Sign In

By signing in or creating an account, you agree with Associated Broadcasting Company's Terms & Conditions and Privacy Policy.

Ramya: ‘ಗಂಧದ ಗುಡಿಯಲ್ಲಿ ನನಗೆ ಇಷ್ಟವಾದ 2 ವಿಷಯವಿದೆ, ಖಂಡಿತಾ ನಾನು ಅಳುತ್ತೇನೆ’: ನಟಿ ರಮ್ಯಾ

Gandhada Gudi | Puneeth Rajkumar: ‘ಇದೇ ಕೊನೇ ಬಾರಿ ನಾವೆಲ್ಲರೂ ಪುನೀತ್​ ರಾಜ್​ಕುಮಾರ್​ ಅವರನ್ನು ದೊಡ್ಡ ಪರದೆ ಮೇಲೆ ನೋಡುವುದು. ಹಾಗಾಗಿ ಇದು ತುಂಬ ಭಾವುಕ​ ಕ್ಷಣ’ ಎಂದು ರಮ್ಯಾ ಹೇಳಿದ್ದಾರೆ.

Ramya: ‘ಗಂಧದ ಗುಡಿಯಲ್ಲಿ ನನಗೆ ಇಷ್ಟವಾದ 2 ವಿಷಯವಿದೆ, ಖಂಡಿತಾ ನಾನು ಅಳುತ್ತೇನೆ’: ನಟಿ ರಮ್ಯಾ
ರಮ್ಯಾ
Follow us
TV9 Web
| Updated By: ಮದನ್​ ಕುಮಾರ್​

Updated on:Oct 27, 2022 | 8:32 PM

ಬಹಳ ಅದ್ದೂರಿಯಾಗಿ ‘ಗಂಧದ ಗುಡಿ’ (Gandhada Gudi) ಸಾಕ್ಷ್ಯಚಿತ್ರ ರಿಲೀಸ್​ ಆಗಿದೆ. ಇದು ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರ ಕೊನೆಯ ಚಿತ್ರ. ಅಲ್ಲದೇ ಇದು ಅವರ ಕನಸಿನ ಪ್ರಾಜೆಕ್ಟ್​. ಆ ಕಾರಣದಿಂದ ಅಪ್ಪು ಅಭಿಮಾನಿಗಳು ‘ಗಂಧದ ಗುಡಿ’ ಜೊತೆ ಭಾವುಕವಾಗಿ ಕನೆಕ್ಟ್​ ಆಗುತ್ತಿದ್ದಾರೆ. ಅಕ್ಟೋಬರ್​ 28ರಂದು ಈ ಚಿತ್ರ ಬಿಡುಗಡೆ ಆಗುತ್ತಿದೆ. ಅದಕ್ಕೂ ಮುನ್ನ ಅಕ್ಟೋಬರ್​ 27ರಂದು ಅನೇಕ ಕಡೆಗಳಲ್ಲಿ ಪ್ರೀಮಿಯರ್​ ಪ್ರದರ್ಶನ ಏರ್ಪಡಿಸಲಾಯಿತು. ಇದರಲ್ಲಿ ಹಲವು ಸೆಲೆಬ್ರಿಟಿಗಳು ಭಾಗಿ ಆಗಿದ್ದಾರೆ. ದೊಡ್ಡ ಪರದೆ ಮೇಲೆ ‘ಗಂಧದ ಗುಡಿ’ ನೋಡಿ ಎಲ್ಲರೂ ಎಮೋಷನಲ್​ ಆಗಿದ್ದಾರೆ. ನಟಿ ರಮ್ಯಾ (Ramya) ಕೂಡ ಪ್ರೀಮಿಯರ್​ ಶೋಗೆ ಆಗಮಿಸಿದ್ದಾರೆ. ಈ ವೇಳೆ ಅವರು ಅಪ್ಪು ಬಗ್ಗೆ ಮಾತನಾಡಿದ್ದಾರೆ.

ರಮ್ಯಾ ಜೊತೆ ಪುನೀತ್​ ರಾಜ್​ಕುಮಾರ್​ ಅವರಿಗೆ ವಿಶೇಷವಾದ ಬಾಂಧವ್ಯ ಇತ್ತು. ಈಗ ಅವರನ್ನು ತುಂಬ ಮಿಸ್​ ಮಾಡಿಕೊಳ್ಳಲಾಗುತ್ತಿದೆ. ಅಪ್ಪು ನೆನಪಿನಲ್ಲೇ ‘ಗಂಧದ ಗುಡಿ’ ನೋಡಲು ಬಂದ ರಮ್ಯಾ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಪುನೀತ್​ ಜೊತೆಗಿನ ಒಡನಾಟವನ್ನು ನೆನೆದು ಎಮೋಷನಲ್​ ಆಗಿದ್ದಾರೆ. ಅಲ್ಲದೇ, ‘ಗಂಧದ ಗುಡಿ’ ಬಗ್ಗೆ ತಮಗೆ ಎಷ್ಟು ಕಾತುರ ಇದೆ ಎಂಬುದನ್ನು ಕೂಡ ಅವರ ಹೇಳಿದ್ದಾರೆ.

‘ಅಪ್ಪು ಯಾವಾಗಲೂ ನನ್ನ ಫೇವರಿಟ್​ ಕೋ ಸ್ಟಾರ್​ ಆಗಿದ್ದರು. ಇದೇ ಕೊನೇ ಬಾರಿ ನಾವೆಲ್ಲರೂ ಅವರನ್ನು ದೊಡ್ಡ ಪರದೆ ಮೇಲೆ ನೋಡುವುದು. ಹಾಗಾಗಿ ಇದು ತುಂಬ ಎಮೋಷನಲ್​ ಆದಂತಹ ಕ್ಷಣ. ನಾನು ಕೂಡ ಕುತೂಹಲದಿಂದ ನೋಡಬೇಕು. 100 ಪರ್ಸೆಂಟ್ ನಾನು ಅಳುತ್ತೇನೆ. ಅದಂತೂ ಗ್ಯಾರಂಟಿ’ ಎಂದು ರಮ್ಯಾ ಹೇಳಿದ್ದಾರೆ.

ಇದನ್ನೂ ಓದಿ
Image
Gandhada Gudi: ‘ಗಂಧದ ಗುಡಿ’ ಗೆಲುವಿಗೆ ಪ್ರಾರ್ಥನೆ; ದೊಡ್ಡ ಗಣಪತಿ ದೇವಸ್ಥಾನದಲ್ಲಿ ಟಿಕೆಟ್​ ಇಟ್ಟು ಅಮೋಘವರ್ಷ ಪೂಜೆ
Image
Gandhada Gudi: ರಿಲೀಸ್​ಗೂ ಮುನ್ನವೇ ದಾಖಲೆ ಬರೆದ ‘ಗಂಧದ ಗುಡಿ’: ಅಪ್ಪು ಕನಸನ್ನು ನನಸು ಮಾಡುತ್ತಿರುವ ಫ್ಯಾನ್ಸ್​
Image
Gandhada Gudi: ಅಂತೂ ಮೌನ ಮುರಿದ ಅಶ್ವಿನಿ ಪುನೀತ್​ ರಾಜ್​ಕುಮಾರ್​; ‘ಗಂಧದ ಗುಡಿ’ ಬಗ್ಗೆ ಇಲ್ಲಿದೆ ಮೊದಲ ಸಂದರ್ಶನ
Image
‘ಗಂಧದ ಗುಡಿ’ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ

‘ಈ ಸಾಕ್ಷ್ಯಚಿತ್ರ ನೋಡಲು ನಾನು ಕಾದಿದ್ದೆ. ಟ್ರೇಲರ್​ ನೋಡಿದಾಗ ನನಗೆ ತುಂಬ ಇಷ್ಟ ಆಗಿತ್ತು. ಛಾಯಾಗ್ರಹಣ ಅದ್ಭುತವಾಗಿದೆ. ಅಪ್ಪು ಮತ್ತು ಪ್ರಕೃತಿಯನ್ನು ನಾನು ಪ್ರೀತಿಸುತ್ತೇನೆ. ಆ ಎರಡು ಅಂಶಗಳು ಇದರಲ್ಲಿ ಇವೆ. ಅನುಭವ ಹೇಗಿರುತ್ತದೆ ಅಂತ ನೋಡೋಣ. ಪುನೀತ ಪರ್ವದಲ್ಲಿ ನಾನು ಡ್ಯಾನ್ಸ್ ಮಾಡಿದ್ದೇ ಅಪ್ಪುಗೋಸ್ಕರ. ಆ ಕ್ಷಣದಲ್ಲಿ ನಾನು ಅಪ್ಪು ಅವರನ್ನೇ ನೆನಪಿಸಿಕೊಳ್ಳುತ್ತಿದ್ದೆ. ಅವರನ್ನು ನಾನು ತುಂಬ ಮಿಸ್​ ಮಾಡಿಕೊಳ್ಳುತ್ತೇನೆ’ ಎಂದಿದ್ದಾರೆ ರಮ್ಯಾ.

‘ಪುನೀತ್​ ರಾಜ್​ಕುಮಾರ್​ ಅವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಒಂದು ವೇಳೆ ತಾವು ನಿರ್ದೇಶನ ಮಾಡಿದ್ರೆ ನಾನೇ ಹೀರೋಯಿನ್​ ಅಂತ ಹೇಳಿದ್ದರು. ಅಂತಹ ಅನೇಕ ಸಂಗತಿಗಳನ್ನು ನಾವು ಚರ್ಚೆ ಮಾಡಿದ್ವಿ. ಗಂಧದ ಗುಡಿ ನಮ್ಮೆಲ್ಲರ ಹೆಮ್ಮೆ. ಹಾಗಾಗಿ ನಾವು ಇದನ್ನು ಚಿತ್ರಮಂದಿರದಲ್ಲಿ ನೋಡಬೇಕು’ ಎಂದು ರಮ್ಯಾ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:32 pm, Thu, 27 October 22

ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​