Gandhada Gudi: ಅ.21ರಂದು ‘ಗಂಧದ ಗುಡಿ’ ಪ್ರೀ-ರಿಲೀಸ್​ ಇವೆಂಟ್​; ವಿಶೇಷವಾಗಿ ಸಿದ್ಧವಾಗಿದೆ ಆಮಂತ್ರಣ ಪತ್ರಿಕೆ

Gandhada Gudi pre-release event: ‘ಗಂಧದ ಗುಡಿ’ ಪ್ರೀ-ರಿಲೀಸ್​ ಕಾರ್ಯಕ್ರಮಕ್ಕೆ ಭಾರತೀಯ ಚಿತ್ರರಂಗದ ಗಣ್ಯಾತಿಗಣ್ಯರನ್ನು ಆಹ್ವಾನಿಸಲಾಗುತ್ತಿದೆ. ಈಗಾಗಲೇ ಅನೇಕರಿಗೆ ಆಮಂತ್ರಣ ಪತ್ರಿಕೆ ತಲುಪಿದೆ.

Gandhada Gudi: ಅ.21ರಂದು ‘ಗಂಧದ ಗುಡಿ’ ಪ್ರೀ-ರಿಲೀಸ್​ ಇವೆಂಟ್​; ವಿಶೇಷವಾಗಿ ಸಿದ್ಧವಾಗಿದೆ ಆಮಂತ್ರಣ ಪತ್ರಿಕೆ
‘ಗಂಧದ ಗುಡಿ’ ಪ್ರೀ-ರಿಲೀಸ್ ಇವೆಂಟ್ ಆಮಂತ್ರಣ ಪತ್ರಿಕೆ
Follow us
TV9 Web
| Updated By: ಮದನ್​ ಕುಮಾರ್​

Updated on: Oct 09, 2022 | 2:55 PM

ಬಹುನಿರೀಕ್ಷಿತ ‘ಗಂಧದ ಗುಡಿ’ (Gandhada Gudi) ಸಾಕ್ಷ್ಯಚಿತ್ರ ಹೊಸ ಸೆನ್ಸೇಷನ್​ ಸೃಷ್ಟಿ ಮಾಡಿದೆ. ಇಂದು (ಅ.9) ಬೆಳಗ್ಗೆ ಅದ್ದೂರಿಯಾಗಿ ಇದರ ಟ್ರೇಲರ್​ ಬಿಡುಗಡೆ ಮಾಡಲಾಗಿದೆ. ಅಶ್ವಿನಿ ಪುನೀತ್ ರಾಜ್​ಕುಮಾರ್ (Ashwini Puneeth Rajkumar)​, ರಾಘವೇಂದ್ರ ರಾಜ್​ಕುಮಾರ್​, ಯುವ ರಾಜ್​ಕುಮಾರ್​ ಸೇರಿದಂತೆ ಡಾ. ರಾಜ್​ ಕುಟುಂಬದ ಹಲವರು ಜತೆಯಾಗಿ ಸೇರಿ ‘ಗಂಧದ ಗುಡಿ’ ಟ್ರೇಲರ್​ (Gandhada Gudi Trailer) ಅನಾವರಣ ಮಾಡಿದ್ದಾರೆ. ಅಕ್ಟೋಬರ್​ 28ರಂದು ಈ ಡಾಕ್ಯುಮೆಂಟರಿ ಬಿಡುಗಡೆ ಆಗಲಿದೆ. ಅದಕ್ಕೂ ಮುನ್ನ ಅದ್ದೂರಿಯಾಗಿ ಪ್ರೀ-ರಿಲೀಸ್​ ಇವೆಂಟ್​ ಮಾಡಲು ತೀರ್ಮಾನಿಸಲಾಗಿದೆ. ಅ.21ರಂದು ನಡೆಯಲಿರುವ ಈ ಕಾರ್ಯಕ್ರಮಕ್ಕಾಗಿ ಮಾಡಿಸಿರುವ ಆಮಂತ್ರಣ ಪತ್ರಿಕೆ ಗಮನ ಸೆಳೆಯುತ್ತಿದೆ. ಪುನೀತ್​ ರಾಜ್​ಕುಮಾರ್​ ಅವರ ಪುತ್ಥಳಿ ಇರುವ ಈ ಆಹ್ವಾನ ಪತ್ರಿಕೆ ವಿಡಿಯೋ ನೋಡಿ ಅಭಿಮಾನಿಗಳು ವಾವ್​ ಎನ್ನುತ್ತಿದ್ದಾರೆ.

ಕರ್ನಾಟಕದ ಅರಣ್ಯ ಸಂಪತ್ತು, ವನ್ಯಜೀವಿಗಳ ಬದುಕು ಸೇರಿದಂತೆ ಅನೇಕ ಸಂಗತಿಗಳನ್ನು ‘ಗಂಧದ ಗುಡಿ’ ಸಾಕ್ಷ್ಯಚಿತ್ರದಲ್ಲಿ ಸೆರೆಹಿಡಿಯಲಾಗಿದೆ. ಇದನ್ನು ಇಡೀ ಜಗತ್ತಿಗೆ ತೋರಿಸುವ ಸಮಯ ಕೂಡ ಹತ್ತಿರವಾಗಿದೆ. ಈ ಪ್ರಾಜೆಕ್ಟ್​ ಮೇಲೆ ಪುನೀತ್ ರಾಜ್​​ಕುಮಾರ್​ ಅವರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ತುಂಬ ಕಾಳಜಿ ವಹಿಸಿ ಅವರು ಇದರಲ್ಲಿ ಭಾಗಿ ಆಗಿದ್ದರು. ಅದರ ಕೆಲಸಗಳು ಪೂರ್ಣಗೊಳ್ಳುವುದಕ್ಕೂ ಮುನ್ನವೇ ಅವರು ಇಹಲೋಕ ತ್ಯಜಿಸಿದ್ದು ತೀವ್ರ ನೋವಿನ ಸಂಗತಿ.

ಪುನೀತ್​ ರಾಜ್​ಕುಮಾರ್​ ಇಂದು ಭೌತಿಕವಾಗಿ ಇಲ್ಲದೇ ಇರಬಹುದು. ಆದರೆ ಸಾಮಾಜಿಕ ಕೆಲಸ ಮತ್ತು ಸಿನಿಮಾಗಳ ಮೂಲಕ ಅವರ ಅಭಿಮಾನಿಗಳ ಎದೆಯಲ್ಲಿ ಎಂದಿಗೂ ಜೀವಂತವಾಗಿ ಇರುತ್ತಾರೆ. ಜನರು ಅವರನ್ನು ಆರಾಧಿಸಲು ‘ಗಂಧದ ಗುಡಿ’ ಸಾಕ್ಷ್ಯಚಿತ್ರ ಕೂಡ ಕಾರಣವಾಗುತ್ತಿದೆ. ಚಿತ್ರಮಂದಿರದಲ್ಲಿ ಈ ಡಾಕ್ಯುಮೆಂಟರಿ ರಿಲೀಸ್​ ಆಗಲಿದೆ.

ಇದನ್ನೂ ಓದಿ
Image
Gandhada Gudi: ಪುನೀತ್ ರಾಜ್​ಕುಮಾರ್ ಕೊನೆಯ ಚಿತ್ರ ಗಂಧದ ಗುಡಿ ಟ್ರೇಲರ್ ನೋಡಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್
Image
Gandhada Gudi Trailer Release: ಅದ್ಧೂರಿಯಾಗಿ ರಿಲೀಸ್ ಆದ ಗಂಧದಗುಡಿ ಟ್ರೈಲರ್ ​​
Image
Gandhada Gudi: ಪುನೀತ್​ ಎಕ್ಸ್​ಕ್ಲೂಸಿವ್​ ವಿಡಿಯೋ: ‘ಗಂಧದ ಗುಡಿ’ ಶೂಟಿಂಗ್​ ವೇಳೆ ಹೇಗಿತ್ತು ನೋಡಿ ಅಪ್ಪು ನಗುವಿನ ಕ್ಷಣ
Image
‘ಗಂಧದ ಗುಡಿ’ಯಲ್ಲಿ ಇರುವ ಹಾಡುಗಳೆಷ್ಟು? ಅಜನೀಶ್ ಲೋಕನಾಥ್ ನೀಡಿದರು ಮಾಹಿತಿ

ಅ.21ರಂದು ನಡೆಯುವ ‘ಗಂಧದ ಗುಡಿ’ ಪ್ರೀ-ರಿಲೀಸ್​ ಕಾರ್ಯಕ್ರಮಕ್ಕೆ ಭಾರತೀಯ ಚಿತ್ರರಂಗದ ಗಣ್ಯಾತಿಗಣ್ಯರನ್ನು ಆಹ್ವಾನಿಸಲಾಗುತ್ತಿದೆ. ಈಗಾಗಲೇ ಅನೇಕರಿಗೆ ಆಮಂತ್ರಣ ಪತ್ರಿಕೆ ತಲುಪಿದೆ. ಸಂಪೂರ್ಣ ಮರದಿಂದ ಮಾಡಲಾದ ಈ ಪತ್ರಿಕೆಯಲ್ಲಿ ಪುನೀತ್​ ರಾಜ್​ಕುಮಾರ್​ ಅವರ ಪುತ್ಥಳಿ ಇದೆ. ಜೊತೆಗೆ ಶ್ರೀಗಂಧದ ತುಂಡಿನ ಮೇಲೆ ಪುನೀತ್ ರಾಜ್​ಕುಮಾರ್​ ಎಂದು ಬರೆದಿರುವ ಹಸ್ತಾಕ್ಷರ ಇದೆ. ಅಮಿತಾಭ್ ಬಚ್ಚನ್​, ರಜನಿಕಾಂತ್​ ಮುಂತಾದ ಗಣ್ಯರಿಗೆ ಇದೇ ಆಹ್ವಾನ ಪತ್ರಿಕೆಯನ್ನು ನೀಡಲಾಗಿದೆ.

ಟ್ರೇಲರ್​ ಬಿಡುಗಡೆ ಆಗುತ್ತಿದ್ದಂತೆಯೇ ‘ಗಂಧದ ಗುಡಿ’ ಮೇಲೆ ಇದ್ದ ನಿರೀಕ್ಷೆ ದುಪ್ಪಟ್ಟಾಗಿದೆ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕರು ಈ ಕುರಿತು ಟ್ವೀಟ್​ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ