AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಶೆರ್ಲಿನ್ ನೀಲಿ ತಾರೆ, ಎಲ್ಲಾ ಭಾಗಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ದಾರೆ’; ನಟಿಯ ವಿರುದ್ಧ ಕೇಳಿ ಬಂತು ಆರೋಪ

ರಾಖಿ ಸಾವಂತ್ ಬಗ್ಗೆ ಇತ್ತೀಚೆಗೆ ಮಾತನಾಡಿದ್ದ ಶೆರ್ಲಿನ್ ಅವರು ಸರಿಯಾಗಿ ಬೈದಿದ್ದರು. ‘ರಾಖಿಗೆ ಸಖತ್ ಕೊಬ್ಬು ಇದೆ’ ಎಂದೆಲ್ಲ ಹೇಳಿದ್ದರು. ಇದಕ್ಕೆ ರಾಖಿ ಪ್ರತ್ಯುತ್ತರ ನೀಡಿದ್ದಾರೆ.

‘ಶೆರ್ಲಿನ್ ನೀಲಿ ತಾರೆ, ಎಲ್ಲಾ ಭಾಗಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ದಾರೆ’; ನಟಿಯ ವಿರುದ್ಧ ಕೇಳಿ ಬಂತು ಆರೋಪ
ಶೆರ್ಲಿನ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Nov 04, 2022 | 8:03 PM

Share

ನಟಿ ಶೆರ್ಲಿನ್ ಚೋಪ್ರಾ (Sherlyn Chopra) ಹಾಗೂ ರಾಖಿ ಸಾವಂತ್ ಚಿತ್ರರಂಗದಲ್ಲಿ ಅಷ್ಟಾಗಿ ಆ್ಯಕ್ಟೀವ್ ಆಗಿಲ್ಲ. ಆದರೆ, ವಿವಾದದ ಮೂಲಕ ಇಬ್ಬರೂ ಸದಾ ಸುದ್ದಿಯಲ್ಲಿರುತ್ತಾರೆ. ಇಬ್ಬರಿಗೂ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುವುದಿಲ್ಲ. ಇಬ್ಬರ ಮಧ್ಯೆ ಸಾಕಷ್ಟು ವಿಚಾರಕ್ಕೆ ಕಿರಿಕ್ ಆದ ಉದಾಹರಣೆ ಇದೆ. ಈಗ ಇಬ್ಬರ ಜಗಳ ಮತ್ತೆ ಬೀದಿಗೆ ಬಂದಿದೆ. ಒಬ್ಬರ ಮೇಲೆ ಒಬ್ಬರು ವಿವಿಧ ರೀತಿಯ ಆರೋಪಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಪಾಪರಾಜಿಗಳು ಮೈಕ್ ಹಿಡಿದಲ್ಲೆಲ್ಲಾ ಹೋಗಿ ಒಬ್ಬರಿಗೊಬ್ಬರು ಬೈಯ್ಯುತ್ತಿದ್ದಾರೆ.

ರಾಖಿ ಸಾವಂತ್ ಬಗ್ಗೆ ಇತ್ತೀಚೆಗೆ ಮಾತನಾಡಿದ್ದ ಶೆರ್ಲಿನ್ ಅವರು ಸರಿಯಾಗಿ ಬೈದಿದ್ದರು. ‘ರಾಖಿಗೆ ಸಖತ್ ಕೊಬ್ಬು ಇದೆ’ ಎಂದೆಲ್ಲ ಹೇಳಿದ್ದರು. ಇದಕ್ಕೆ ರಾಖಿ ಪ್ರತ್ಯುತ್ತರ ನೀಡಿದ್ದಾರೆ. ಇತ್ತೀಚೆಗೆ ಬಾಯ್​ಫ್ರೆಂಡ್ ಆದಿಲ್ ಜತೆ ಸುತ್ತಾಡುವಾಗ ಪಾಪರಾಜಿಗಳು ಅವರನ್ನು ಮುತ್ತಿಕೊಂಡಿದ್ದಾರೆ. ಈ ವೇಳೆ ಶೆರ್ಲಿನ್ ಮಾಡಿರುವ ಆರೋಪಕ್ಕೆ ಪ್ರತ್ಯುತ್ತರ ನೀಡಿದ್ದಾರೆ.

‘ಶೆರ್ಲಿನ್ ನೀಲಿ ಚಿತ್ರ ತಾರೆ. ಅವರ ಅನೇಕ ಫೋಟೋ ಹಾಗೂ ವಿಡಿಯೋಗಳು ಯೂಟ್ಯೂಬ್​ನಲ್ಲಿ ಲಭ್ಯವಿದೆ. ಅವರು ವೇಶ್ಯಾವಾಟಿಕೆಯ ಜಾಲ ನಡೆಸುತ್ತಿದ್ದಾರೆ. ಪ್ರಭಾವಿ ವ್ಯಕ್ತಿಗಳನ್ನು ಬ್ಲಾಕ್​ಮೇಲ್ ಮಾಡುತ್ತಿದ್ದಾರೆ. ಈ ಮೊದಲು ವೇಶ್ಯಾವಾಟಿಕೆ ಜಾಲ ನಡೆಸುವಾಗ ಶೆರ್ಲಿನ್ ಸಿಕ್ಕಿ ಬಿದ್ದಿದ್ದರು. ಪ್ರಭಾವಿ ವ್ಯಕ್ತಿಗಳಿಂದ ಹಣ ಕೀಳುವುದರಲ್ಲಿ ಅವರು ಸಖತ್ ಫೇಮಸ್. ಮೇಲಿಂದ ಕೆಳಗಿನವರೆಗೆ ದೇಹದ ಎಲ್ಲಾ ಭಾಗಕ್ಕೆ ಅವರು ಸರ್ಜರಿ ಮಾಡಿಸಿದ್ದಾರೆ’ ಎಂದು ಆರೋಪಿಸಿದ್ದಾರೆ ರಾಖಿ.

ಇದನ್ನೂ ಓದಿ
Image
ಸಲ್ಮಾನ್​ ಖಾನ್​ರನ್ನು​ ಟೀಕಿಸಿದ ಕಂಗನಾ ರಣಾವತ್​; ಸರಿಯಾಗಿ ತಿರುಗೇಟು ನೀಡಿದ ರಾಖಿ
Image
‘ಗಂಡ ನನ್ನನ್ನು ಉಪಯೋಗಿಸಿಕೊಂಡ’; ಕಣ್ಣೀರು ಹಾಕಿ ಎಲ್ಲರ ಎದುರು ದುಃಖ ತೋಡಿಕೊಂಡ ರಾಖಿ ಸಾವಂತ್​
Image
ಪ್ರೇಮಿಗಳ ದಿನದ ಹೊಸ್ತಿಲಲ್ಲೇ ರಾಖಿ ಸಾವಂತ್ ದಾಂಪತ್ಯ ಅಂತ್ಯ; ಕಾಂಟ್ರವರ್ಸಿ ನಟಿಯ ಗಟ್ಟಿ ನಿರ್ಧಾರ
Image
Rakhi Sawant: ವಿಚಿತ್ರ ಭಂಗಿ, ವಿಚಿತ್ರ ಬಟ್ಟೆ; ಹೀಗೂ ಯೋಗ ಮಾಡ್ತಾರಾ? ಟ್ರೋಲ್​ ಆದ ರಾಖಿ ಸಾವಂತ್​

ಶೆರ್ಲಿನ್ ಹೇಳಿದ್ದೇನು?

‘ರಾಖಿ ಜಿಮ್‌ಗೆ ಹೋಗಬೇಕು’ ಎಂದು ಟೀಕೆ ಮಾಡುವ ರೀತಿಯಲ್ಲಿ ಶೆರ್ಲಿನ್ ಹೇಳಿದ್ದರು. ‘ರಾಖಿಗೆ ಪತಿ ಹಾಗೂ ಬಾಯ್​ಫ್ರೆಂಡ್​ಗಳು ಟೈಮ್​ಪಾಸ್ ವಿಚಾರ. ರಾಖಿಗೆ ಕಷ್ಟಪಟ್ಟು ಕೆಲಸ ಮಾಡುವುದರಲ್ಲಿ ನಂಬಿಕೆ ಇಲ್ಲ. ಧೈರ್ಯವಿದ್ದರೆ ರಾಖಿ ತನ್ನ ಮುಂದೆ ನಿಲ್ಲಲಿ’ ಎಂದು ಸವಾಲು ಹಾಕಿದ್ದರು ಶೆರ್ಲಿನ್.

ಇದು ಆರಂಭವಾಗಿದ್ದೆಲ್ಲಿ?

ಶೆರ್ಲಿನ್ ಮತ್ತು ರಾಖಿ ನಡುವಿನ ಜಗಳ ದಿನ ಕಳೆದಂತೆ ಹೆಚ್ಚುತ್ತಿದೆ. ಬಿಗ್ ಬಾಸ್ 16ರ ಸ್ಪರ್ಧಿ ಸಾಜಿದ್ ಖಾನ್ ವಿರುದ್ಧ ಶೆರ್ಲಿನ್ ಪೊಲೀಸ್ ದೂರು ದಾಖಲಿಸಿದ್ದರು. ಅವರನ್ನು ರಿಯಾಲಿಟಿ ಶೋನಿಂದ ಹೊರಹಾಕಬೇಕು ಎಂದು ಒತ್ತಾಯಿಸಿದ್ದರು. ಈ ಬಗ್ಗೆ ಮಾತನಾಡಿದ್ದ ರಾಖಿ, ‘ಸಾಜಿದ್ ಪ್ರಭಾವಿ ವ್ಯಕ್ತಿ. ಅವರ ಬಳಿ ದುಡ್ಡಿದೆ. ಇದಕ್ಕಾಗಿ ಶೆರ್ಲಿನ್ ಈ ರೀತಿಯ ಆರೋಪ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದರು.

Published On - 8:01 pm, Fri, 4 November 22