Janhvi Kapoor: ಜಾನ್ವಿ ಕಪೂರ್ ಫೋಟೋ ವೈರಲ್; ಶ್ರೀದೇವಿ ಪುತ್ರಿಯ ಅಂದ-ಚಂದ ಕಂಡು ವಾವ್ ಎಂದ ಅಭಿಮಾನಿಗಳು
Janhvi Kapoor Photos: ಪ್ರಶಸ್ತಿ ಪ್ರದಾನ ಸಮಾರಂಭವೊಂದಕ್ಕೆ ಜಾನ್ವಿ ಕಪೂರ್ ಅವರು ಇತ್ತೀಚೆಗೆ ಹಾಜರಿ ಹಾಕಿದ್ದರು. ಆ ವೇಳೆ ಅವರು ಧರಿಸಿದ್ದ ಕಾಸ್ಟ್ಯೂಮ್ ಗಮನ ಸೆಳೆದಿದೆ.
Updated on: Jun 18, 2022 | 7:30 AM

Good Luck Jerry movie actress Janhvi Kapoor new photos

Good Luck Jerry movie actress Janhvi Kapoor new photos

ಜಾನ್ವಿ ಕಪೂರ್ ಅವರಿಗೆ ಫೋಟೋಗಳ ಬಗ್ಗೆ ಎಲ್ಲಿಲ್ಲದ ಕ್ರೇಜ್. ಆಗಾಗ ಅವರು ಫೋಟೋಶೂಟ್ ಮಾಡಿಸುತ್ತಾರೆ. ಕಲರ್ಫುಲ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಅವುಗಳಿಗೆ ಅಭಿಮಾನಿಗಳ ಮೆಚ್ಚುಗೆ ಸಿಗುತ್ತದೆ.

ಪ್ರಶಸ್ತಿ ಪ್ರದಾನ ಸಮಾರಂಭವೊಂದಕ್ಕೆ ಜಾನ್ವಿ ಕಪೂರ್ ಅವರು ಇತ್ತೀಚೆಗೆ ಹಾಜರಿ ಹಾಕಿದ್ದರು. ಆ ವೇಳೆ ಅವರು ಧರಿಸಿದ್ದ ಕಪ್ಪು ಬಣ್ಣದ ಕಾಸ್ಟ್ಯೂಮ್ ಗಮನ ಸೆಳೆದಿದೆ. ಗ್ಲಾಮರಸ್ ಬಟ್ಟೆ ಧರಿಸಿ ಅವರು ಮಿಂಚಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ.

ಜಾನ್ವಿ ಕಪೂರ್ ನಟನೆಯ ‘ಗುಡ್ ಲಕ್ ಜೆರಿ’ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ಜುಲೈ 29ರಂದು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಮೂಲಕ ಈ ಚಿತ್ರ ಪ್ರಸಾರ ಆಗಲಿದೆ. ‘ಮಿಲಿ’, ‘ಮಿಸ್ಟರ್ ಆ್ಯಂಡ್ ಮಿಸಸ್ ಮಹಿ’ ಮುಂತಾದ ಸಿನಿಮಾಗಳಲ್ಲೂ ಅವರು ನಟಿಸುತ್ತಿದ್ದಾರೆ.



















