Gandhada Gudi: ರಮ್ಯಾ ಕೈ ಸೇರಿತು ‘ಗಂಧದ ಗುಡಿ’ ಪ್ರೀ-ರಿಲೀಸ್​ ಇವೆಂಟ್​ ಆಮಂತ್ರಣ ಪತ್ರಿಕೆ

Yuva Rajkumar | Ramya: ಅಕ್ಟೋಬರ್​ 28ರಂದು ‘ಗಂಧದ ಗುಡಿ’ ಡಾಕ್ಯುಮೆಂಟರಿ ಬಿಡುಗಡೆ ಆಗಲಿದೆ. ಅದಕ್ಕೂ ಮುನ್ನ ಅ.21ರಂದು ಅದ್ದೂರಿಯಾಗಿ ಪ್ರೀ-ರಿಲೀಸ್​ ಇವೆಂಟ್ ಮಾಡಲು ತೀರ್ಮಾನಿಸಲಾಗಿದೆ.

Gandhada Gudi: ರಮ್ಯಾ ಕೈ ಸೇರಿತು ‘ಗಂಧದ ಗುಡಿ’ ಪ್ರೀ-ರಿಲೀಸ್​ ಇವೆಂಟ್​ ಆಮಂತ್ರಣ ಪತ್ರಿಕೆ
ರಮ್ಯಾ, ಯುವ ರಾಜ್​ಕುಮಾರ್​, ಪುನೀತ್​
Follow us
TV9 Web
| Updated By: ಮದನ್​ ಕುಮಾರ್​

Updated on:Oct 10, 2022 | 12:01 PM

ಡಾ. ರಾಜ್​ಕುಮಾರ್​ ಕುಟುಂಬದ ಜೊತೆಗೆ ನಟಿ ರಮ್ಯಾ ಅವರಿಗೆ ವಿಶೇಷ ಒಡನಾಟ ಇದೆ. ರಮ್ಯಾ (Ramya) ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದೇ ಪಾರ್ವತಮ್ಮ ರಾಜ್​ಕುಮಾರ್​ ನಿರ್ಮಾಣದ ‘ಅಭಿ’ ಸಿನಿಮಾ ಮೂಲಕ. ಚೊಚ್ಚಲ ಚಿತ್ರದಲ್ಲಿ ಪುನೀತ್​ ರಾಜ್​ಕುಮಾರ್​ ಜತೆ ನಟಿಸುವ ಭಾಗ್ಯ ಅವರದ್ದಾಗಿತ್ತು. ಈಗ ಪುನೀತ್​ ಅವರ ಗಂಧದ ಗುಡಿ’ (Gandhada Gudi) ಸಾಕ್ಷ್ಯಚಿತ್ರದ ಪ್ರೀ-ರಿಲೀಸ್​ ಇವೆಂಟ್​ಗೆ ರಮ್ಯಾ ಅವರನ್ನು ಆಹ್ವಾನಿಸಲಾಗಿದೆ. ಯುವ ರಾಜ್​ಕುಮಾರ್​ ಅವರು ಆಮಂತ್ರಣ ಪತ್ರಿಕೆ ನೀಡಿದ್ದಾರೆ. ಈ ವೇಳೆ ಕ್ಲಿಕ್ಕಿಸಿದ ಫೋಟೋವನ್ನು ಸೋಶಿಯಲ್​ ಮೀಡಿಯಾದಲ್ಲಿ ರಮ್ಯಾ ಶೇರ್​ ಮಾಡಿಕೊಂಡಿದ್ದಾರೆ. ಜತೆಗೆ ಯುವ ರಾಜ್​ಕುಮಾರ್ (Yuva Rajkumar) ಬಗ್ಗೆ ವಿಶೇಷ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಅಕ್ಟೋಬರ್​ 28ರಂದು ‘ಗಂಧದ ಗುಡಿ’ ಡಾಕ್ಯುಮೆಂಟರಿ ಬಿಡುಗಡೆ ಆಗಲಿದೆ. ಅದಕ್ಕೂ ಮುನ್ನ ಅದ್ದೂರಿಯಾಗಿ ಪ್ರೀ-ರಿಲೀಸ್​ ಇವೆಂಟ್ ಮಾಡಲು ತೀರ್ಮಾನಿಸಲಾಗಿದೆ. ಅದಕ್ಕಾಗಿ ಸಕಲ ತಯಾರಿ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಭಾರತೀಯ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಹಾಜರಿ ಹಾಕಲಿದ್ದಾರೆ. ಈಗ ರಮ್ಯಾ ಅವರ ಮನೆಗೂ ಆಮಂತ್ರಣ ಪತ್ರಿಕೆ ತಲುಪಿದೆ. ‘ಗಂಧದ ಗುಡಿ’ ಪ್ರೀ-ರಿಲೀಸ್​ ಇವೆಂಟ್​ನ ವೇದಿಕೆಯಲ್ಲಿ ರಮ್ಯಾ ಡ್ಯಾನ್ಸ್​ ಮಾಡಬಹುದು ಎಂಬ ನಿರೀಕ್ಷೆ ಕೂಡ ಇದೆ.

ಆಹ್ವಾನ ನೀಡಲು ಬಂದ ಯುವ ರಾಜ್​ಕುಮಾರ್​ ಬಗ್ಗೆ ರಮ್ಯಾ ಅವರು ವಿಶೇಷ ಮಾತುಗಳನ್ನು ಹಂಚಿಕೊಂಡಿದ್ದಾರೆ. ‘ಯುವ ರಾಜ್​ಕುಮಾರ್​ ಈಗ ಚಿಕ್ಕ ಹುಡುಗನಲ್ಲ. ಅಪ್ಪು ಪರಂಪರೆಯನ್ನು ಆತ ಮುಂದುವರಿಸಿಕೊಂಡು ಹೋಗುತ್ತಿದ್ದಾನೆ’ ಎಂದು ರಮ್ಯಾ ಅವರು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ‘ಹೊಂಬಾಳೆ ಫಿಲ್ಮ್ಸ್​’ ನಿರ್ಮಾಣದ ಹೊಸ ಸಿನಿಮಾಕ್ಕೆ ಯುವ ರಾಜ್​ಕುಮಾರ್​ ಹೀರೋ ಆಗಿದ್ದಾರೆ.

ಇದನ್ನೂ ಓದಿ
Image
Gandhada Gudi: ‘ಗಂಧದ ಗುಡಿ’ ಟ್ರೇಲರ್ ರಿಲೀಸ್ ವೇಳೆ ಅಶ್ವಿನಿ ಪುನೀತ್​ ರಾಜ್​ಕುಮಾರ್ ಹೇಳಿದ್ದು ಒಂದೇ ಮಾತು..
Image
Gandhada Gudi: ಅ.21ರಂದು ‘ಗಂಧದ ಗುಡಿ’ ಪ್ರೀ-ರಿಲೀಸ್​ ಇವೆಂಟ್​; ವಿಶೇಷವಾಗಿ ಸಿದ್ಧವಾಗಿದೆ ಆಮಂತ್ರಣ ಪತ್ರಿಕೆ
Image
Gandhada Gudi: ಪುನೀತ್​ ಎಕ್ಸ್​ಕ್ಲೂಸಿವ್​ ವಿಡಿಯೋ: ‘ಗಂಧದ ಗುಡಿ’ ಶೂಟಿಂಗ್​ ವೇಳೆ ಹೇಗಿತ್ತು ನೋಡಿ ಅಪ್ಪು ನಗುವಿನ ಕ್ಷಣ
Image
ತಿಂಗಳಿಗೂ ಮೊದಲೇ ಆರಂಭವಾಯ್ತು ಅಪ್ಪು ಕನಸಿನ ಪ್ರಾಜೆಕ್ಟ್​ ‘ಗಂಧದ ಗುಡಿ’ ಸೆಲೆಬ್ರೇಷನ್​

ವಿಶೇಷವಾಗಿದೆ ಆಮಂತ್ರಣ ಪತ್ರಿಕೆ:

‘ಗಂಧದ ಗುಡಿ’ ಪ್ರೀ-ರಿಲೀಸ್​ ಕಾರ್ಯಕ್ರಮಕ್ಕೆ ಭಾರತೀಯ ಚಿತ್ರರಂಗದ ಗಣ್ಯಾತಿಗಣ್ಯರನ್ನು ಆಹ್ವಾನಿಸಲಾಗುತ್ತಿದೆ. ಈಗಾಗಲೇ ಅನೇಕರಿಗೆ ಆಮಂತ್ರಣ ಪತ್ರಿಕೆ ತಲುಪಿದೆ. ಸಂಪೂರ್ಣ ಮರದಿಂದ ಮಾಡಲಾದ ಈ ಪತ್ರಿಕೆಯಲ್ಲಿ ಪುನೀತ್​ ರಾಜ್​ಕುಮಾರ್​ ಅವರ ಪುತ್ಥಳಿ ಇದೆ. ಜೊತೆಗೆ ಶ್ರೀಗಂಧದ ತುಂಡಿನ ಮೇಲೆ ಪುನೀತ್ ರಾಜ್​ಕುಮಾರ್​ ಎಂದು ಬರೆದಿರುವ ಹಸ್ತಾಕ್ಷರ ಇದೆ. ಅಮಿತಾಭ್ ಬಚ್ಚನ್​, ರಜನಿಕಾಂತ್​ ಮುಂತಾದ ಗಣ್ಯರಿಗೆ ಇದೇ ಆಹ್ವಾನ ಪತ್ರಿಕೆಯನ್ನು ನೀಡಲಾಗಿದೆ.

ಅ.9ರಂದು ಬೆಂಗಳೂರಿನಲ್ಲಿ ‘ಗಂಧದ ಗುಡಿ’ ಟ್ರೇಲರ್​ ಲಾಂಚ್​ ಮಾಡಲಾಯಿತು. ಡಾ. ರಾಜ್​ಕುಮಾರ್​ ಕುಟುಂಬದ ಸದಸ್ಯರು ಜೊತೆಯಾಗಿ ಸೇರಿ ಟ್ರೇಲರ್​ ಅನಾವರಣಗೊಳಿಸಿದರು. ಚಿತ್ರಮಂದಿರದಲ್ಲಿ ‘ಗಂಧದ ಗುಡಿ’ ಸಾಕ್ಷ್ಯಚಿತ್ರವನ್ನು ನೋಡಲು ಎಲ್ಲರೂ ಕಾದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂತಾದವರು ಈ ಟ್ರೇಲರ್​ ಬಗ್ಗೆ ಟ್ವೀಟ್​ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:01 pm, Mon, 10 October 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ