ಕೋಲಾರದ ಕೋಲಾರಮ್ಮ ಸನ್ನಿಧಿಯಲ್ಲಿ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ
ಗುಡಿಯ ಬಳಿ ಸುಧಾ ಮೂರ್ತಿಯವರನ್ನು ಕಂಡ ಹಲವಾರು ಜನ ಅವರ ಪಾದಮುಟ್ಟಿ ಗೌರವ ಸೂಚಿಸಿದರು.
ಕೋಲಾರ: ಇನ್ಪೋಸಿಸ್ ಸಂಸ್ಥೆಯ ಸಹ-ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ (NR Narayana Murthy) ಅವರ ಪತ್ನಿ, ಇನ್ಫೋಸಿಸ್ ಪೌಂಡೇಶನ್ ಅಧ್ಯಕ್ಷೆ, ಲೇಖಕಿ ಸುಧಾ ಮೂರ್ತಿ (Sudha Murthy) ಬಹಳ ಸಂಭ್ರಮದಲ್ಲಿದ್ದಾರೆ. ಅವರ ಅಳಿಯ ರಿಷಿ ಸುನಾಕ್ ಬ್ರಿಟನ್ನಿನ ಪ್ರಧಾನ ಮಂತ್ರಿಯಾಗಿರೋದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಶುಕ್ರವಾರ ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಕೋಲಾರಕ್ಕೆ ತೆರಳಿದ್ದ ಅವರು ನಗರದ ಪ್ರಸಿದ್ಧ ಕೋಲಾರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ (Kolaramma temple) ದೇವಿಗೆ ನಮಸ್ಕರಿಸಿದರು. ಗುಡಿಯ ಬಳಿ ಸುಧಾ ಮೂರ್ತಿಯವರನ್ನು ಕಂಡ ಹಲವಾರು ಜನ ಅವರ ಪಾದಮುಟ್ಟಿ ಗೌರವ ಸೂಚಿಸಿದರು.
Latest Videos