Mili Twitter Review: ಜಾನ್ವಿ ಕಪೂರ್​ ಅಭಿನಯಕ್ಕೆ ಕೇಳಿಬರ್ತಿದೆ ಮೆಚ್ಚುಗೆ; ‘ಮಿಲಿ’ ನೋಡಿ ವಿಮರ್ಶೆ ತಿಳಿಸಿದ ಸಿನಿಪ್ರಿಯರು

Mili Movie | Janhvi Kapoor: ‘ಮಿಲಿ’ ಚಿತ್ರದ ಗುಣಮಟ್ಟ ಮತ್ತು ಜಾನ್ವಿ ಕಪೂರ್​ ಅವರ ಅಭಿನಯವನ್ನು ಸಿನಿಪ್ರಿಯರು ಹೊಗಳಿದ್ದಾರೆ. ರಿಮೇಕ್​ ಚಿತ್ರವಾದರೂ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

Mili Twitter Review: ಜಾನ್ವಿ ಕಪೂರ್​ ಅಭಿನಯಕ್ಕೆ ಕೇಳಿಬರ್ತಿದೆ ಮೆಚ್ಚುಗೆ; ‘ಮಿಲಿ’ ನೋಡಿ ವಿಮರ್ಶೆ ತಿಳಿಸಿದ ಸಿನಿಪ್ರಿಯರು
ಜಾನ್ವಿ ಕಪೂರ್
Follow us
TV9 Web
| Updated By: ಮದನ್​ ಕುಮಾರ್​

Updated on: Nov 04, 2022 | 3:22 PM

ಮಲಯಾಳಂನ ‘ಹೆಲೆನ್​’ ಸಿನಿಮಾ 2019ರಲ್ಲಿ ಬಿಡುಗಡೆ ಆಗಿ ಜನರಿಂದ ಮೆಚ್ಚುಗೆ ಪಡೆದುಕೊಂಡಿತ್ತು. ನಾಯಕಿಪ್ರಧಾನ ಕಥೆಯುಳ್ಳ ಆ ಚಿತ್ರವನ್ನು ಹಿಂದಿಯಲ್ಲಿ ‘ಮಿಲಿ’ (Mili Movie) ಎಂದು ರಿಮೇಕ್​ ಮಾಡಲಾಗಿದೆ. ಜಾನ್ವಿ ಕಪೂರ್​ ಅವರು ಈ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಬೋನಿ ಕಪೂರ್​ ಅವರು ಮಗಳು ಜಾನ್ವಿಗಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ದೊಡ್ಡ ಗೆಲುವಿಗಾಗಿ ಜಾನ್ವಿ ಕಪೂರ್ (Janhvi Kapoor) ಕಾಯುತ್ತಿದ್ದಾರೆ. ಈ ಸಿನಿಮಾದಿಂದಲಾದರೂ ಯಶಸ್ಸು ಸಿಗಬಹುದು ಎಂಬ ನಿರೀಕ್ಷೆಯಲ್ಲೇ ಇಂದು (ನವೆಂಬರ್​ 4) ‘ಮಿಲಿ’ ಬಿಡುಗಡೆ ಮಾಡಲಾಗಿದೆ. ಜಾನ್ವಿ ಕಪೂರ್​ ಜೊತೆಗೆ ಸನ್ನಿ ಕೌಶಲ್​ ಹಾಗೂ ಮನೋಜ್​ ಪಾಹ್ವಾ ಅವರು ನಟಿಸಿದ್ದಾರೆ. ಮೊದಲ ದಿನ ಸಿನಿಮಾ ನೋಡಿಬಂದ ಪ್ರೇಕ್ಷಕರು ಟ್ವಿಟರ್​ ಮೂಲಕ ತಮ್ಮ ವಿಮರ್ಶೆ (Mili Movie Twitter Review) ತಿಳಿಸುತ್ತಿದ್ದಾರೆ.

ಅದೇಕೋ ಗೊತ್ತಿಲ್ಲ ಜಾನ್ವಿ ಕಪೂರ್​ ಅವರಿಗೆ ರಿಮೇಕ್​ ಮೇಲೆ ಮೋಹ. ಬ್ಯಾಕ್​ ಟು ಬ್ಯಾಕ್​ ರಿಮೇಕ್​ ಸಿನಿಮಾಗಳನ್ನು ಅವರು ಮಾಡುತ್ತಿದ್ದಾರೆ. ದಕ್ಷಿಣದ ಕಥೆಯನ್ನು ಉತ್ತರ ಭಾರತದ ಪ್ರೇಕ್ಷಕರಿಗೆ ಪರಿಚಯಿಸಲು ಅವರು ಹೆಚ್ಚು ಉತ್ಸಾಹ ತೋರಿಸುತ್ತಾರೆ. ‘ಮಿಲಿ’ ಕೂಡ ರಿಮೇಕ್​ ಸಿನಿಮಾ ಆಗಿರುವುದರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಕೆಲವರಿಗೆ ಈ ಸಿನಿಮಾ ತುಂಬ ಇಷ್ಟ ಆಗಿದೆ.

ಇದನ್ನೂ ಓದಿ
Image
44 ಕೋಟಿ ರೂಪಾಯಿಗೆ ಮನೆ ಮಾರಿಕೊಂಡ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್​; ಖರೀದಿಸಿದ ಹೀರೋ ಯಾರು?
Image
ಡಿಗ್ಲಾಮ್ ಲುಕ್​ನಲ್ಲಿ ನಟಿ ಜಾನ್ವಿ ಕಪೂರ್​; ಆದರೆ, ಈ ನಟಿ ನೀವಂದುಕೊಂಡ ಹಾಗಲ್ಲ
Image
Janhvi Kapoor: ಜಾನ್ವಿ ಕಪೂರ್​ ಫೋಟೋ ವೈರಲ್​; ಶ್ರೀದೇವಿ ಪುತ್ರಿಯ ಅಂದ-ಚಂದ ಕಂಡು ವಾವ್​ ಎಂದ ಅಭಿಮಾನಿಗಳು
Image
Janhvi Kapoor: ಪ್ರಕೃತಿಯ ಮಡಿಲಿನಲ್ಲಿ ಜಾನ್ವಿ ಕಪೂರ್ ವಿಹಾರ; ಫೋಟೋಗಳಿಗೆ ಮಸ್ತ್​ ಪೋಸ್​​

ನಟನೆಯ ಕಾರಣದಿಂದ ಜಾನ್ವಿ ಕಪೂರ್​ ಅವರು ಅನೇಕ ಬಾರಿ ಟೀಕೆಗೆ ಒಳಗಾಗಿದ್ದರು. ಆದರೆ ‘ಮಿಲಿ’ ಸಿನಿಮಾದಲ್ಲಿನ ಅವರ ನಟನೆಗೆ ಬಹುತೇಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಮೊದಲರ್ಧ ತುಂಬ ಚೆನ್ನಾಗಿದೆ. ದ್ವಿತೀಯಾರ್ಧದ ನಿರೂಪಣೆ ಒಂಚೂರು ನಿಧಾನಗತಿಯಲ್ಲಿ ಇದೆ ಎಂದು ಪ್ರೇಕ್ಷಕರೊಬ್ಬರು ಟ್ವೀಟ್​ ಮಾಡಿದ್ದಾರೆ.

ಇಡೀ ಸಿನಿಮಾದಲ್ಲಿ ಜಾನ್ವಿ ಕಪೂರ್​ ಅವರ ಪಾತ್ರವೇ ಹೈಲೈಟ್​ ಆಗಿದೆ. ಆ ದೃಷ್ಟಿಯಿಂದ ಇದು ಅವರಿಗೆ ಬೆಸ್ಟ್​ ಆಯ್ಕೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಅಭಿನಯವನ್ನು ತೋರಿಸಲು ಈ ಪಾತ್ರ ಅವರಿಗೆ ಹೆಚ್ಚು ಅನುಕೂಲ ಆಗಿದೆ. ಒಂದೊಳ್ಳೆಯ ಥ್ರಿಲ್​ ನೀಡುವ ಈ ಚಿತ್ರವನ್ನು ಒಮ್ಮೆಯಾದರೂ ನೋಡಬೇಕು ಎಂದು ಅಭಿಮಾನಿಗಳು ಅನಿಸಿಕೆ ಹಂಚಿಕೊಂಡಿದ್ದಾರೆ.

ಮಲಯಾಳಂನ ಮೂಲ ಸಿನಿಮಾವನ್ನು ನೋಡದೇ ಇರುವವರಿಗೆ ‘ಮಿಲಿ’ ಚಿತ್ರ ಹೆಚ್ಚು ಇಷ್ಟ ಆಗುತ್ತಿದೆ. ಫ್ರೀಜರ್​ನಲ್ಲಿ ಸಿಕ್ಕಿಕೊಂಡು ಪ್ರಾಣ ಉಳಿಸಿಕೊಳ್ಳಲು ಹೋರಾಡುವ ಯುವತಿಯ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಅಂತಿಮವಾಗಿ ಆಕೆಗೆ ಏನಾಗುತ್ತದೆ ಎಂಬುದನ್ನು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು.

ವಿಮರ್ಶೆಯ ದೃಷ್ಟಿಯಿಂದ ‘ಮಿಲಿ’ ಸಿನಿಮಾ ಗೆದ್ದಿದೆ. ಎಲ್ಲರೂ ಈ ಚಿತ್ರದ ಗುಣಮಟ್ಟವನ್ನು ಮತ್ತು ಜಾನ್ವಿ ಕಪೂರ್​ ಅವರ ಅಭಿನಯವನ್ನು ಹೊಗಳಿದ್ದಾರೆ. ಒಟ್ಟಾರೆ ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾ ಎಷ್ಟು ಕಲೆಕ್ಷನ್​ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು