್ಯಾನ್ಸ್​

Gandhada Gudi | Puneeth Rajkumar: ‘ಎಲ್ಲರೂ ಒಮ್ಮೆಯಾದರೂ ಇದನ್ನು ನೋಡಬೇಕು. ಕರ್ನಾಟಕದ ಅದ್ಭುತ ಪ್ರಕೃತಿ ಸೌಂದರ್ಯದ ದೃಶ್ಯಗಳನ್ನು ಮಿಸ್​ ಮಾಡಿಕೊಳ್ಳಬೇಡಿ’ ಎಂದು ‘ಗಂಧದ ಗುಡಿ’ ನೋಡಿದ ಪ್ರೇಕ್ಷಕರು ಟ್ವೀಟ್​​ ಮಾಡಿದ್ದಾರೆ.

Gandhada Gudi Twitter Review: ಹೇಗಿದೆ ‘ಗಂಧದ ಗುಡಿ’?; ಪ್ರೀಮಿಯರ್​ ಶೋ ಬಳಿಕ ಟ್ವಿಟರ್​ ಮೂಲಕ ವಿಮರ್ಶೆ ತಿಳಿಸಿದ ಫ್ಯಾನ್ಸ್​
ಗಂಧದ ಗುಡಿ ಟ್ವಿಟರ್ ವಿಮರ್ಶೆ
Follow us
TV9 Web
| Updated By: ಮದನ್​ ಕುಮಾರ್​

Updated on:Oct 27, 2022 | 9:42 PM

ಅಕ್ಟೋಬರ್​ 28ರಂದು ರಾಜ್ಯಾದ್ಯಂತ ‘ಗಂಧದ ಗುಡಿ’ (Gandhada Gudi) ರಿಲೀಸ್​ ಆಗುತ್ತಿದೆ. ಅದಕ್ಕೂ ಮುನ್ನ, ಅಂದರೆ ಅ.27ರ ಸಂಜೆಯೇ ಹಲವು ಚಿತ್ರಮಂದಿರಗಳಲ್ಲಿ ಪ್ರೀಮಿಯರ್​ ಶೋ ನಡೆದಿದೆ. ಬಹುನಿರೀಕ್ಷಿತ ‘ಗಂಧದ ಗುಡಿ’ ಸಾಕ್ಷ್ಯಚಿತ್ರ ನೋಡಿ ಅಭಿಮಾನಿಗಳು ಎಮೋಷನಲ್​ ಆಗುತ್ತಿದ್ದಾರೆ. ಇದು ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರ ಕನಸಿನ ಪ್ರಾಜೆಕ್ಟ್​. ಹಾಗಾಗಿ ಎಲ್ಲರಿಗೂ ಇದರ ಬಗ್ಗೆ ವಿಶೇಷ ಪ್ರೀತಿ ಇದೆ. ಪ್ರೀಮಿಯರ್​ ಶೋ ಟಿಕೆಟ್​ಗಳು ಎರಡು ದಿನ ಮುನ್ನವೇ ಸೋಲ್ಡ್​ ಔಟ್​ ಆಗಿದ್ದವು. ಫ್ಯಾನ್ಸ್​ ಮುಗಿಬಿದ್ದು ಈ ಚಿತ್ರವನ್ನು ನೋಡಿದ್ದಾರೆ. ಬಳಿಕ ಟ್ವಿಟರ್​ ಮೂಲಕ ವಿಮರ್ಶೆ (Gandhada Gudi Twitter Review) ಹಂಚಿಕೊಂಡಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಯಾವ ಹೀರೋ ಕೂಡ ಮಾಡಿರದ ಈ ಅಪರೂಪದ ಪ್ರಯತ್ನಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಕರ್ನಾಟಕದ ಅರಣ್ಯ ಸಂಪತ್ತು ಮತ್ತು ವನ್ಯಜೀವಿ ಜಗತ್ತನ್ನು ಕಣ್ಣಿಗೆ ಕಟ್ಟುವಂತೆ ‘ಗಂಧದ ಗುಡಿ’ ತೆರೆದಿಟ್ಟಿದೆ. ಅತ್ಯುತ್ತಮವಾದ ಛಾಯಾಗ್ರಹಣದಿಂದ ಬೇರೊಂದು ಲೋಕವನ್ನೇ ನೋಡಿದಂತಹ ಅನುಭವ ಎಲ್ಲರಿಗೂ ಆಗುತ್ತಿದೆ. ಕರ್ನಾಟಕದ ಪ್ರಕೃತಿ ಸೌಂದರ್ಯವನ್ನು ದೊಡ್ಡ ಪರದೆಯಲ್ಲಿ ಪ್ರೇಕ್ಷಕರು ಕಣ್ತುಂಬಿಕೊಳ್ಳುತ್ತಿದ್ದಾರೆ. ಪುನೀತ್​ ಅವರನ್ನು ನೋಡಿ ಫ್ಯಾನ್ಸ್​ ಕಣ್ಣುಗಳು ತೇವ ಆಗುತ್ತಿವೆ.

ಇದನ್ನೂ ಓದಿ
Image
Gandhada Gudi: ‘ಗಂಧದ ಗುಡಿ’ ಗೆಲುವಿಗೆ ಪ್ರಾರ್ಥನೆ; ದೊಡ್ಡ ಗಣಪತಿ ದೇವಸ್ಥಾನದಲ್ಲಿ ಟಿಕೆಟ್​ ಇಟ್ಟು ಅಮೋಘವರ್ಷ ಪೂಜೆ
Image
Gandhada Gudi: ರಿಲೀಸ್​ಗೂ ಮುನ್ನವೇ ದಾಖಲೆ ಬರೆದ ‘ಗಂಧದ ಗುಡಿ’: ಅಪ್ಪು ಕನಸನ್ನು ನನಸು ಮಾಡುತ್ತಿರುವ ಫ್ಯಾನ್ಸ್​
Image
Gandhada Gudi: ಅಂತೂ ಮೌನ ಮುರಿದ ಅಶ್ವಿನಿ ಪುನೀತ್​ ರಾಜ್​ಕುಮಾರ್​; ‘ಗಂಧದ ಗುಡಿ’ ಬಗ್ಗೆ ಇಲ್ಲಿದೆ ಮೊದಲ ಸಂದರ್ಶನ
Image
‘ಗಂಧದ ಗುಡಿ’ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ

‘ಪುನೀತ್​ ಅವರಿಗೆ ಇದು ಅತ್ಯುತ್ತಮವಾದ ವಿದಾಯ. ಸುಂದರವಾದ ದೃಶ್ಯಗಳು ಮತ್ತು ಹಿನ್ನೆಲೆ ಸಂಗೀತದಿಂದ ಗಂಧದ ಗುಡಿ ಇನ್ನಷ್ಟು ಸ್ಪೆಷಲ್​ ಆಗಿದೆ. ಅಪ್ಪು ಅವರೇ ಬಂದು ಕೊನೆಯದಾಗಿ ಅಪ್ಪಿಕೊಂಡಂತೆ ಫೀಲ್​ ಆಗಿದೆ’ ಎಂದು ಅಭಿಮಾನಿಗಳು ಟ್ವೀಟ್​ ಮಾಡಿದ್ದಾರೆ. ತಾಂತ್ರಿಕವಾಗಿ ತುಂಬ ಶ್ರೀಮಂತವಾಗಿರುವ ಈ ಸಾಕ್ಷ್ಯಚಿತ್ರಕ್ಕೆ ಎಲ್ಲರೂ ಮನ ಸೋಲುತ್ತಿದ್ದಾರೆ.

‘ಅಪ್ಪು ಅವರಿಗೆ ಹ್ಯಾಟ್ಸಾಫ್​. ಇದು ಕರ್ನಾಟಕದ ಹೆಮ್ಮೆ. ಪುನೀತ್​ ರಾಜ್​ಕುಮಾರ್​ ಅವರನ್ನು ತುಂಬ ಮಿಸ್​ ಮಾಡಿಕೊಳ್ಳುತ್ತೇವೆ’ ಎಂದು ಅಭಿಮಾನಿಯೊಬ್ಬರು​ ಪೋಸ್ಟ್​ ಮಾಡಿದ್ದಾರೆ. ‘ಗಂಧದ ಗುಡಿ ಒಂದು ಎಪಿಕ್​. ದೇಶಾದ್ಯಂತ ಇರುವ ಎಲ್ಲ ಸಿನಿಮಾ ನಟರ ಅಭಿಮಾನಿಗಳು ಒಮ್ಮೆಯಾದರೂ ಇದನ್ನು ನೋಡಬೇಕು. ಕರ್ನಾಟಕದ ಅದ್ಭುತ ಪ್ರಕೃತಿ ಸೌಂದರ್ಯದ ದೃಶ್ಯಗಳನ್ನು ಮಿಸ್​ ಮಾಡಿಕೊಳ್ಳಬೇಡಿ’ ಎಂದು ಕೂಡ ಪೋಸ್ಟ್​ ಮಾಡಿದ್ದಾರೆ.

‘ಗಂಧದ ಗುಡಿ’ ಡಾಕ್ಯುಮೆಂಟರಿಗೆ ಅಮೋಘವರ್ಷ ಅವರು ನಿರ್ದೇಶನ ಮಾಡಿದ್ದಾರೆ. ಪುನೀತ್​ ರಾಜ್​ಕುಮಾರ್​ ಅವರ ಪಿಆರ್​ಕೆ ಪ್ರೊಡಕ್ಷನ್ಸ್​ ಮೂಲಕ ಇದು ನಿರ್ಮಾಣ ಆಗಿದೆ. ದಾಖಲೆ ಪ್ರಮಾಣದಲ್ಲಿ ಈ ಚಿತ್ರ ಪ್ರದರ್ಶನ ಕಾಣುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:42 pm, Thu, 27 October 22

ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್