ಹಲವು ಕಡೆಗಳಲ್ಲಿ ಗುರುವಾರವೇ (ಅ.27) ‘ಗಂಧದ ಗುಡಿ’ (Gandhada Gudi) ಪ್ರೀಮಿಯರ್ ಶೋ ಏರ್ಪಡಿಸಲಾಗಿತ್ತು. ಬೆಂಗಳೂರಿನಲ್ಲಿ ಸುಧಾ ಮೂರ್ತಿ ಅವರು ಈ ಸಾಕ್ಷ್ಯಚಿತ್ರ ವೀಕ್ಷಿಸಿದ್ದಾರೆ. ಇದು ಅವರಿಗೆ ಬಹಳ ಖುಷಿಕೊಟ್ಟಿದೆ. ಪುನೀತ್ ರಾಜ್ಕಮಾರ್ (Puneeth Rajkumar) ಅವರ ಈ ಪ್ರಯತ್ನಕ್ಕೆ ಸುಧಾ ಮೂರ್ತಿ ಫುಲ್ ಮಾರ್ಕ್ಸ್ ನೀಡಿದ್ದಾರೆ. ಯುವಜನತೆ ನೋಡಿ ತಿಳಿಯಬೇಕಾದ ಅನೇಕ ಅಂಶಗಳು ಇದರಲ್ಲಿ ಇವೆ ಎಂದು ಅವರು ಹೇಳಿದ್ದಾರೆ. ಉತ್ತರ ಕರ್ನಾಟಕದ ಬಗ್ಗೆ ತೋರಿಸಿರುವುದರಿಂದ ಸುಧಾ ಮೂರ್ತಿ (Sudha Murty) ಅವರಿಗೆ ‘ಗಂಧದ ಗುಡಿ’ ಹೆಚ್ಚು ಆಪ್ತ ಎನಿಸಿದೆ. ‘ಕನ್ನಡದಲ್ಲಿ ಇಂಥ ಚಿತ್ರವನ್ನು ನೋಡಿ ಗರ್ವ ಎನಿಸಿತು’ ಎಂದು ಅವರು ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ