- Kannada News Photo gallery Puneeth Rajkumar's Gandhada Gudi director Amoghavarsha offers special at Dodda Ganapathi Temple
Gandhada Gudi: ‘ಗಂಧದ ಗುಡಿ’ ಗೆಲುವಿಗೆ ಪ್ರಾರ್ಥನೆ; ದೊಡ್ಡ ಗಣಪತಿ ದೇವಸ್ಥಾನದಲ್ಲಿ ಟಿಕೆಟ್ ಇಟ್ಟು ಅಮೋಘವರ್ಷ ಪೂಜೆ
Puneeth Rajkumar | Amoghavarsha: ‘ಗಂಧದ ಗುಡಿ’ ಯಶಸ್ವಿ ಆಗಲಿ ಎಂದು ನಿರ್ದೇಶಕ ಅಮೋಘವರ್ಷ ಪೂಜೆ ಸಲ್ಲಿಸಿದ್ದಾರೆ. ದೊಡ್ಡ ಗಣಪತಿ ದೇವಸ್ಥಾನದಲ್ಲಿ ಟಿಕೆಟ್ ಇಟ್ಟು ಪ್ರಾರ್ಥನೆ ಮಾಡಿಕೊಂಡಿದ್ದಾರೆ.
Updated on: Oct 27, 2022 | 6:47 PM

Puneeth Rajkumar's Gandhada Gudi director Amoghavarsha offers special at Dodda Ganapathi Temple

Puneeth Rajkumar's Gandhada Gudi director Amoghavarsha offers special at Dodda Ganapathi Temple

ಗುರುವಾರ (ಅ.27) ರಾತ್ರಿಯೇ ಹಲವು ಕಡೆಗಳಲ್ಲಿ ‘ಗಂಧದ ಗುಡಿ’ ಪ್ರೀಮಿಯರ್ ಶೋ ಆಯೋಜನೆಗೊಂಡಿದೆ. ಅನೇಕ ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗಲಿದ್ದಾರೆ. ಸಾಕಷ್ಟು ಅಭಿಮಾನಿಗಳು ಕೂಡ ವೀಕ್ಷಿಸಲಿದ್ದಾರೆ.

‘ಗಂಧದ ಗುಡಿ’ ಯಶಸ್ವಿ ಆಗಲಿ ಎಂದು ನಿರ್ದೇಶಕ ಅಮೋಘವರ್ಷ ಅವರು ಪೂಜೆ ಸಲ್ಲಿಸಿದ್ದಾರೆ. ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಟಿಕೆಟ್ ಇಟ್ಟು ಪ್ರಾರ್ಥನೆ ಮಾಡಿಕೊಂಡಿದ್ದಾರೆ. ಈ ವೇಳೆ ಅವರ ಕುಟುಂಬದವರು ಸಾಥ್ ನೀಡಿದರು.

ದಾಖಲೆ ಪ್ರಮಾಣದಲ್ಲಿ ‘ಗಂಧದ ಗುಡಿ’ ಶೋ ಆಯೋಜನೆಗೊಂಡಿದೆ. ರಾಜ್ಯಾದ್ಯಂತ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಈ ಸಾಕ್ಷ್ಯಚಿತ್ರಕ್ಕೆ ಅದ್ದೂರಿ ಸ್ವಾಗತ ಕೋರುತ್ತಿದ್ದಾರೆ. ವಿದೇಶದಲ್ಲೂ ‘ಗಂಧದ ಗುಡಿ’ ತೆರೆಕಾಣುತ್ತಿದೆ.
























