Filmfare Awards: ಧನಂಜಯ್​, ಯಜ್ಞಾ ಶೆಟ್ಟಿಗೆ ಅತ್ಯುತ್ತಮ ನಟ-ನಟಿ ಫಿಲ್ಮ್​ಫೇರ್​ ಗರಿ; ಪುನೀತ್​ಗೆ ಜೀವಮಾನ ಸಾಧನೆ ಪ್ರಶಸ್ತಿ

67th Filmfare Awards: ಝಗಮಗಿಸುವ ವೇದಿಕೆಯಲ್ಲಿ ಫಿಲ್ಮ್​ಫೇರ್ ಸಮಾರಂಭ ಜರುಗಿದೆ. ಧನಂಜಯ್​, ಯಜ್ಞಾ ಶೆಟ್ಟಿ, ರಾಜ್​ ಬಿ. ಶೆಟ್ಟಿ ಮುಂತಾದವರು ಪ್ರಶಸ್ತಿ ಪಡೆದಿದ್ದಾರೆ.

Filmfare Awards: ಧನಂಜಯ್​, ಯಜ್ಞಾ ಶೆಟ್ಟಿಗೆ ಅತ್ಯುತ್ತಮ ನಟ-ನಟಿ ಫಿಲ್ಮ್​ಫೇರ್​ ಗರಿ; ಪುನೀತ್​ಗೆ ಜೀವಮಾನ ಸಾಧನೆ ಪ್ರಶಸ್ತಿ
ಧನಂಜಯ್​, ಯಜ್ಞಾ ಶೆಟ್ಟಿ, ಪುನೀತ್​ ರಾಜ್​ಕುಮಾರ್​
Follow us
TV9 Web
| Updated By: ಮದನ್​ ಕುಮಾರ್​

Updated on: Oct 10, 2022 | 7:40 AM

ಬೆಂಗಳೂರಿನಲ್ಲಿ ಭಾನುವಾರ (ಅ.9) ರಾತ್ರಿ ಅದ್ದೂರಿಯಾಗಿ ಫಿಲ್ಮ್​ಫೇರ್​ ಪ್ರಶಸ್ತಿ (Filmfare Awards) ಪ್ರದಾನ ಸಮಾರಂಭ ಮಾಡಲಾಗಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಯ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ. ಫಿಲ್ಮ್​ಫೇರ್​ ಪ್ರಶಸ್ತಿ ಪಡೆದ ನಟ-ನಟಿಯರು, ತಂತ್ರಜ್ಞರಿಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಕನ್ನಡದಲ್ಲಿ ನಟ ಧನಂಜಯ್​ (Dhananjay) ಅವರಿಗೆ ‘ಬಡವ ರಾಸ್ಕಲ್​’ ಚಿತ್ರದಲ್ಲಿನ ಅಭಿನಯಕ್ಕಾಗಿ ‘ಅತ್ಯುತ್ತಮ ನಟ’ ಪ್ರಶಸ್ತಿ ನೀಡಲಾಗಿದೆ. ಯಜ್ಞಾ ಶೆಟ್ಟಿ (Yagna Shetty) ಅವರು ‘ಆಕ್ಟ್​ 1978’ ಸಿನಿಮಾದಲ್ಲಿನ ನಟನೆಗಾಗಿ ‘ಅತ್ಯುತ್ತಮ ನಟಿ’ ಪ್ರಶಸ್ತಿ ಪಡೆದಿದ್ದಾರೆ. ರಾಜ್​ ಬಿ. ಶೆಟ್ಟಿ ಅವರಿಗೆ ‘ಗರುಡ ಗಮನ ವೃಷಭ ವಾಹನ’ ಚಿತ್ರಕ್ಕಾಗಿ ‘ಅತ್ಯುತ್ತಮ ನಿರ್ದೇಶನ’ ಪ್ರಶಸ್ತಿ ನೀಡಲಾಗಿದೆ.

ಕನ್ನಡದಲ್ಲಿ ಫಿಲ್ಮ್​ಫೇರ್ ಪ್ರಶಸ್ತಿ ಪಡೆದವರ ಪಟ್ಟಿ:

ಇದನ್ನೂ ಓದಿ
Image
‘ದಿ ಕಾಶ್ಮೀರ್​ ಫೈಲ್ಸ್​ ಚಿತ್ರ ಆಸ್ಕರ್​ಗೆ ಹೋದ್ರೆ ಭಾರತಕ್ಕೆ ಮುಜುಗರ; ಇದು ದ್ವೇಷ ಹಬ್ಬಿಸುವ ಕಸ’: ಕೇಳಿಬಂತು ಕಟು ಟೀಕೆ
Image
Aamir Khan: ವಿರೋಧದ ನಡುವೆಯೂ ‘ಆಸ್ಕರ್​’ ಗಮನ ಸೆಳೆದ ‘ಲಾಲ್​ ಸಿಂಗ್​ ಚಡ್ಡಾ’; ಆಮಿರ್​ ಖಾನ್​ ಫ್ಯಾನ್ಸ್​ ಖುಷ್​
Image
ಪತ್ನಿಗಾಗಿ ನಟನ ಕೆನ್ನೆಗೆ ಬಾರಿಸಿದ್ದ ವಿಲ್​ ಸ್ಮಿತ್​ಗೆ ಆಸ್ಕರ್​ನಿಂದ 10 ವರ್ಷ ಬ್ಯಾನ್​; ಅಕಾಡೆಮಿ ನಿರ್ಧಾರ
Image
ಆಸ್ಕರ್​ ವೇದಿಕೆಯಲ್ಲಿ ನಟ ಕ್ರಿಸ್​ ರಾಕ್​ ಕೆನ್ನೆಗೆ ಹೊಡೆದ ವಿಲ್​ ಸ್ಮಿತ್​ ಬಗ್ಗೆ ತಾಯಿಯ ಪ್ರತಿಕ್ರಿಯೆ ಏನು?

ಅತ್ಯುತ್ತಮ ನಟ: ಧನಂಜಯ್​ (ಬಡವ ರಾಸ್ಕಲ್​)

ಅತ್ಯುತ್ತಮ ನಟಿ: ಯಜ್ಞಾ ಶೆಟ್ಟಿ (ಆಕ್ಟ್​ 1978)

ಅತ್ಯುತ್ತಮ ನಿರ್ದೇಶನ: ರಾಜ್​ ಬಿ. ಶೆಟ್ಟಿ (ಗರುಡ ಗಮನ ವೃಷಭ ವಾಹನ)

ಅತ್ಯುತ್ತಮ ಪೋಷಕ ನಟ: ಬಿ. ಸುರೇಶ (ಆಕ್ಟ್​ 1978)

ಅತ್ಯುತ್ತಮ ಸಿನಿಮಾ: ಆಕ್ಟ್​ 1978 (ನಿರ್ದೇಶನ ಮಂಸೋರೆ)

ಅತ್ಯುತ್ತಮ ಪೋಷಕ ನಟಿ: ಉಮಾಶ್ರೀ (ರತ್ನನ್​ ಪ್ರಪಂಚ)

ಅತ್ಯುತ್ತಮ ಸಂಗೀತ ನಿರ್ದೇಶನ: ವಾಸುಕಿ ವೈಭವ್​ (ಬಡವ ರಾಸ್ಕಲ್​)

ಅತ್ಯುತ್ತಮ ಸಾಹಿತ್ಯ: ಜಯಂತ ಕಾಯ್ಕಿಣಿ (ಆಕ್ಟ್​ 1978)

ಅತ್ಯುತ್ತಮ ಗಾಯಕ: ರಘು ದೀಕ್ಷಿತ್​ (ನಿನ್ನ ಸನಿಹಕೆ)

ಅತ್ಯುತ್ತಮ ಗಾಯಕಿ: ಅನುರಾಧಾ ಭಟ್​ (ಬಿಚ್ಚುಗತ್ತಿ)

ಅತ್ಯುತ್ತಮ ಛಾಯಾಗ್ರಹಣ: ಶ್ರೀಶಾ ಕುದುವಳ್ಳಿ (ಬಡವ ರಾಸ್ಕಲ್​)

ಅತ್ಯುತ್ತಮ ನೃತ್ಯ ನಿರ್ದೇಶನ: ಜಾನಿ ಮಾಸ್ಟರ್​ (ಫೀಲ್​ ದ ಪವರ್​- ಯುವರತ್ನ)

ಜೀವಮಾನ ಸಾಧನೆ ಪ್ರಶಸ್ತಿ: ಪುನೀತ್​ ರಾಜ್​ಕುಮಾರ್​

ಅತ್ಯುತ್ತಮ ನಟಿ ವಿಮರ್ಶಕರ ಆಯ್ಕೆ: ಮಿಲನಾ ನಾಗರಾಜ್​, ಅಮೃತಾ ಅಯ್ಯಂಗಾರ್​

ಅತ್ಯುತ್ತಮ ನಟ ವಿಮರ್ಶಕರ ಆಯ್ಕೆ: ಡಾರ್ಲಿಂಗ್​ ಕೃಷ್ಣ (ಲವ್​ ಮಾಕ್ಟೇಲ್​)

ಚಿತ್ರರಂಗದಲ್ಲಿ ಫಿಲ್ಮ್​ಫೇರ್​ ಪ್ರಶಸ್ತಿಗೆ ಸಖತ್​ ಮನ್ನಣೆ ಇದೆ. ಈ ಅವಾರ್ಡ್​ ಪಡೆಯಬೇಕು ಎಂಬುದು ಎಲ್ಲ ನಟ-ನಟಿಯರ, ತಂತ್ರಜ್ಞರ ಕನಸಾಗಿರುತ್ತದೆ. ಹಲವು ದಶಕಗಳಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈವರೆಗೂ ಬೇರೆ ಬೇರೆ ಕಡೆಗಳಲ್ಲಿ ನಡೆಯುತ್ತಿದ್ದ ಪ್ರಶಸ್ತಿ ಪ್ರದಾನ ಸಮಾರಂಭ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆಯೋಜನೆಗೊಂಡಿದ್ದು ವಿಶೇಷ.

67ನೇ ಸಾಲಿನ ಫಿಲ್ಮ್​ಫೇರ್​ ಸಮಾರಂಭ ಮಾದಾವರ ಬಳಿಯ ಬಿಐಇಸಿ ಮೈದಾನದಲ್ಲಿ ನಡೆಯಿತು. ಝಗಮಗಿಸುವ ವೇದಿಕೆ ಮೇಲೆ ಅನೇಕ ಮನರಂಜನಾ ಕಾರ್ಯಕ್ರಮಗಳು ನಡೆದವು. ಪೂಜಾ ಹೆಗ್ಡೆ, ಮೃಣಾಲ್​ ಠಾಕೂರ್​, ಕೃತಿ ಶೆಟ್ಟಿ ಮುಂತಾದ ಕಲಾವಿದರು ಡ್ಯಾನ್ಸ್​ ಮಾಡಿದರು. ರಮೇಶ್​ ಅರವಿಂದ್​ ಹಾಗೂ ದಿಗಂತ್​ ಈ ಕಾರ್ಯಕ್ರಮ ನಡೆಸಿಕೊಟ್ಟರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.