ಗರ್ಲ್ಫ್ರೆಂಡ್ ಸಬಾ ಜತೆ ವಾಸಿಸಲು 100 ಕೋಟಿ ಖರ್ಚು ಮಾಡಿದ ಹೃತಿಕ್ ರೋಷನ್
ಒಟ್ಟಾಗಿ ಇರಬೇಕು ಎಂಬುದು ಸಬಾ ಹಾಗೂ ಹೃತಿಕ್ ಆಲೋಚನೆ ಆಗಿತ್ತು. ಈಗ ಅದು ಸಾಧ್ಯವಾಗುತ್ತಿದೆ. 16 ಹಾಗೂ 17ನೇ ಫ್ಲೋರ್ನ ಮನೆಯನ್ನು ರಿನೋವೇಟ್ ಮಾಡಲಾಗಿದೆ.
ಹೃತಿಕ್ ರೋಷನ್ (Hrithik Roshan) ಹಾಗೂ ನಟಿ ಸಬಾ ಆಜಾದ್ ಡೇಟಿಂಗ್ ಮಾಡುತ್ತಿದ್ದಾರೆ. ಇವರು ಮುಂಬೈನಲ್ಲಿ ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಿದೆ. ಮೊದಲ ಬಾರಿ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಾಗ ಎಲ್ಲರಿಗೂ ಅಚ್ಚರಿ ಆಗಿತ್ತು. ಈಗ ಇವರು ಒಟ್ಟಾಗಿ ಕಾಣಿಸಿಕೊಳ್ಳೋದು ಕಾಮನ್ ಆಗಿದೆ. ಸಬಾ ಜತೆ ಇರಲು ಹೃತಿಕ್ ಅವರು ಹೊಸ ಅಪಾರ್ಟ್ಮೆಂಟ್ ಖರೀದಿಸಿದ್ದು, ಇದಕ್ಕಾಗಿ ಅವರು 100 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎನ್ನಲಾಗಿದೆ.
ಮುಂಬೈನ ಜುಹು-ವರ್ಸೋವಾ ಲಿಂಕ್ ರೋಡ್ನಲ್ಲಿ ಮನ್ನತ್ ಹೆಸರಿನ ಅಪಾರ್ಟ್ಮೆಂಟ್ ಇದೆ. ಈ ಅಪಾರ್ಟ್ಮೆಂಟ್ನ 2 ಫ್ಲೋರ್ ಹಾಗೂ ಅಲ್ಲೇ ಪಕ್ಕದಲ್ಲಿರುವ ಮತ್ತೊಂದು ಅಪಾರ್ಟ್ಮೆಂಟ್ನ ಒಂದು ಫ್ಲೋರ್ ಅನ್ನು ಹೃತಿಕ್ ಬರೋಬ್ಬರಿ 97.50 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿದ್ದಾರೆ. ಇದರ ರಿನೋವೇಷನ್ಗೆ ಹೆಚ್ಚುವರಿಯಾಗಿ 3 ಕೋಟಿ ರೂಪಾಯಿ ಖರ್ಚಾಗಿದೆ. ಒಟ್ಟಾರೆ ಅವರು 100 ಕೋಟಿ ರೂಪಾಯಿ ಅನ್ನು ಖಾಲಿ ಮಾಡಿದ್ದಾರೆ ಎಂದು ವರದಿ ಆಗಿದೆ.
ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳು ಮುಂಬೈ ಸಮುದ್ರ ತೀರದಲ್ಲಿ ಮನೆ ಹೊಂದಿದ್ದಾರೆ. ಅದೇ ರೀತಿ ಹೃತಿಕ್ ಕೂಡ ಸಮುದ್ರದ ವೀವ್ ಇರುವ ಮನೆ ಖರೀದಿ ಮಾಡಿದ್ದಾರೆ. 15 ಹಾಗೂ 16ನೇ ಅಂತಸ್ತಿನಲ್ಲಿರುವ ಮನೆಗೆ 67.50 ಕೋಟಿ ರೂಪಾಯಿ ಹಾಗೂ ಮತ್ತೊಂದು ಅಪಾರ್ಟ್ಮೆಂಟ್ ಫ್ಲಾಟ್ಗೆ 30 ಕೋಟಿ ರೂಪಾಯಿಗೆ ಖರ್ಚಾಗಿದೆ.
ಒಟ್ಟಾಗಿ ಇರಬೇಕು ಎಂಬುದು ಸಬಾ ಹಾಗೂ ಹೃತಿಕ್ ಆಲೋಚನೆ ಆಗಿತ್ತು. ಈಗ ಅದು ಸಾಧ್ಯವಾಗುತ್ತಿದೆ. 16 ಹಾಗೂ 17ನೇ ಫ್ಲೋರ್ನ ಮನೆಯನ್ನು ರಿನೋವೇಟ್ ಮಾಡಲಾಗಿದೆ. ಈ ಜೋಡಿ ಶೀಘ್ರದಲ್ಲೇ ಇಲ್ಲಿಗೆ ಸ್ಥಳಾಂತರಗೊಳ್ಳಲಿದೆ ಎನ್ನಲಾಗಿದೆ.
ಸುಸ್ಸಾನೆ ಖಾನ್ ಹಾಗೂ ಹೃತಿಕ್ ಮದುವೆ ಆದರು. ಆದರೆ, ಕಾರಣಾಂತರಗಳಿಂದ ಇಬ್ಬರೂ ಬೇರೆ ಆಗಿದ್ದಾರೆ. ಆದರೆ ಸುಸ್ಸಾನೆ ಜತೆ ಹೃತಿಕ್ ಒಳ್ಳೆಯ ಗೆಳೆತನ ಇಟ್ಟುಕೊಂಡಿದ್ದಾರೆ. ಇಬ್ಬರೂ ಬೇರೆ ಆಗಿ ಹಲವು ವರ್ಷಗಳ ಬಳಿಕ ಹೃತಿಕ್ಗೆ ಸಬಾ ಸಿಕ್ಕಿದ್ದಾರೆ. ಇತ್ತೀಚೆಗೆ ಇವರು ದೀಪಾವಳಿಯನ್ನು ಒಟ್ಟಾಗಿ ಆಚರಿಸಿದ್ದರು.
ಇದನ್ನೂ ಓದಿ: ಆಮಿರ್ ಖಾನ್ಗೆ ಬೆಂಬಲ ನೀಡಿದ್ದೇ ತಪ್ಪಾಯ್ತು; ಹೃತಿಕ್ ರೋಷನ್ಗೆ ಎದುರಾಯ್ತು ಸಂಕಷ್ಟ
ಹೃತಿಕ್ ರೋಷನ್ ನಟನೆಯ ‘ವಿಕ್ರಂ ವೇದ’ ಇತ್ತೀಚೆಗೆ ತೆರೆಗೆ ಬಂತು. ತಮಿಳಿನ ಸೂಪರ್ ಹಿಟ್ ಚಿತ್ರ ‘ವಿಕ್ರಂ ವೇದ’ದ ರಿಮೇಕ್ ಇದಾಗಿದೆ. ಅಂದುಕೊಂಡ ಮಟ್ಟಿಗೆ ಸಿನಿಮಾ ಕಲೆಕ್ಷನ್ ಮಾಡಿಲ್ಲ. ಸಿದ್ದಾರ್ಥ್ ಆನಂದ್ ನಿರ್ದೇಶನದ ‘ಫೈಟರ್’ ಚಿತ್ರದಲ್ಲಿ ಹೃತಿಕ್ ನಟಿಸುತ್ತಿದ್ದಾರೆ. ದೀಪಿಕಾ ಪಡುಕೋಣೆ, ಅನಿಲ್ ಕಪೂರ್ ಕೂಡ ಚಿತ್ರದಲ್ಲಿದ್ದಾರೆ.