- Kannada News Photo gallery Janhvi Kapoor starrer Mili movie making stills go viral, Bollywood News in Kannada
Janhvi Kapoor: ಜಾನ್ವಿ ಕಪೂರ್ ಫೋಟೋ ಕಂಡು ಗಾಬರಿಯಾದ ಫ್ಯಾನ್ಸ್; ಶ್ರೀದೇವಿ ಮಗಳಿಗೆ ಇದೇನಾಯ್ತು?
Janhvi Kapoor Photo: ಶ್ರೀದೇವಿ ಪುತ್ರಿ ಎಂಬ ಕಾರಣಕ್ಕೆ ಜಾನ್ವಿ ಕಪೂರ್ ಅವರಿಗೆ ಅವಕಾಶ ಸುಲಭವಾಗಿ ಸಿಕ್ಕಿತು. ಆದರೂ ಗಟ್ಟಿಯಾಗಿ ನೆಲೆ ಕಂಡುಕೊಳ್ಳಲು ಅವರು ಹಲವು ಬಗೆಯಲ್ಲಿ ಕಷ್ಟಪಡುತ್ತಿದ್ದಾರೆ.
Updated on:Nov 03, 2022 | 3:52 PM

Janhvi Kapoor starrer Mili movie making stills go viral

Janhvi Kapoor starrer Mili movie making stills go viral

ಜಾನ್ವಿ ಕಪೂರ್ ನಟನೆಯ ‘ಮಿಲಿ’ ಸಿನಿಮಾ ನವೆಂಬರ್ 4ರಂದು ಬಿಡುಗಡೆ ಆಗುತ್ತಿದೆ. ಈ ಸಿನಿಮಾದ ಕೆಲವು ಮೇಕಿಂಗ್ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಈ ಫೋಟೋಗಳನ್ನು ಒಮ್ಮೆಲೇ ನೋಡಿದ ಫ್ಯಾನ್ಸ್ ಗಾಬರಿ ಆಗಿದ್ದಾರೆ.

ದೊಡ್ಡ ಫ್ರೀಜರ್ ಒಳಗೆ ಸಿಕ್ಕಿಕೊಂಡು ಪ್ರಾಣ ಉಳಿಸಿಕೊಳ್ಳಲು ಒದ್ದಾಡುವ ಯುವತಿಯ ಪಾತ್ರದಲ್ಲಿ ಜಾನ್ವಿ ಕಪೂರ್ ಅವರು ನಟಿಸಿದ್ದಾರೆ. ಆ ಚಿತ್ರದ ಮೇಕಿಂಗ್ ಸ್ಟಿಲ್ಗಳು ಈಗ ವೈರಲ್ ಆಗಿವೆ. ಚಿತ್ರದ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿದೆ.

ಅಂದಹಾಗೆ, ಇದು ಮಲಯಾಳಂನ ‘ಹೆಲನ್’ ಸಿನಿಮಾದ ಹಿಂದಿ ರಿಮೇಕ್. ಇದನ್ನು ಉತ್ತರ ಭಾರತದ ಪ್ರೇಕ್ಷಕರು ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದಕ್ಕೆ ಈ ಶುಕ್ರವಾರ (ನ.4) ಉತ್ತರ ಸಿಗಲಿದೆ. ಈ ಚಿತ್ರಕ್ಕಾಗಿ ಜಾನ್ವಿ ಕಪೂರ್ ಅವರು ಸಖತ್ ಪ್ರಚಾರ ಮಾಡಿದ್ದಾರೆ.
Published On - 3:52 pm, Thu, 3 November 22




