Gandhada Gudi: ಗಳಗಳನೆ ಕಣ್ಣೀರು ಹಾಕಿದ ಅನುಶ್ರೀ; ‘ಗಂಧದ ಗುಡಿ’ಯಲ್ಲಿ ಅಪ್ಪು​ ನೋಡಿದ ಬಳಿಕ ನಿರೂಪಕಿ ಭಾವುಕ ಮಾತು

Anchor Anushree | Puneeth Rajkumar: ‘ಗಂಧದ ಗುಡಿ’ ವೀಕ್ಷಿಸಿ ನಿರೂಪಕಿ ಅನುಶ್ರೀ ತುಂಬ ಎಮೋಷನಲ್​ ಆಗಿದ್ದಾರೆ. ‘ಇದನ್ನು ನೋಡಲು ಖುಷಿ ಮತ್ತು ಸಂಕಟ ಎರಡೂ ಆಗುತ್ತದೆ’ ಎಂದು ಅವರು ಹೇಳಿದ್ದಾರೆ.

Gandhada Gudi: ಗಳಗಳನೆ ಕಣ್ಣೀರು ಹಾಕಿದ ಅನುಶ್ರೀ; ‘ಗಂಧದ ಗುಡಿ’ಯಲ್ಲಿ ಅಪ್ಪು​ ನೋಡಿದ ಬಳಿಕ ನಿರೂಪಕಿ ಭಾವುಕ ಮಾತು
ನಿರೂಪಕಿ ಅನುಶ್ರೀ
Follow us
TV9 Web
| Updated By: ಮದನ್​ ಕುಮಾರ್​

Updated on:Oct 28, 2022 | 7:35 AM

ತುಂಬ ಅದ್ದೂರಿಯಾಗಿ ‘ಗಂಧದ ಗುಡಿ’ (Gandhada Gudi) ಸಾಕ್ಷ್ಯಚಿತ್ರ ರಿಲೀಸ್​ ಆಗಿದೆ. ಈ ಡಾಕ್ಯುಮೆಂಟರಿ ಎಲ್ಲರಿಗೂ ಭಾವುಕವಾಗಿ ಕನೆಕ್ಟ್​ ಆಗುತ್ತಿದೆ. ನಿರೂಪಕಿ ಅನುಶ್ರೀ (Anchor Anushree) ಅವರು ಗುರುವಾರ ರಾತ್ರಿಯೇ ಇದನ್ನು ಕಣ್ತುಂಬಿಕೊಂಡಿದ್ದಾರೆ. ನೋಡಿ ಹೊರಬಂದ ಬಳಿಕ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಈ ವೇಳೆ ಅವರು ಸಖತ್​ ಎಮೋಷನಲ್​ ಆಗಿ ಕಣ್ಣೀರು ಹಾಕಿದ್ದಾರೆ. ಇದು ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರ ಕನಸಿನ ಪ್ರಾಜೆಕ್ಟ್​. ಇಡೀ ಕರ್ನಾಟಕದ ಪ್ರಕೃತಿ ಸೌಂದರ್ಯವನ್ನು ಅವರು ತೋರಿಸಿದ್ದಾರೆ. ಅದನ್ನು ನೋಡಲು ಎರಡು ಕಣ್ಣುಗಳು ಸಾಲದು ಅಂತ ಫ್ಯಾನ್ಸ್​ ಹೊಗಳುತ್ತಿದ್ದಾರೆ. ಅನುಶ್ರೀ ಅವರಿಗೂ ಇದು ಸಖತ್​ ಇಷ್ಟವಾಗಿದೆ.

‘ಈ ಸಿನಿಮಾದಲ್ಲಿ ಅವರು ಹೇಳಿರುವ ಒಂದೊಂದು ಮಾತು ಕೂಡ ಕಾಡುತ್ತದೆ. ಅವರಿಗೆ ಎಲ್ಲವೂ ಮೊದಲೇ ಗೊತ್ತಿತ್ತಾ ಎಂಬ ಪ್ರಶ್ನೆ ಮೂಡುತ್ತದೆ. ನಾವು ಈ ಭೂಮಿಗೆ ಬಂದಾಗ ಮಗುವಾಗಿ ಬರುತ್ತೇವೆ. ಹೋಗುವಾಗಲೂ ಮಗುವಿನ ಮನಸ್ಥಿತಿಯಲ್ಲೇ ಎಲ್ಲವನ್ನೂ ಅನುಭವಿಸಿ ಅಪ್ಪು ಹೋಗಿದ್ದಾರೆ. ಅಪ್ಪು ರೀತಿ ಬಾಳುವ ಅವಕಾಶ ಎಷ್ಟು ಜನಕ್ಕೆ ಸಿಗುತ್ತೆ? ಇದನ್ನು ನೋಡಲು ಖುಷಿ ಮತ್ತು ಸಂಕಟ ಎರಡೂ ಆಗುತ್ತದೆ. ಪರಮಾತ್ಮನು ಪ್ರಾಣಿ, ಪಕ್ಷಿ, ಮನುಷ್ಯ, ನಿಸರ್ಗ ಹೀಗೆ ಎಲ್ಲವನ್ನೂ ಸೃಷ್ಟಿ ಮಾಡುತ್ತಾನೆ. ಆತ ಸೃಷ್ಟಿ ಮಾಡಿದ ಎಲ್ಲವನ್ನೂ ಸ್ಪರ್ಶಿಸಿ ಹೋಗೋಕೆ ಅಪ್ಪು ಅವರು ಜನ್ಮ ತಾಳಿದ್ದರು ಅಂತ ನನಗೆ ‘ಗಂಧದ ಗುಡಿ’ ನೋಡಿದ ಬಳಿಕ ಅನಿಸಿದು’ ಎಂದು ಅನುಶ್ರೀ ಹೇಳಿದ್ದಾರೆ.

ಸರಳವಾಗಿ ಸಂದೇಶ ನೀಡಿದ ಪುನೀತ್:

ಇದನ್ನೂ ಓದಿ
Image
Gandhada Gudi: ‘ಗಂಧದ ಗುಡಿ’ ಗೆಲುವಿಗೆ ಪ್ರಾರ್ಥನೆ; ದೊಡ್ಡ ಗಣಪತಿ ದೇವಸ್ಥಾನದಲ್ಲಿ ಟಿಕೆಟ್​ ಇಟ್ಟು ಅಮೋಘವರ್ಷ ಪೂಜೆ
Image
Gandhada Gudi: ರಿಲೀಸ್​ಗೂ ಮುನ್ನವೇ ದಾಖಲೆ ಬರೆದ ‘ಗಂಧದ ಗುಡಿ’: ಅಪ್ಪು ಕನಸನ್ನು ನನಸು ಮಾಡುತ್ತಿರುವ ಫ್ಯಾನ್ಸ್​
Image
Gandhada Gudi: ಅಂತೂ ಮೌನ ಮುರಿದ ಅಶ್ವಿನಿ ಪುನೀತ್​ ರಾಜ್​ಕುಮಾರ್​; ‘ಗಂಧದ ಗುಡಿ’ ಬಗ್ಗೆ ಇಲ್ಲಿದೆ ಮೊದಲ ಸಂದರ್ಶನ
Image
‘ಗಂಧದ ಗುಡಿ’ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ

‘ಪುನೀತ್​ ರಾಜ್​ಕುಮಾರ್​ ಅವರು ‘ಪವರ್​ ಸ್ಟಾರ್​’. ಆದರೆ ಕಾಡಿಗೆ ಹೋಗಿ ಅಲ್ಲಿನ ಜನರ ಜೊತೆ ಬೆರೆತಿದ್ದರು. ಅಲ್ಲಿನ ಮಕ್ಕಳಿಗೆ ಪುನೀತ್​ ಯಾರೆಂಬುದೇ ಗೊತ್ತಿಲ್ಲ. ಅದಕ್ಕೆ ಅವರು ಬೇಸರ ಮಾಡಿಕೊಳ್ಳದೇ, ‘ಓಹ್​.. ಇಲ್ಲಿ ಕರೆಂಟ್​ ಇಲ್ಲ, ಇಲ್ಲೆಲ್ಲ ಪ್ಲಾಸ್ಟಿಕ್​ ಹಾಕಬಾರದು’ ಎಂಬಂತಹ ವಿಷಯಗಳನ್ನು ತುಂಬ ಸರಳವಾಗಿ ಹೇಳಿದ್ದಾರೆ. ಎಲ್ಲಾದರೂ ಇರು ಎಂಥಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು ಅಂತ ಅವರು ಹಾಡಿದ್ದು ಮನಸ್ಸಿಗೆ ಬಹಳ ಹತ್ತಿರ ಆಯ್ತು’ ಎಂದು ಅನುಶ್ರೀ ಹೇಳಿದ್ದಾರೆ.

ಎಲ್ಲರೂ ಇದನ್ನು ನೋಡಬೇಕು:

‘ಎಲ್ಲರೂ ಸಿನಿಮಾವನ್ನು ನೋಡಬೇಕು. ಪುನೀತ್​ ರಾಜ್​ಕುಮಾರ್​ ಅವರ ಅಭಿಮಾನಿಯಾಗಿ ಈ ಮಾತನ್ನು ಹೇಳುತ್ತಿದ್ದೇನೆ ಅಂತಲ್ಲ. ಒಬ್ಬ ಮಾನವನಾಗಿ ಇನ್ನೊಬ್ಬ ವಿಶ್ವ ಮಾನವ ಅಲ್ಲಿ ಬದುಕಿರುವ ಬದುಕನ್ನು ನೋಡಿ ಕಲಿಯುವ ಸಲುವಾಗಿಯಾದರೂ ನೀವೆಲ್ಲರೂ ಇದನ್ನು ನೋಡಬೇಕು’ ಎಂದಿದ್ದಾರೆ ಅನುಶ್ರೀ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:35 am, Fri, 28 October 22

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್